
ರಾಕಿ ಭಾಯ್ ಯಶ್ ಹೀರೋಯಿನ್ ಆಗಿ ‘ಗೂಗ್ಲಿ’ ಚಿತ್ರದಲ್ಲಿ, ಚಿರಂಜೀವಿ ಸರ್ಜಾ ಅಭಿನಯದ ಚಿರು ಚಿತ್ರದಲ್ಲಿ ಮಿಂಚಿರೋ ನಟಿ ಕೃತಿ ಕರಬಂಧ. ಸದ್ಯ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರೋ ಕೃತಿ ಕರಬಂಧ ಗುರುತಿಸಿಕೊಳ್ಳುತ್ತಿದ್ದಾರೆ. ಕನ್ನಡ, ಹಿಂದಿ ಮಾತ್ರವಲ್ಲದೇ ಬಹುಭಾಷಾ ನಟಿ ಎನಿಸಿಕೊಂಡಿರುವ ಕೃತಿ ಕರಬಂಧ (Kriti Kharbanda) ಅವರು ತಮಿಳು, ತೆಲುಗು ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಕನ್ನಡದ ‘ಪ್ರೇಮ್ ಅಡ್ಡ’, ‘ಗಲಾಟೆ’ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2018ರ ‘ದಳಪತಿ’ ಅವರು ಕೊನೆಯದಾಗಿ ನಟಿಸಿದ ಕನ್ನಡ ಸಿನಿಮಾ. ಕೆಲವು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನೂ ನೀಡಿದ್ದಾರೆ. ಶೂಟಿಂಗ್‌ಗೆ ಹೋಗುವಾಗ ಕೆಲವೊಂದು ಭಯಾನಕ ಅನುಭವವಗಳು ನಟರಿಗೆ ಆಗುವುದುಂಟು. ಅದೇ ಒಂದು ಶಾಕಿಂಗ್ ವಿಷಯವೊಂದನ್ನು ನಟಿ ತಿಳಿಸಿದ್ದಾರೆ. ಕನ್ನಡ ಸಿನಿಮಾವೊಂದರ ಶೂಟಿಂಗ್‌ಗಾಗಿ ಹೋಟೆಲ್‌ವೊಂದರಲ್ಲಿ ತಂಗಿದ್ದಾಗ ತಾವು ಎದುರಿಸಿದ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ವಿಡಿಯೋ ಲೀಕ್ ಬಗ್ಗೆ ನಟಿ ಮಾತನಾಡಿದ್ದಾರೆ.
ಕನ್ನಡ ಸಿನಿಮಾವೊಂದರ ಶೂಟಿಂಗ್‌ಗಾಗಿ ಹೋಟೆಲ್‌ವೊಂದರಲ್ಲಿ (Hotel) ತಂಗಿದ್ದಾಗ ತಾವು ಎದುರಿಸಿದ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಯಾವ ಸಿನಿಮಾ, ಇದು ನಡೆದದ್ದು ಎಲ್ಲಿ ಎಂದು ಬಹಿರಂಗಪಡಿಸದ ನಟಿ, ಕನ್ನಡ ಸಿನಿಮಾ ಶೂಟಿಂಗ್ ಸಮಯದಲ್ಲಿ ತಾವು ತಂಗಿದ್ದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ.ಹೋಟೆಲ್ ಕೋಣೆಗಳಲ್ಲಿ, ಡ್ರೆಸ್ಸಿಂಗ್ ರೂಮ್‌ಗಳಲ್ಲಿ, ಕೆಲವೊಂದು ಬಟ್ಟೆ ಮಳಿಗೆಗಳಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿರುವ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಮಹಿಳೆಯರು ಬಟ್ಟೆ ಬದಲಾಯಿಸುವಾಗ ಅದನ್ನು ನೋಡಿ ಖುಷಿ ಪಡುವ ವಿಕೃತ ಮನಸ್ಸುಗಳು ಇದ್ದರೆ, ಕೆಲವೊಮ್ಮೆ ಅದರ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುವುದೂ ಇದೆ. ಇಂಥದ್ದೇ ಒಂದು ಘಟನೆಯ ಕುರಿತು ನಟಿ ಹೇಳಿದ್ದಾರೆ.
ಜೈಲಿನಲ್ಲಿ ಟಾಯ್ಲೆಟ್ಗೆ, ಟೀ ಕುಡಿಯಲು ಒಂದೇ ಮಗ್ ಬಳಸಿ, ಶೌಚಾಲಯ ಕ್ಲೀನ್ ಮಾಡಿದ್ದ ಸಲ್ಮಾನ್ ಖಾನ್!
