ಬಹು ನಿರೀಕ್ಷಿತ ಕಾಂತಾರ-2 ಕುರಿತು ಕುತೂಹಲದ ಮಾಹಿತಿ: ಬಜೆಟ್​ ಎಷ್ಟು ಗೊತ್ತಾ?

Published : Aug 24, 2023, 12:46 PM ISTUpdated : Nov 02, 2023, 07:35 PM IST
ಬಹು ನಿರೀಕ್ಷಿತ ಕಾಂತಾರ-2 ಕುರಿತು ಕುತೂಹಲದ ಮಾಹಿತಿ: ಬಜೆಟ್​ ಎಷ್ಟು ಗೊತ್ತಾ?

ಸಾರಾಂಶ

16 ಕೋಟಿ ರೂ. ವೆಚ್ಚದಲ್ಲಿ ಕಾಂತಾರನಿರ್ಮಾಣವಾಗಿದ್ದರೆ, ಅದರ ಎರಡನೇ ಭಾಗಕ್ಕೆ ಇಷ್ಟೊಂದು ಬಜೆಟಾ? ಚಿತ್ರದ ಬಜೆಟ್​ ರಿವೀಲ್​  

ಸಿನಿ ಕ್ಷೇತ್ರದಲ್ಲಿ ಕಾಂತಾರಸೃಷ್ಟಿಸಿದ ದಾಖಲೆ ಅಷ್ಟಿಷ್ಟಲ್ಲ.  ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ತೆರೆಕಂಡಾಗ ಕೇವಲ ಕನ್ನಡ ಸಿನಿಮಾವಾಗಿತ್ತು. ಆದರೆ ನಂತರ  ಅದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಿಂಚಿತು. ಸ್ಯಾಂಡಲ್​ವುಡ್​ ನೆಲದಿಂದ ವಿಶ್ವಾದ್ಯಂತ ಕನ್ನಡದ ಕಂಪನ್ನು ಪಸರಿಸಿದೆ. ದಾಖಲೆಯ ಮೇಲೆ ದಾಖಲೆ ಬರೆದ ಕಾಂತಾರ  ಭಾರತದಲ್ಲಿ 362 ಕೋಟಿ ಕಲೆ ಹಾಕಿದರೆ, ವಿಶ್ವಾದ್ಯಂತ 398 ಕೋಟಿ ಕ್ಲಬ್​ಗೆ ಸೇರಿಸಿತು.  ಕನ್ನಡದಲ್ಲಿ ನಿರ್ಮಿಸಿದ್ದ 'ಕಾಂತಾರ' ನಂತರ  ತೆಲುಗು, ಹಿಂದಿ, ತಮಿಳು ವರ್ಷನ್‌ಗಳಲ್ಲಿಯೂ ಡಬ್​ ಆಗಿ ಅಲ್ಲಿಂದಲೂ  ಹಣ ಹರಿದುಬಂತು.  ಕಾಂತಾರಇನ್ನೂ ಹೆಚ್ಚು ಹೆಸರು ಮಾಡಲು ಕಾರಣವೆಂದರೆ ಅತ್ಯಂತ ಕಡಿಮೆ ಬಜೆಟ್​ನಲ್ಲಿ ಇದನ್ನು ನಿರ್ಮಿಸಲಾಗಿತ್ತು. ಇದಕ್ಕೆ ಖರ್ಚು ಮಾಡಿದ್ದು ಕೇವಲ 16 ಕೋಟಿ ರೂಪಾಯಿ. ಈಗ ಸಾಮಾನ್ಯವಾಗಿ ನೂರಾರು ಕೋಟಿ ಒಂದು ಸಿನಿಮಾಕ್ಕೆ ಖರ್ಚು ಮಾಡುವುದು ಮಾಮೂಲಾಗಿದೆ.  

