ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್ ಕಳಿಸಿದ್ದ ಅನ್ನೋ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕೊಂದ ಆರೋಪದಲ್ಲಿ ದರ್ಶನ್ ಅಂದರ್ ಆಗಿದ್ದಾರೆ. ಆದ್ರೆ ಈಗ ಈ ಸಂಕಷ್ಟದಿಂದ ಹೇಗಾದ್ರು ಮಾಡಿ ಹೊರ ಬರಬೇಕು ಈ ಕೊಲೆ ಪ್ರಕರಣದಲ್ಲಿ ಸಿಕ್ಕಿರೋ ಸಾಕ್ಷ್ಯಗಳನ್ನ ನೋಡಿದ್ರೆ ದರ್ಶನ್ ಬಚಾವ್ ಆಗೋಕೆ ಸಾಧ್ಯವೇ ಇಲ್ಲ.
ಸ್ಟಾರ್ ಹೋಟೆಲ್ ವಾಸ್ತವ್ಯ, ಐಶಾರಾಮಿ ಟ್ರೀಟ್ಮೆಂಟ್, ಕೋಟಿ ಬೆಲೆ ಕಾರಿನಲ್ಲಿ ಓಡಾಟ. ಕೈಗೆ ಕಾಲಿಗೆ ಆಳು ಕಾಳು. ಜೈ ಅಂತ ಜೈಕಾರ ಹಾಕೋಕೆ ಒಂದಿಷ್ಟು ಗುಂಪು, ಕುಡಿದು ಮಜಾ ಮಾಡೋಕೆ ಅಕ್ಕ ಪಕ್ಕ ಇರುತ್ತಿದ್ದ ಕುಡುಕ ಸ್ನೇಹಿತರು. ಸಿನಿಮಾ ಶೂಟಿಂಗ್ ಮುಗಿಯೋದೇ ತಡ ಪಾರ್ಟಿ ಮೂಡ್ಗೆ ಬಂದು ಮಜವಾದ ಲೈಫ್ ನಡೆಸುದ್ದ ನಟ ದರ್ಶನ್.. ಆದ್ರೆ ಈಗ ದರ್ಶನ್ ಜೀವನ ಜೈಲಿನಲ್ಲಿ. ಐಶಾರಾಮಿ ಬದುಕು ಕಣ್ಮರೆ ಆಗಿದೆ. ಫೈವ್ ಸ್ಟಾರ್ ಹೋಟೆಲ್ ಊಟ ಇಲ್ಲ. ಕೋಟಿ ಕೋಟಿ ಬೆಲೆಯ ಕಾರಿನಲ್ಲಿ ಓಡೋಟ ಇಲ್ಲ. ಜೈಕಾರದ ಸದ್ದು ಕೇಳುತ್ತಿಲ್ಲ. ಜೈಲಿನ ಊಟ. ಜೈಲು ಕಾರಿಡಾರ್ನಲ್ಲೇ ಓಡಾಟ. ಸಾಕೋ ಸಾಕು ಈ ಜೈಲು ಜೀವನ ಸಾಕು ಎನ್ನುತ್ತಿದ್ದಾರೆ ನಟ ದರ್ಶನ್. ಹೇಗಾದ್ರು ಮಾಡಿ ಜೈಲಿನಿಂದ ಹೊರ ಬರಬೇಕು ಅಂತ ಕಾಯುತ್ತಿದ್ದರೆ ನಟ ದರ್ಶನ್.. ಇದಕ್ಕೆ ಯಾವೆಲ್ಲಾ ಮಾರ್ಗಗಳಿವೆಯೋ ಎಲ್ಲವನ್ನೂ ಹುಡುಕುತ್ತಿದೆ ನಟ ದರ್ಶನ್ ಕುಟುಂಬ..
