
ರಜನೀಕಾಂತ್ ನಟನೆಯ ರೋಬೋಟ್ ಚಿತ್ರ ನಿರ್ದೇಶಿಸಿದ್ದ ಜನಪ್ರಿಯ ನಿರ್ದೇಶಕ ಎಸ್ ಶಂಕರ್ ಅವರ ಪಾನ್ ಇಂಡಿಯಾ ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಲನ್ ಪಾತ್ರದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ತೆಲುಗು ಹೀರೋ ರಾಮ್‌ಚರಣ್ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಈ ಚಿತ್ರದಲ್ಲಿ ಸುದೀಪ್ ಅವರನ್ನು ನೆಗೆಟಿವ್ ಪಾತ್ರಕ್ಕಾಗಿ ಕೇಳಲಾಗಿದೆ. ಹದಿನೈದು ದಿನಗಳ ಕೆಳಗೆ ನಿರ್ದೇಶಕ ಶಂಕರ್, ಸುದೀಪ್ ಅವರನ್ನು ಭೇಟಿಯಾಗಿ ಕಥೆ ಹೇಳಿದ್ದಾರೆ.
ಸೈಡ್ ಎಫೆಕ್ಟ್ ಇಲ್ಲ, ಕಾಂತಿ ಹೆಚ್ಚುತ್ತೆ: ಪ್ಲಾಸ್ಮಾ ನೀಡೋದು ನನ್ನ ಜವಾಬ್ದಾರಿ ಎಂದ ನಟಿ
‘ಇನ್ನೂ ಒಂದು ಸುತ್ತಿನ ಮಾತುಕತೆಯಷ್ಟೇ ನಡೆದಿದೆ. ಜನತಾ ಕಫä್ರ್ಯ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ಫೈನಲ್ ಮಾತುಕತೆ ನಡೆದಿರುತ್ತಿತ್ತು. ಸುದೀಪ್ ಅವರು ಇನ್ನೂ ಈ ಚಿತ್ರವನ್ನು ಫೈನಲ್ ಮಾಡಿಲ್ಲ’ ಎಂದು ಸುದೀಪ್ ಆಪ್ತ ಜಾಕ್ ಮಂಜು ತಿಳಿಸಿದ್ದಾರೆ.
ಕಿಚ್ಚ ಸುದೀಪ್ ಅವರು ಕಳೆದ ಎರಡು ವಾರಗಳಲ್ಲಿ ಅನಾರೋಗ್ಯದಿಂದಾಗಿ ಬಿಗ್‌ಬಾಸ್ ವೀಕೆಂಡ್ ಶೋನಲ್ಲಿ ಭಾಗವಹಿಸಿಲ್ಲ. ಅನಾರೋಗ್ಯ ಕಾರಣ ತಾವು ಭಾಗವಹಿಸುತ್ತಿಲ್ಲ ಎಂಬುದನ್ನು ಅವರು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.