ಇವುಗಳ ಪೈಕಿ  ಪೈಕಿ ಕೆಲವೊಂದು ಬ್ಲಾಕ್‌ಬಸ್ಟರ್‌ ಎಂದು ಸಾಬೀತಾದರೆ ಹಲವು ತೋಪೆದ್ದು ಹೋಗುವುದು ಇದೆ. ಒಂದು ಚಿತ್ರ ಹೀಗೆಯೇ ಕಮಾಯಿ ಮಾಡುತ್ತದೆ ಎಂದು ಹೇಳುವುದು ಕಷ್ಟವೇ. ಆದರೆ ಅತ್ಯಂತ  ಕಡಿಮೆ ಬಂಡವಾಳದ ಚಿತ್ರಗಳೂ ಜಗತ್ಪ್ರಸಿದ್ಧ ಆಗಬಹುದು ಎನ್ನುವುದನ್ನು ತೋರಿಸಿಕೊಟ್ಟವರು ರಿಷಬ್‌ ಶೆಟ್ಟಿ. ಅದಕ್ಕೆ ಕಾರಣ ಕಾಂತಾರಾ.

ಈಗ ಕಾಂತಾರ2ಗಾಗಿ (Kantara 2) ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಕಾಂತಾರ 1 ಯಶಸ್ಸಿನ ಬೆನ್ನಲ್ಲೇ ಪಾರ್ಟ್​ 2 ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಕಳೆದ ಡಿಸೆಂಬರ್​ನಲ್ಲಿ ಕಾಂತಾರ 2 ಬಗ್ಗೆ ಸಕತ್​ ಸುದ್ದಿಯಾಗಿತ್ತು.   ಸಿನಿಮಾ ತಂಡ ಕಾಂತಾರಭಾಗ 2 ಚಿತ್ರಕ್ಕೆ ಅಣ್ಣಪ್ಪ ಪಂಜುರ್ಲಿ ಬಳಿ ಅನುಮತಿ ಕೇಳಿರುವುದು ಸುದ್ದಿಯಾಗಿತ್ತು. ಅಣ್ಣಪ್ಪ ಪಂಜುರ್ಲಿ ಕೋಲದ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಟ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ,ರಿಷಬ್ ಪತ್ನಿ ಪ್ರಗತಿ ಶೆಟ್ಟಿ (Pragati Shetty) ಸೇರಿದಂತೆ ಕಾಂತಾರಕಲಾವಿದರು, ರಿಷಬ್ ಕುಟುಂಬಸ್ಥರು ಭಾಗಿಯಾಗಿದ್ದರು. ಮಂಗಳೂರಿನ ಬಂದಲೆಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಚಿತ್ರತಂಡ ಭಾಗವಹಿಸಿ ಮುಂದಿನ ಸಿನಿಮಾ ಮಾಡಲು ಅನುಮತಿ ಕೇಳಿತ್ತು.

ಹರಕೆ ಕೋಲದಲ್ಲಿ ಕಾಂತಾರ2 ಚಿತ್ರಕ್ಕೆ ಅನುಮತಿ ಕೇಳಿದ ಚಿತ್ರತಂಡ ಈ ಬಗ್ಗೆ ಪ್ರಸ್ತಾಪಿಸಿದೆ. ಈ ವೇಳೆ ಚಿತ್ರತಂಡಕ್ಕೆ ಹಲವು ನಿಯಮಗಳನ್ನು ಹೇಳಿದ ದೈವ ಅಣ್ಣಪ್ಪ ಪಂಜುರ್ಲಿ ಸಿನಿಮಾ ಮಾಡಲು ಅವಕಾಶ ಕೊಟ್ಟಿದೆ ಎನ್ನಲಾಗಿತ್ತು. ಮೊದಲು ಚಿತ್ರಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ. ಈ ಬಾರಿ ನೂರು ಬಾರಿ ಯೋಚನೆ ಮಾಡಿ. ಹಳೆಯ ತಂಡವನ್ನೇ ಉಪಯೋಗಿಸಿ ಮುಂದುವರಿಯಿರಿ ಎಂದು ದೈವ ಷರತ್ತು ವಿಧಿಸಿದೆ ಎಂದೂ ವರದಿಯಾಗಿತ್ತು. 