ರೇಣುಕಾ ಸ್ವಾಮಿ ಕುಟಂಬದ ಜೊತೆ ಸಂಧಾನಕ್ಕೆ ಪ್ಲಾನ್ ಮಾಡಿದ್ರಾ ದರ್ಶನ್..?: ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್ ಕಳಿಸಿದ್ದ ಅನ್ನೋ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕೊಂದ ಆರೋಪದಲ್ಲಿ ದರ್ಶನ್ ಅಂದರ್ ಆಗಿದ್ದಾರೆ. ಆದ್ರೆ ಈಗ ಈ ಸಂಕಷ್ಟದಿಂದ ಹೇಗಾದ್ರು ಮಾಡಿ ಹೊರ ಬರಬೇಕು ಈ ಕೊಲೆ ಪ್ರಕರಣದಲ್ಲಿ ಸಿಕ್ಕಿರೋ ಸಾಕ್ಷ್ಯಗಳನ್ನ ನೋಡಿದ್ರೆ ದರ್ಶನ್ ಬಚಾವ್ ಆಗೋಕೆ ಸಾಧ್ಯವೇ ಇಲ್ಲ, ಇನ್ನಾರು ತಿಂಗಳು ದರ್ಶನ್‌ಗೆ ಬೇಲ್ ಕೂಡ ಸಿಗಲ್ಲ ಎನ್ನಲಾಗ್ತಿದೆ. ಆದ್ರೆ ಈಗ ದರ್ಶನ್ ಜೈಲಿನಿಂದ ಹೊರ ಬರೋಕೆ ಇರೋ ಒಂದೇ ಒಂದು ಮಾರ್ಗ ಹುಡುಕಿದ್ದಾಂತೆ. ಅದು ರೇಣುಕಾಸ್ವಾಮಿ ಕುಟುಂಬದ ಜೊತೆ ಸಂಧಾನ. ಈಗ ಆ ಸಂಧಾನಕ್ಕೂ ದರ್ಶನ್ ಮುಂದಾಗಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.
undefined
ರೇಣುಕಾಸ್ವಾಮಿ ಕುಟುಂಬದ ಜೊತೆ ದರ್ಶನ್ ಸಂಧಾನ ಅಸಾಧ್ಯ: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ರನ್ನ ಬಚಾವ್ ಮಾಡೋಕೆ ಸಾಧ್ಯವೇ ಇಲ್ಲ. ಚಾರ್ಜ್ ಶೀಟ್ನಲ್ಲಿ ಬರೋ ತಪ್ಪುಗಳನ್ನ ಹೆಕ್ಕಿ ದರ್ಶನ್ರನ್ನ ಈ ಕೇಸ್ನಿಂದ ಕುಲಾಸೆ ಮಾಡಿಸೋದಕ್ಕೆ ಬಲೆ ಹೆಣೆಯಲಾಗಿದೆ. ಆದ್ರೆ ಈ ಕೇಸ್ನ ಇನ್ವೆಸ್ಟಿಕೇಷನ್ ಮಾಡುತ್ತಿರೋ ಪೊಲೀಸರ ತಂಡ ದರ್ಶನ್ ಎಲ್ಲೂ ತಪ್ಪಿಸಿಕೊಳ್ಳಲಾಗಂತೆ ಸಾಕ್ಷ್ಯಗಳನ್ನ ಹುಡುಕಿದ್ದಾರಂತೆ. ಈ ಮಧ್ಯೆ ದರ್ಶನ್ ರೇಣುಕಾ ಸ್ವಾಮಿ ಕುಟುಂಬದ ಜೊತೆ ಸಂಧಾನ ಮಾಡಿಕೊಂಡು ಒಂದಷ್ಟು ಪರಿಹಾರ ಕೊಟ್ಟು ಕೇಸ್ನಿಂದ ಬಚಾವ್ ಆಗೋ ಬಗ್ಗೆಯೂ ಯೋಚನೆ ಮಾಡಿದ್ದಾರಂತೆ. ಅದಕ್ಕಾಗಿ ತನ್ನ ಆತ್ಮೀಯರ ಜೊತೆ ಮಾತುಕತೆ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ಅದು ಅಸಾಧ್ಯ.. ಯಾಕಂದ್ರೆ ಇದು ಹಣ ಕೊಟ್ಟು ಸಂಧಾನ ಮಾಡಿಕೊಳ್ಳುವಂತಹ ಕೇಸ್ ಅಲ್ಲವೇ ಅಲ್ಲ..
