ಚಲನಚಿತ್ರ ಕಲಾವಿದರಿಗೆ ರೇಷನ್‌ ವಿತರಿಸಿದ ಲಗ್ಗೆರೆ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ

Kannadaprabha News   | Asianet News
Published : Apr 27, 2020, 08:36 AM IST
ಚಲನಚಿತ್ರ ಕಲಾವಿದರಿಗೆ ರೇಷನ್‌ ವಿತರಿಸಿದ ಲಗ್ಗೆರೆ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ

ಸಾರಾಂಶ

ಸುಮಾರು 250 ಜನ ಸಿನಿಮಾ ಕಲಾವಿದರಿಗೆ ಬೆಂಗಳೂರಿನ ಲಗ್ಗೆರೆ ವಾರ್ಡ್‌ ಮಹಾನಗರ ಪಾಲಿಗೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಮತ್ತು ಅವರ ಪತಿ ನಾರಾಯಣ ಸ್ವಾಮಿ ಪಡಿತರ ಕಿಟ್‌ ನೀಡುವ ಮೂಲಕ ಕಲಾವಿದರು ಮತ್ತು ಅವರ ಬದುಕನ್ನು ಗೌರವಿಸಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌, ಶ್ರುತಿ, ರಾಗಿಣಿ, ಸಾ.ರಾ ಗೋವಿಂದು ಮತ್ತು ಮುನಿರತ್ನ ಪೋಷಕ ಕಲಾವಿದರಿಗೆ ಆಹಾರದ ಕಿಟ್‌ ವಿತರಿಸಿದರು. ತಲಾ ಮೂವತ್ತು ಕೆ.ಜಿ.ಯ ಈ ಕಿಟ್‌ ದಿನನಿತ್ಯದ ಬಳಕೆಯ ಅಡುಗೆ ಪದಾರ್ಥಗಳನ್ನು ಒಳಗೊಂಡಿದೆ.

ಅಣ್ಣವ್ರ ಹುಟ್ಟು ಹಬ್ಬಕ್ಕೆ 'ಸಲಗ' ತಂಡದ ಸತ್ಕಾರ್ಯ; ವಿಡಿಯೋ ನೋಡಿ

ಲಗ್ಗೆರೆ ವಾರ್ಡ್‌ ಮಹಾನಗರ ಪಾಲಿಗೆ ಸದಸ್ಯರಾದ ಮಂಜುಳಾ ನಾರಾಯಣ ಸ್ವಾಮಿ ಮತ್ತು ಅವರ ಪತಿ ನಾರಾಯಣ ಸ್ವಾಮಿ ಅವರ ವಾರ್ಡಿನಲ್ಲಿ ದಿನಗೂಲಿ ಕಾರ್ಮಿಕರು ವಾಸವಿರುವ ಒಂದಿಷ್ಟೂಕಷ್ಟಪಡದೆ, ಮನೆಯಲ್ಲಿರುವಂಥ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ. ಪ್ರತಿ ದಿನ ಎಲ್ಲರ ಮನೆಗೆ ಊಟ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈಗ ಚಲನಚಿತ್ರ ಪೋಷಕ ಕಲಾವಿದರಿಗೂ ಅವರು ಸಹಾಯ ಹಸ್ತ ಚಾಚಿರುವುದು ಇಡೀ ಚಿತ್ರರಂಗದವರ ಮೆಚ್ಚುಗೆಗೆ ಕಾರಣವಾಗಿದೆ.

 

ಹಸಿದವರಿಗೆ ಆಹಾರ ವಿತರಣೆ ; ಯೂತ್‌ ಕಾಂಗ್ರೆಸ್‌ ಪ್ರೆಸಿಡೆಂಟ್‌ ವಿಷ್ಣು ಕೆ.ವಿ ಕಾರ್ಯಕ್ಕೆ ಮೆಚ್ಚುಗೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?