
ಕಿಚ್ಚ ಸುದೀಪ್ ಈಗ ಹೇಳಿದ್ದೇನು?
ಸದ್ಯಕ್ಕೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ನಡೆಯುತ್ತಿರುವ ಸ್ಟಾರ್ ವಾರ್ ಹಾಗೂ ಫ್ಯಾನ್ಸ್ ವಾರ್ ಬಗ್ಗೆ ಬಹುತೇಕರಿಗೆ ಗೊತ್ತು. ಹುಬ್ಬಳ್ಳಿಯಲ್ಲಿ ಮಾರ್ಕ್ ಪ್ರಚಾರದ ಈವೆಂಟ್‌ನಲ್ಲಿ ನಟ ಸುದೀಪ್ (Kichcha Sudeep) ಅವರು ಪೈರಸಿ ವಿರುದ್ಧ ಎಂಬ ಪದ ಬಳಸದೇ 'ಯುದ್ಧ'ಕ್ಕೆ ಕರೆ ನೀಡಿದ್ದರು. ಅದರಿಂದ ಸಾಕಷ್ಟು ಅಪಾರ್ಥ ಸೃಷ್ಟಿಯಾಗಿ ಅದರಿಂದ ಸ್ಟಾರ್ ವಾರ್ ಹುಟ್ಟಿಕೊಂಡಿತು. ಆ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ದರ್ಶನ್ ಆಪ್ತ ಧನ್ವೀರ್ ಗೌಡ ಆಡಿರುವ ಮಾತು ಫ್ಯಾನ್ಸ್ ವಾರ್ ಆಗಿ ಬದಲಾಯ್ತು. ಆ ಬಳಿಕ, ಉಳಿದ ಕೆಲವರು ಆ ಬಗ್ಗೆ ಮಾತನಾಡುವ ಮೂಲಕ ಕಿಚ್ಚ ಸುದೀಪ್ ಅವರಿಂದ ಹುಟ್ಟಿಕೊಂಡ ವಿವಾದ ದೊಡ್ಡದಾಗಿ ಹೊತ್ತಿಕೊಂಡು ಧಗಧಗನೇ ಉರಿಯುತ್ತಿತ್ತು.
ಆದರೆ, ನಟ ಸುದೀಪ್ ಅವರು 'ನಾನು ಯಾವುದೇ ಸ್ಟಾರ್ ವಿರುದ್ಧ ಯುದ್ಧಕ್ಕೆ ಕರೆ ಕೊಟ್ಟಿದ್ದಲ್ಲ, ಅದು ಪೈರಸಿ ವಿರುದ್ಧ. ಅದು ಅರ್ಥವಾಗುವವರಿಗೆ ಅರ್ಥವಾದ್ರೆ ಸಾಕು ಅಂತಾನೇ ನಾನು ಹಾಗೆ ಉದ್ದೇಶಪೂರ್ವಕವಾಗಿಯೇ ಹೇಳಿದ್ದೆ. ಏಕೆಂದರೆ ನನಗೆ ಅದು ಅರ್ಥ ಆಗಿತ್ತು, ಬೇರೆ ಎಲ್ಲರಿಗೂ ಅರ್ಥವಾಗುವ ಬದಲು ಅದಕ್ಕೆ ಸಂಬಂಧಪಟ್ಟವರಿಗೆ ಅರ್ಥವಾದರೆ ಸಾಕು ಎಂಬ ಉದ್ದೇಶದಿಂದಲೇ ನಾನು ಹಾಗೆ ಹೇಳಿದ್ದೆ. ಆದರೆ ಅದನ್ನು ಬೇರೆಯವರು ಅಪಾರ್ಥ ಮಾಡಿಕೊಂಡು ವಿವಾದ ಆಯ್ತು' ಎಂದಿದ್ದರು.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೇಳಿಕೆ ಬಗ್ಗೆ ನಟ ಸುದೀಪ್ ಅವರು ಆ ಬಳಿಕ ಯಾವುದೇ ನಿರ್ಧಿಷ್ಟ ಹೇಳಿಕೆ ನೀಡಿಲ್ಲ. ಆದರೆ, ಮಾತುಕತೆ ವೇಳೆ ನಟ ಧನ್ವೀರ್ ಗೌಡ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ ಸುದೀಪ್. "ಧನ್ನೀರ್, ವಿನಯ್ ಎಲ್ಲರೂ ನನಗೆ ಒಂದೇ. ಅವರು ನಮ್ಮ ಚಿತ್ರರಂಗದ ಯುವ ನಟರು. ನಾನು ಅವರನ್ನು ನೋಡುತ್ತಲೇ ಇರುತ್ತೇನೆ, ಅವರು ನಡೆದುಕೊಳ್ಳುವ ರೀತಿಯನ್ನು ಮೆಚ್ಚುತ್ತೇನೆ' ಎಂದಿದ್ದಾರೆ. ಈ ಮೂಲಕ ನಟ ಧನ್ವೀರ್ ಅವರ ಟಾಂಗ್‌ಗೆ ಸುದೀಪ್ ಯಾವುದೇ ರೀತಿಯಲ್ಲೂ ಕೆಟ್ಟ ಪ್ರತಿಕ್ರಿಯೆ ನೀಡಿಲ್ಲ. ನಟ ಸುದೀಪ್ ಅವರು 'ಪೈರಸಿ ಬಗ್ಗೆ ಯುದ್ಧ' ಅಂತ ಒಂದೇ ಒಂದು ಮಾತನ್ನು ಅಂದು ವೇದಿಕೆಯಲ್ಲಿ ಹೇಳಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ' ಎನ್ನುತ್ತಿದ್ದಾರೆ ಹಲವರು.
ಅದೇನೇ ಇರಲಿ, ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಕೊನೆಯ ತಿಂಗಳಲ್ಲಿ 3 ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆಗಿ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರಿಗೆ ಮನರಂಜನೆ ಒದಗಿಸಿವೆ. ಈ ತಿಂಗಳು (ಡಿಸೆಂಬರ್-2025) 12 ರಂದು ಬಿಡುಗಡೆ ಕಂಡ ನಟ ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರವು ನಿರೀಕ್ಷೆ ತಲುಪಿಲ್ಲ ಎನ್ನಲಾಗುತ್ತಿದೆ. ಮೊನ್ನೆ, ಕ್ರಿಸ್‌ಮಸ್ (25 ಡಿಸೆಂಬರ್) ರಂದು ಶಿವರಾಜ್‌ಕುಮಾರ್-ಉಪೇಂದ್ರ-ರಾಜ್ ಬಿ ಶೆಟ್ಟಿ ಅಭಿನಯದ '45' ಹಾಗೂ ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಸಿನಿಮಾಗ ಬಿಡುಗಡೆ ಕಂಡಿವೆ. ಇನ್ನೊಂದು ವಾರದಲ್ಲಿ ಈ ಎರಡೂ ಸಿನಿಮಾಗಳ ಫಲಿತಾಂಶ ತಿಳಿದುಬರಲಿದೆ. ಒಟ್ಟಿನಲ್ಲಿ, ಕನ್ನಡ ಚಿತ್ರರಂಗ ಒಮ್ಮೆ ಸ್ಟಾರ್ ವಾರ್ ಹಾಗೂ ಫ್ಯಾನ್ಸ್ ವಾರ್‌ನಿಂದ ಗೊಂದಲಗೊಂಡು ನಲುಗಿದ್ದು ಮಾತ್ರ ಘೋರ ದುರಂತ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.