ಹ್ಯಾಪಿ ಬರ್ತ್‌ಡೇ ಮೇಘನಾ ರಾಜ್; ತಂದೆ ಪೋಟೋ ನೋಡುತ್ತಿರುವ ಜೂನಿಯರ್ C ವಿಡಿಯೋ ವೈರಲ್!

Published : May 03, 2021, 11:47 AM IST
ಹ್ಯಾಪಿ ಬರ್ತ್‌ಡೇ ಮೇಘನಾ ರಾಜ್; ತಂದೆ ಪೋಟೋ ನೋಡುತ್ತಿರುವ ಜೂನಿಯರ್ C ವಿಡಿಯೋ ವೈರಲ್!

ಸಾರಾಂಶ

ತಂದೆ ಫೋಟೋ ನೋಡುತ್ತಾ ನಗುತ್ತಿರುವ ಜೂನಿಯರ್ ಚಿರು ವಿಡಿಯೋ ಹಂಚಿಕೊಂಡ ಮೇಘನಾ ರಾಜ್....

ಮೇ ತಿಂಗಳು ನಟಿ ಮೇಘನಾ ರಾಜ್‌ ಜೀವನದಲ್ಲಿ ತುಂಬಾನೇ ಸ್ಪೆಷಲ್ ತಿಂಗಳು ಯಾಕೆಂದರೆ 2ರಂದು ಚಿರು ಹಾಗೂ ಮೇಘನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನ ಹಾಗೂ 3ರಂದು ಮೇಘನಾ ರಾಜ್‌ ಹುಟ್ಟುಹಬ್ಬ. ಚಿರು ಇಲ್ಲದೆ ಆಚರಿಸಿಕೊಳ್ಳುತ್ತಿರುವ ಮೊದಲ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟುಹಬ್ಬ ಇದಾಗಿರುವ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಸಿನಿ ಪ್ರೇಮಿಗಳು ಕುಟುಂಬದಂತೆ ಒಟ್ಟುಗೂಡಿ ಮೇಘನಾಗೆ ಶುಭ ಹಾರೈಸುತ್ತಿದ್ದಾರೆ. 

ಪ್ಯಾರಿಸ್‌ ಟವರ್‌ ಎದುರು ಚಿರು ಜೊತೆ ಸೆಲ್ಫಿ; ಕಮ್‌ ಬ್ಯಾಕ್‌ ಎಂದ ಮೇಘನಾ ರಾಜ್! 

ಎರಡು ದಿನ ತುಂಬಾನೇ ಸ್ಪೆಷಲ್ ಆಗಿರುವ ಕಾರಣ ಮೇಘನಾ ಇನ್ನೂ ಸ್ಪೆಷಲ್ ಆಗಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಜೂನಿಯರ್ C ತಂದೆ ಪೋಟೋ ಮುಂದೆ ಆಟವಾಡುತ್ತಿರುವ ವಿಡಿಯೋ ಇದಾಗಿದ್ದು, ವಿಡಿಯೋ ನೋಡುತ್ತಲೇ ನೆಟ್ಟಿಗರು ಭಾವುಕರಾಗಿದ್ದಾರೆ. ಅಲ್ಲದೆ ಅನೇಕ ಸಿನಿ ಸ್ನೇಹಿತರು ಕಾಮೆಂಟ್ ಮಾಡಿದ್ದಾರೆ. 

'ನಮ್ಮ ಮಿರಾಕಲ್. ಎಂದಿಗೂ ಎಂದೆಂದಿಗೂ' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ. 

ಪುತ್ರನ 6 ತಿಂಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಮೇಘನಾ ರಾಜ್! 

'ಪುಂಡಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೇಘನಾ ರಾಜ್‌ ಸ್ಟಾರ್ ನಟಿಯಾಗಿ ಅನೇಕ ವರ್ಷಗಳ ಕಾಲ ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ.  ವೈವಾಹಿಕ ಬದುಕಿಗೆ ಸಮಯ ನೀಡುತ್ತಿರುವ ಕಾರಣ ಕುರುಕ್ಷೇತ್ರ ಸದ್ಯದ ಮಟ್ಟಕ್ಕೆ ಕೊನೆ ಚಿತ್ರವಾಗಿದೆ. ಚಿರು ದೊಡ್ಡವನಾಗುತ್ತಿದ್ದಂತೆ ಮೇಘನಾ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಬೇಕು, ಮತ್ತೆ ತಮ್ಮ ಕ್ರೇಜಿ ಚಾಪು ಮೂಡಿಸಬೇಕು ಎಂದು ಅಭಿಮಾನಿಗಳು ಆಶಿಸುತ್ತಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯಶ್ ರಾವಣನಾಗಿ ಅಬ್ಬರಿಸಿದರೆ ಬಾಕ್ಸ್ ಆಫೀಸ್‌ನಲ್ಲಿ ಏನಾಗಬಹುದು? ಆ ಲೆಕ್ಕ ಚುಕ್ತಾ ಮಾಡ್ತಾರಾ?
ಸಿನಿಮಾ, ರಾಜಕೀಯ ಎರಡರಿಂದಲೂ ದೂರ: ಮೋಹಕ ತಾರೆ ರಮ್ಯಾ ಈಗ ಏನ್ ಮಾಡ್ತಿದ್ದಾರೆ ಗೊತ್ತಾ?