ಈ ಒಂದು ಮಾತಿನ ವಿಡಿಯೋ ಇದೀಗ ತುಂಬಾ ವೈರಲ್ ಆಗುತ್ತಿವೆ. 'ಕೆಲವರು ಹೇಗೆ ಇರ್ತಾರೆ ಅಂದ್ರೆ, ಏನೂ ಮಾಡೋಕಾಗಲ್ಲ.. ಅವ್ರ ಜೀವನವನ್ನೇ ಬೇರೆಯವ್ರಿಗೋಸ್ಕರ ತ್ಯಾಗ ಮಾಡಿರ್ತಾರೆ....
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ನಟನೆಯ 'ಮ್ಯಾಕ್ಸ್' ಚಿತ್ರವು (Max) ಸದ್ಯ ಯಶಸ್ವೀ ಪ್ರದರ್ಶನ ಕಾಣುತ್ತಿದೆ. 25 ಡಿಸೆಂಬರ್ 2024ರಂದು ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗು ಹೀಗೆ ಮೂರು ಬಾಷೆಗಳಲ್ಲಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಪಡೆದಿದೆ. ಈ ಚಿತ್ರವು ಕನ್ನಡ ಸಿನಿಪ್ರೇಕ್ಷಕರ ಪಾಲಿಗಂತೂ ಹಬ್ಬದೂಟವಾಗಿ ಪರಿಣಮಿಸಿದೆ. ವರುಷದ ಕೊನೆಯಲ್ಲಿ ಮ್ಯಾಕ್ಸ್ ಮೂಲಕ ಹರುಷದ ಹೊನಲು ಹರಿದಿದೆ. ಕಿಚ್ಚ ಅಭಿಮಾನಗಳ ಮುಖದಲ್ಲಿ ನಗು ಮೂಡಿದೆ. ಈ ಸಮಯದಲ್ಲಿ ನಟ ಕಿಚ್ಚ ಸುದೀಪ್ ಆಡಿರುವ ಹಲವಾರು ಮಾತುಗಳು ವೈರಲ್ ಆಗುತ್ತಿವೆ.
ಈ ಒಂದು ಮಾತಿನ ವಿಡಿಯೋ ಇದೀಗ ತುಂಬಾ ವೈರಲ್ ಆಗುತ್ತಿವೆ. 'ಕೆಲವರು ಹೇಗೆ ಇರ್ತಾರೆ ಅಂದ್ರೆ, ಏನೂ ಮಾಡೋಕಾಗಲ್ಲ.. ಅವ್ರ ಜೀವನವನ್ನೇ ಬೇರೆಯವ್ರಿಗೋಸ್ಕರ ತ್ಯಾಗ ಮಾಡಿರ್ತಾರೆ. ನಿಮ್ಗೆ ಹೇಗೆ ಹಿಂಡ್‌ಬೇಕು? ನಿಮ್ಗೆ ಹೇಗೆ ನೋವು ಕೊಡ್ಬೇಕು? ನಿಮ್ ತಟ್ಟೆ ಹೇಗೆ ಕಿತ್ಕೋಬೇಕು? ಪಾಪ ತುಂಬಾ ಎಫರ್ಟ್ಸ್ ಹಾಕ್ತಾ ಇರ್ತಾರೆ.. ಅರ್ಥ ಆಯ್ತಾ ನಿಮ್ಗೆ? ಆ ಟೈಮ್‌ನಲ್ಲಿ ನೀವೇನ್ ಮಾಡ್ಬೇಕು? ಯಾವಾಗ್ಲೂ ಒಂದ್ವಿಷ್ಯ ಮಾತ್ರ ಮರೀಬೇಡಿ.. ನಿಮ್ ಪಕ್ಕದಲ್ಲಿ ರೇಸ್‌ನಲ್ಲಿ ಒಬ್ನು ಓಡೋನು ಇದ್ರೆ ಮಾತ್ರ ನಿಮ್ಗೆ ಗೆಲ್ಲೋದು ಕಷ್ಟ..
ದರ್ಶನ್ ಕಷ್ಟದ ಕ್ಷಣದಲ್ಲಿ ವಿಜಯಲಕ್ಷ್ಮಿ 'ನಿಜರೂಪ' ಹೇಳಿದ ದಿನಕರ್ ತೂಗುದೀಪ!
ಅವ್ನುನಿಮ್ಗೋಸ್ಕರ ನಿಂತ್ಕೊಂಡು ನಮ್ ಟೈರ್ ಪಂಕ್ಚರ್ ಮಾಡೋದು ಹೇಗೆ? ನಿಮ್ ಸ್ಕ್ರೂ ಲೋಸ್ ಮಾಡೋದು ಹೆಂಗೆ? ನಿಮಗೆ ಏಟ್ ಕೊಡೋದು ಹೆಂಗೆ? ಅಂತೂ ಅದೂ ಇದೂ ಯೋಚ್ನೆ ಮಾಡ್ತಾ ನಿಂತಿದ್ರೆ, ನೀವು ಓಡ್ಬೇಕಾಗಿಯೂ ಇಲ್ಲ, ನೀವು ನಡಕೊಂಡು ಹೋದ್ರೂ ಗೆದ್ಬಿಡ್ತೀರಾ..' ಎಂದಿದ್ದಾರೆ ವ್ಯಂಗ್ಯವಾಗಿ ನಟ ಕಿಚ್ಚ ಸುದೀಪ್. ಸದ್ಉ ಕಿಚ್ಚ ಸುದೀಪ್ ಅವರು ತಮ್ಮ ಮ್ಯಾಕ್ಸ್ ಚಿತ್ರವು ಸೂಪರ್ ಹಿಟ್ ಆಗಿರುವ ಖುಷಿಯಲ್ಲಿ ಇದ್ದಾರೆ. ಸಕ್ಸಸ್ ಆಚರಿಸುತ್ತಿರುವ ಮ್ಯಾಕ್ಸ್ ತಂಡವು ಸದ್ಯ ಖುಷಿಯಾಗಿದೆ.