Kantara: ಮೂರು ಬಿಗ್ ನ್ಯೂಸ್ ಕೊಟ್ಟ ಡಿವೈನ್ ಸ್ಟಾರ್: ಕಾಂತಾರಾ ಪಾರ್ಟ್ 2 ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

ಅದೇ ಸಂದರ್ಭದಲ್ಲಿ ನಾಯಕಿಯ ಬಗ್ಗೆಯೂ ಪ್ರಸ್ತಾಪವಾಗಿತ್ತು.  ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ (Saptami Gowda) ಕಾಂತಾರ 2 ಚಿತ್ರದಲ್ಲಿ ಇರುವುದಿಲ್ಲ.  ಸದ್ಯ ಸಿನಿಮಾ ತಂಡ ನಾಯಕಿಗಾಗಿ ಹುಡುಕಾಟದಲ್ಲಿದೆ ಎಂದೆಲ್ಲಾ ಸುದ್ದಿಯಾಗಿತ್ತು.  ಕಾಂತಾರ 2 ಸಿನಿಮಾದಲ್ಲಿ  ಹೀರೋಯಿನ್ ಸ್ಟೋರಿಯೇ ಟ್ವಿಸ್ಟ್ ಆಗಲಿದೆ.  ಮಲಯಾಳಿ ಹುಡುಗಿ ನಾಯಕಿ ಆಗಲಿದ್ದಾಳೆ. ಸದ್ಯ  5 ಜನರ ಹೆಸರು ಪಟ್ಟಿಯಲ್ಲಿದೆ ಎಂದೆಲ್ಲಾ ಹೇಳಲಾಗಿತ್ತು. ಆದರೆ ಇನ್ನೂ ಯಾರಾಗ್ತಾರೆ ಹಿರೋಯಿನ್ ಅನ್ನೋದನ್ನು ಟೀಂ ಇದುವರೆಗೂ ರಿವೀಲ್ ಮಾಡಿಲ್ಲ. 

ಇದೀಗ ಇನ್ನೊಂದು ಇಂಟರೆಸ್ಟಿಂಗ್​ ಮಾಹಿತಿ ಸಿಕ್ಕಿದೆ. ಅದೇನೆಂದರೆ ಕಾಂತಾರ2 ಬಜೆಟ್​ ಬಗ್ಗೆ. ಕಾಂತಾರ1 16 ಕೋಟಿ ರೂಪಾಯಿಗಳಲ್ಲಿ ಮಾಡಿದ್ದರೆ ಕಾಂತಾರ2 125 ಕೋಟಿ ರೂಪಾಯಿ ಬಂಡವಾಳದಲ್ಲಿ ಮಾಡಲಾಗುತ್ತಿದೆ ಎನ್ನಲಾಗಿದೆ. ಅಂದರೆ ಮೊದಲಿಗಿಂತಲೂ 100 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ಎರಡನೆಯ ಭಾಗ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕೆ ಈಗಾಗಲೇ  ಸ್ಕ್ರಿಪ್ಟ್ ರೆಡಿಯಾಗಿದೆ. ಸಿನಿಮಾದ ಶೂಟಿಂಗ್ ಶೀಘ್ರದಲ್ಲಿಯೇ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಕಾಂತಾರ 2 ಸಿನಿಮಾದಲ್ಲಿ ಕಾಡು, ಹಳ್ಳಿ ಪ್ರದೇಶ, ನೀರು ಇರುವಂತಹ ಪ್ರದೇಶದಲ್ಲಿಯೇ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ. ಈ ಸಿನಿಮಾದ ಬಜೆಟ್ ಕೂಡಾ ಹೆಚ್ಚಾಗಲಿದ್ದು ಸಿನಿಮಾ ಕಲಾವಿದರ ಸಂಖ್ಯೆಯೂ ಹೆಚ್ಚಾಗಲಿದೆ ಎನ್ನಲಾಗಿದೆ. ಅದೇ ರೀತಿ ಇದು ಕಾಂತಾರಾದ ಸೀಕ್ವೆಲ್​ ಅಲ್ಲ, ಬದಲಿಗೆ ಪ್ರೀಕ್ವೆಲ್​ ಎನ್ನಲಾಗಿದೆ. ಮೊದಲು ರಿಲೀಸ್​ ಮಾಡಿದ್ದೇ ಪಾರ್ಟ್​-2 ಎನ್ನುವ ಮಾಹಿತಿಯೂ ಇದೆ. 

ಕನ್ನಡ ಬರಿಯಲು ಕಲಿತಿದ್ದಾರೆ ಪೂಜಾ ಗಾಂಧಿ ಅಮ್ಮ: ನಟಿಯ ಪೋಸ್ಟ್​ಗೆ ಭೇಷ್​ ಭೇಷ್​ ಅಂತಿರೋ ಕನ್ನಡಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ
'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!