ಕೊಲೆ ಆರೋಪಿ ದರ್ಶನ್‌ಗೆ ಬಿರಿಯಾನಿ ಕೊಡಲಾಗದು: ಕೋರ್ಟ್ ಹೇಳಿದ್ದೇನು?
ರೇಣುಕಾ ಸ್ವಾಮಿ ಕೊಲೆ ವ್ಯವಸ್ಥೆಯ ವಿರುದ್ಧ ಆದ ಪ್ರಕರಣ: ದರ್ಶನ್ ಈ ಕೊಲೆ ಕೇಸ್ನಿಂದ ಕುಲಾಸೆ ಆಗೋದಕ್ಕೆ ಮಾರ್ಗಗಳನ್ನ ಹುಡುಕುತ್ತಿದ್ದಾರೆ. ಅದರಲ್ಲಿ ಒಂದು ರೇಣುಕಾ ಸ್ವಾಮಿ ಕುಟುಂಬಕ್ಕೆ ಕೇಳಿದಷ್ಟು ದುಡ್ಡು ಕೊಟ್ಟು ಅವರ ಬಾಯಿ ಮುಚ್ಚಿಸೋದು. ರೇಣುಕಾ ಸ್ವಾಮಿ ಫ್ಯಾಮಿಲಿಗೆ ಹಣ ಕೊಟ್ಟು ಅವರ ಬಾಯಿ ಮುಚ್ಚಿಸ ಬಹುದು. ಆದ್ರೆ ಈ ಕೇಸ್ನಿಂದ ದರ್ಶನ್ ಬಚಾವ್ ಆಗೋದು ಸುಲಭ ಅಲ್ಲ. ಯಾಕಂದ್ರೆ ಇದು ಸರ್ಕಾರ ಮತ್ತು ನಮ್ಮ ವ್ಯವಸ್ಥೆಯ ವಿರುದ್ಧ ಆದ ಪ್ರಕರಣ. ಅತ್ಯಾಚಾರ, ಕೊಲೆಯಂತದ ಗಂಭೀರ ಪ್ರಕರಣ ಆದಾಗ ಸಂಧಾನ ಅನ್ನೋ ಮಾತೇ ಬರಲ್ಲ. ಈ ಪ್ರಕರಣಗಳನ್ನ ಸರ್ಕಾರವೇ ದಾಖಲಿಸಿಕೊಂಡು ಶಿಕ್ಷೆ ಕೊಡಿಸುತ್ತೆ. ಇಲ್ಲಿ ರೇಣುಕಾ ಸ್ವಾಮಿ ಕುಟುಂಬ ಬಂದು ಸಾಕ್ಷಿ ಹೇಳಬಹುದೇ ಹೊರದು ಸಂಧಾನ ಮಾಡಿಕೊಂಡಿದ್ದೇವೆ ಈ ಕೇಸ್ನ ಕೈ ಬಿಡಿ ಅಂತ ಹೇಳೋದಕ್ಕೆ ಅವಕಾಶವೇ ಇಲ್ಲ.