ಕನ್ನಡ ಸಿನಿಮಾ ಶೂಟಿಂಗ್ ಸಮಯದಲ್ಲಿ ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಈ ರೀತಿ ರಹಸ್ಯ ಕ್ಯಾಮೆರಾ ಇಡಲಾಗಿತ್ತು ಎಂದಿದ್ದಾರೆ. ಮಹಿಳೆಯರು ಹೊಸ ಸ್ಥಳಕ್ಕೆ ಹೋದಾಗ ಎಚ್ಚರ ವಹಿಸುವ ಅಗತ್ಯದ ಕುರಿತು ಹೇಳಿರುವ ನಟಿ, ಹೋಟೆಲ್‌ನಲ್ಲಿ ಅಡಗಿಸಿ ಇಟ್ಟಿದ್ದ ಕ್ಯಾಮೆರಾವನ್ನು ಅದೃಷ್ಟವಶಾತ್ ತಾವು ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಕ್ಯಾಮೆರಾ ಪತ್ತೆ ಹಚ್ಚಿರುವ ಬಗೆಯನ್ನೂ ಅವರು ವಿವರಿಸಿದ್ದಾರೆ. ಇದನ್ನು ಕೃತಿ ಅವರ ಮಾತಿನಲ್ಲಿಯೇ ಕೇಳುವುದಾದರೆ, ‘ಕನ್ನಡ ಸಿನಿಮಾ ಶೂಟಿಂಗ್ನ ಸಂದರ್ಭದ ಒಂದು ಘಟನೆ ನನಗೆ ಇನ್ನೂ ನೆನಪಿದೆ. ಹೋಟೆಲ್ ಬಾಯ್ ನಾನು ತಂಗಿದ್ದ ಕೊಠಡಿಯಲ್ಲಿ ಹಿಡನ್ ಕ್ಯಾಮೆರಾ (Hidden Camara) ಇಟ್ಟಿದ್ದ. ಇಂಥ ಘಟನೆಗಳ ಬಗ್ಗೆ ನಾನು ಸಾಕಷ್ಟು ನೋಡಿದ್ದರಿಂದ ಎಲ್ಲಿಯೇ ಹೋಟೆಲ್‌ಗೆ ಹೋದರೂ ಮೊದಲು ನಾನು ಮತ್ತು ನನ್ನ ಸ್ಟಾಫ್ಗಳು ಎಲ್ಲವನ್ನೂ ಪರೀಕ್ಷೆ ಮಾಡುತ್ತೇವೆ. ಆದರೆ ಕೆಲವೊಮ್ಮೆ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾ ಇಡುವುದರಿಂದ ಅರಿವಿಗೆ ಬರುವುದಿಲ್ಲ. ಆದರೆ ಈ ಹೋಟೆಲ್‌ನಲ್ಲಿ ಕ್ಯಾಮೆರಾ ಇಟ್ಟವ ಅಷ್ಟೊಂದು ಪ್ರೊಫೆಷನಲ್ ಆಗಿರಲಿಲ್ಲ ಅನಿಸತ್ತೆ. ಕಾಣುವಂತೆ ಕ್ಯಾಮೆರಾ ಇಟ್ಟಿದ್ದ. . ಸೆಟ್ಟಾಪ್ ಬಾಕ್ಸ್ ಹಿಂಭಾಗದಲ್ಲಿ ಆತ ಕ್ಯಾಮೆರಾ ಇಟ್ಟಿದ್ದ. ನಿಜಕ್ಕೂ ಇದು ಭಯಾನಕ ಅನುಭವ ಆಗಿತ್ತು’ ಎಂದಿದ್ದಾರೆ.
ಈ ಭಯಾನಕ ಘಟನೆಯ ಜೊತೆಗೆ, ಕೃತಿ ತಾವು ಅನುಭವಿಸಿದ ಕಿರುಕುಳದ (torture) ಇತರ ನಿದರ್ಶನಗಳನ್ನೂ ಹಂಚಿಕೊಂಡಿದ್ದಾರೆ. ಇದಾಗಿದ್ದು ಬೆಂಗಳೂರಿನಲ್ಲಿ. ಬೈಕ್ ಸವಾರನೊಬ್ಬ ತಮಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಬೀಳಿಸಿದ. ಶಾಕಿಂಗ್ ಎಂದರೆ, ಆತ ಯಾವುದೇ ಸಹಾಯವನ್ನು ನೀಡದೆ ಅಲ್ಲಿ ನಿಲ್ಲದೇ ಹೊರಟುಹೋದ. ಅನೇಕ ತಿಂಗಳು ನೋವಿನಿಂದ ಬಳಲಿದೆ. ಪೋಷಕರಿಂದಲೂ ಈ ಮಾಹಿತಿಯನ್ನು ಮುಚ್ಚಿಟ್ಟಿದ್ದೆ ಎಂದಿದ್ದಾರೆ ಕೃತಿ.
ಜೊತೆಜೊತೆಯಲಿ 'ಅನು' ಹಾಟ್ ವಿಡಿಯೋ ವೈರಲ್: ಉಫ್ ನಿಜಕ್ಕೂ ನೀವು ಅವ್ರೇನಾ ಕೇಳಿದ ಫ್ಯಾನ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.