ನಟ ಕಿಚ್ಚ ಸುದೀಪ್ ಅಭಿನಯದ ಯಾವುದೇ ಸಿನಿಮಾ ತೆರೆಗೆ ಬಾರದೇ ಬರೋಬ್ಬರಿ ಎರಡೂವರೆ ವರ್ಷಗಳು ಆಗಿಹೋಗಿತ್ತು. ಅವರ ಅಭಿಮಾನಿಗಳು ಈ ಬಗ್ಗೆ ಹುಸಿ ಕೋಪದಿಂದ ಕೇಳುತ್ತಲೇ ಇದ್ದರು. ಆದರೆ ಈ ಬಾರಿ ಅವರ ಬಾಸ್ ಚಿತ್ರವು ನಿರೀಕ್ಷೆ ಮೀರಿ ಚೆನ್ನಾಗಿದೆ ಎಂಬ ಪ್ರತಿಕ್ರಿಯೆ ಪಡೆದಿದೆ. ಸೋ, ಕಿಚ್ಚ ಸುದೀಪ್ ಫ್ಯಾನ್ಸ್ ಖುಷ್ ಹುವಾ..! ಸದ್ಯ ಚಿತ್ರವು ಬಿಡುಗಡೆಯಾದ ಬಹುತೇಕ ಚಿತ್ರಮಂದರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾಗಳ ಲಿಸ್ಟ್‌ನಲ್ಲಿ ಮ್ಯಾಕ್ಸ್ ಕೂಡ ಜಾಗ ಪಡೆಯುವುದು ಪಕ್ಕಾ ಎನ್ನಲಾಗುತ್ತಿದೆ.
ಅಣ್ಣಾವ್ರ ಕಟ್ಟುಮಸ್ತಾದ ದೇಹ ನೋಡಬೇಕೆ? AI ಫೋಟೋ ನೋಡಿದ್ರೆ ಶಾಕ್ ಆಗ್ತೀರಾ!
ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಜನರು ತಂಡೋಪತಂಡವಾಗಿ ಬಂದಿದ್ದಾರೆ. ಒಟ್ಟಿಗೇ ಬಂದಿರುವ ಜನರು ಸಿಟ್ ಇಲ್ಲ ಎಂದಾಗ ಹಾಗೇ ಮನೆಗೆ ಹೋಗಲು ಮನಸ್ಸು ಮಾಡದೇ, ನೆಲದ ಮೇಲೆ ನಿಂತುಕೊಂಡು ಹಾಗೂ ಎಕ್ಸ್‌ಟ್ರಾ ಚೇರ್ ಹಾಕಿಸಿಕೊಂಡು ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾವನ್ನು ನೋಡಿ ಖುಷಿ ಅನುಭವಿಸಿದ್ದಾರೆ. ನಾಳೆ ಬನ್ನಿ ಎಂದರೂ ಕೇಳದೇ ನಿಂತುಕೊಂಡೇ ಸಿನಿಮಾ ನೋಡಿದ್ದಾರೆ ಎಂದರೆ ಸುದೀಪ್ ಸಿನಿಮಾ ಬಗ್ಗೆ ಅವರಿಗೆ ಅದೆಷ್ಟು ಕ್ರೇಜ್ ಇರಬಹುದು!?
ಲೇಟ್ ಆಗಿ ಬಂದರೂ ಕಿಚ್ಚಸುದೀಪ್ ಅವರು ಲೇಟೆಸ್ಟ್ ಆಗಿ ಬಂದಿದ್ದಾರೆ ಎಂಬ ಮಾತು ಓಡಾಡುತ್ತಿದೆ. ಕಾರಣ, ಈ ಮೊದಲು ಅಂದರೆ ಎರಡೂವರೆ ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಕಿಚ್ಚ ಸುದೀಪ್ ನಟನೆಯ ಸಿನಿಮಾಗಳು ವಿಭಿನ್ನವಾಗಿ ಇದ್ದ ಕಾರಣಕ್ಕೆ ಅವರ ಅಭಿಮಾನಿಗಳಿಗೇ ಇಷ್ಟವಾಗಿರಲಿಲ್ಲ. ಆದರೆ, ಈಗ ಬಂದಿರುವ ಮ್ಯಾಕ್ಸ್ ಸಿನಿಮಾ ಹಾಗಾಗಿಲ್ಲ, ಅಭಿಮಾನಿಗಳು ಸೇರಿದಂತೆ ಆಲ್‌ಮೋಸ್ಟ್ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ ಎಂಬ ಮಾತು ಬಹತೇಕ ಎಲ್ಲೆಡೆ ಕೇಳಿಬರುತ್ತಿದೆ. ಜೊತೆಗೆ, ಕಲೆಕ್ಷನ್ ವಿಷಯದಲ್ಲಿ ಕೂಡ ಮ್ಯಾಕ್ಸ್ ಹಿಂದೆ ಬಿದ್ದಿಲ್ಲ. ಆದರೆ, ಅಂಕಿಅಂಶಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ಅಂದು ನಾನಾ ನೀನಾ? ಇಂದು ನಾನು-ನೀನು ಒಂದು; ಕನ್ನಡ ಸ್ಟಾರ್‌ಗಳ ಒಗ್ಗಟ್ಟಿನ ಗುಟ್ಟು ಬಹಿರಂಗ!