ಕೊಲೆ ಆರೋಪಿ ದರ್ಶನ್ ಜೊತೆ ಸಂಧಾನ ಅಸಾಧ್ಯ ಎಂದ ರೇಣುಕಾ ಸ್ವಾಮಿ ತಂದೆ!: ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಥಳಿಸಿ ಕೊಲೆ ಮಾಡಿದ್ದನ್ನ ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಪತ್ನಿ ಸಹನಾ ಗರ್ಭಿಣಿಯಾಗಿದ್ದು ಕುಟುಂಬಸ್ಥರ ದುಃಖ ಇನ್ನು ಕಮ್ಮಿ ಆಗಿಲ್ಲ. ಈ ಮಧ್ಯೆ ದರ್ಶನ್ ಮತ್ತು ರೇಣುಕಾ ಸ್ವಾಮಿ ಕುಟುಂಬ ಸಂಧಾನ ಮಾಡಿಕೊಳ್ಳಲಿದೆ ಅನ್ನೋ ಟಾಕ್ ಆಗಿದೆ. ಈ ಬಗ್ಗೆ ರೇಣುಕಾ ಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸಂಧಾನ ಮಾಡಿಕೊಳ್ಳುವ ಮಾತೇ ಇಲ್ಲ ಎಂದಿದ್ದಾರೆ. ಒಂದು ವೇಳೆ ದರ್ಶನ್ ನಮ್ಮ ಮನೆಗೆ ಬಂದರೆ ಬರಲಿ. ಅವತ್ತು ಏನಾಗುತ್ತದೋ ನೋಡೋಣ. ನಾವು ಯಾರನ್ನು ಶತ್ರು ಎನ್ನಲ್ಲ. ನಾವು ಎಲ್ಲರಿಗೂ ಗೌರವ ಕೊಡುತ್ತೇವೆ. ಯಾರೇ ಮನೆಗೆ ಬರ್ತೀನಿ ಅಂದ್ರು ಬನ್ನಿ ಎನ್ನುತ್ತೇವೆ. ಬಂದ್ರೆ ಬನ್ನಿ ಕೂತ್ಕೊಳಿ, ಊಟ ಮಾಡಿ ಹೋಗಿ ಅಂತೀವಿ ಅಷ್ಟೇ. ಅವರು ಬಂದು ಕ್ಷಮೆ ಕೇಳುವ ಬಗ್ಗೆ ಈಗ ಯಾಕೆ ಮಾತಾಡೋಣ ಎಂದಿದ್ದಾರೆ.
ಜೈಲಿಂದ ದರ್ಶನ್ ರಿಲೀಸ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೌಡೇಪೀರ ಲಾಲಸಾಬ!
ದರ್ಶನ್ ಗೆಳೆಯ ವಿನೋದ್ ರಾಜ್ ಕೊಟ್ಟರು.. 1 ಲಕ್ಷ ಸಹಾಯ: ಇನ್ನು ನಟ ದರ್ಶನ್ರನ್ನ ಪರಪ್ಪನ ಗಗ್ರಹಾರ ಜೈಲಿನಲ್ಲಿ ಭೇಟಿ ಆಗಿದ್ದ ಸ್ನೇಹಿತ ವಿನೋದ್ ರಾಜ್, ಇಂದು ರೇಣುಕಾಸ್ವಾಮಿ ಕುಟುಂಬವನ್ನ ಭೇಟಿ ಮಾಡಿ ಬಂದಿದ್ದಾರೆ. ರೇಣುಕಾ ಸ್ವಾಮಿ ಕುಟಂಬಕ್ಕೆ ಸಾಂತ್ವಾನ ಹೇಳಿರೋ ವಿನೋದ್ ರಾಜ್, ಒಂದು ಲಕ್ಷ ಹಣ ಸಹಾಯ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿನೋದ್ ರಾಜ್, ‘ಮನೆಗೆ ಆಧಾರ ಸ್ತಂಭವಾದ ಮಗನನ್ನು ಕಳೆದುಕೊಂಡಿದ್ದಾರೆ. ಕುಟುಂಬ ಪರಿತಪಿಸುತ್ತಿರುವ ಸ್ಥಿತಿ ಕಂಡು ಕರಳುಕಿತ್ತು ಬರ್ತಿದೆ. ನಾವು ಮನುಷ್ಯರಾಗಿದ್ದೀವಾ ಅಂತ ಮುಟ್ಟಿ ನೋಡಿಕೊಳ್ಳುವ ಕಾಲ. ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡುತ್ತಾರೆ. ಹೆಸರು, ಕೀರ್ತಿಯಲ್ಲಿರುವ ನಾವು ಎಚ್ಚರವಾಗಿರಬೇಕು ಎಂದಿದ್ದಾರೆ.