ಶಿವನ ಗೆಟಪ್ಪಿನಲ್ಲಿ ಬಂದ ಶಿವರಾಜ್‌ಕುಮಾರ್; ಥಿಯೇಟರ್‌ನಲ್ಲಿ '45' ಶಿವಣ್ಣನಿಗೆ ಪೂಜೆ ಮಾಡಿದ ಫ್ಯಾನ್ಸ್!

Published : Dec 26, 2025, 05:45 PM IST
Shivarajkumar in 45 Movie

ಸಾರಾಂಶ

ಬಿಡುಗಡೆ ಆಗಿರುವ 45 ಸಿನಿಮಾ ಸನಾತನ ಧರ್ಮಕ್ಕೆ ಸಂಬಂಧಪಟ್ಟಿರುವ ಕಥೆ ಎಂದೇ ಪ್ರಚಾರ ಪಡೆಯುತ್ತಿದೆ. ಸನಾತನ ಧರ್ಮದ ಕಥೆ, 'ಸನಾತನ ಧರ್ಮದ ಮುನ್ನುಡಿ' ಎಂದು ಎಂದೇ ಭಾರೀ ಪ್ರಚಾರಕ್ಕೆ ಒಳಗಾಗಿರುವ 45 ಸಿನಿಮಾ, ಇದೀಗ ಶಿವನ ಪೂಜೆಯ ಮೂಲಕ ಇನ್ನೂ ಹೆಚ್ಚಿನ ಧರ್ಮಾಧಾರಿತ ಸಿನಿಮಾ ಎಂದು ಹೈಲೈಟ್ ಆಗುತ್ತಿದೆ.

45 ಶಿವನಿಗೆ ಪೂಜೆ

ಕನ್ನಡದ ಬಹುಭಾಷಾ ಸಿನಿಮಾ '45' ಇದೀಗ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್‌ ಬಿ ಶೆಟ್ಟಿ ನಟನೆ, ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ಬಿಗ್ ಬಜೆಟ್ ಸಿನಿಮಾ ಆಗಿದ್ದು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹಲವು ವರ್ಷಗಳ ಬಳಿಕ ನಟರಾದ ಶಿವಣ್ಣ ಹಾಗೂ ಉಪ್ಪಿ ಒಟ್ಟಿಗೇ ನಟಿಸಿದ್ದು, ಜೊತೆಯಲ್ಲಿ ರಾಜ್‌ ಬಿ ಶೆಟ್ಟಿ ಕೂಡ ಜೊತೆಯಾಗಿದ್ದು ಸಿನಿರಸಿಕರಿಗೆ ಹಬ್ಬದೂಟ ಎಂಬಂತಾಗಿದೆ. ಸದ್ಯ ಥಿಯೇಟರ್‌ ಒಂದರಲ್ಲಿ ಸಿನಿಮಾ 'ಶಿವ'ನಿಗೆ ಪೂಜೆ ಕೂಡ ಮಾಡಲಾಗಿದೆ.

ಹೌದು, 45 ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್ ಅವರು ಕ್ಲೈಮ್ಯಾಕ್ಸ್ ದೃಶ್ಯದಲ್ಲಿ 'ಶಿವ'ನ ಪಾತ್ರದಲ್ಲಿ ದರ್ಶನ ಕೊಡುತ್ತಾರೆ. ಚಿತ್ರಮಂದಿರದಲ್ಲಿ ಈ ಪಾತ್ರ ಪ್ರದರ್ಶನ ಆಗುತ್ತಿದ್ದಂತೆ, ಸಾಕ್ಷಾತ್ ಶಿವನ ದರ್ಶನ ಆದವರಂತೆ ಶಿವಣ್ಣ ಅವರ ಫ್ಯಾನ್ಸ್ ಸ್ಕ್ರೀನ್‌ ಮುಂದೆ ಹೋಗಿ ಅಲ್ಲಿ ಶಿವನಿಗೆ ಪೂಜೆ ಮಾಡಿ ಕುಣಿದಾಡುತ್ತಿದ್ದಾರೆ. ಅದು ಯಾವ ಥಿಯೇಟರ್‌ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ನಮ್ಮ ಕರ್ನಾಟಕದ ಯಾವುದೋ ಒಂದು ಚಿತ್ರಮಂದಿರ ಎಂಬುದು ಕನ್ಫರ್ಮ್.

45 ಸಿನಿಮಾ ಸನಾತನ ಧರ್ಮಕ್ಕೆ ಸಂಬಂಧಪಟ್ಟಿರುವ ಕಥೆ

ಹೌದು, ಇದೀಗ ಬಿಡುಗಡೆ ಆಗಿರುವ 45 ಸಿನಿಮಾ ಸನಾತನ ಧರ್ಮಕ್ಕೆ ಸಂಬಂಧಪಟ್ಟಿರುವ ಕಥೆ ಎಂದೇ ಪ್ರಚಾರ ಪಡೆಯುತ್ತಿದೆ. ಸನಾತನ ಧರ್ಮದ ಕಥೆ, 'ಸನಾತನ ಧರ್ಮದ ಮುನ್ನುಡಿ' ಎಂದು ಎಂದೇ ಭಾರೀ ಪ್ರಚಾರಕ್ಕೆ ಒಳಗಾಗಿರುವ 45 ಸಿನಿಮಾ, ಇದೀಗ ಶಿವನ ಪೂಜೆಯ ಮೂಲಕ ಇನ್ನೂ ಹೆಚ್ಚಿನ ಧರ್ಮಾಧಾರಿತ ಸಿನಿಮಾ ಎಂದು ಹೈಲೈಟ್ ಆಗುತ್ತಿದೆ. ಒಟ್ಟಿನಲ್ಲಿ, ಈ ವರ್ಷದ ಕೊನೆಯಲ್ಲಿ ತೆರೆಗೆ ಬಂದಿರುವ 45 ಸಿನಿಮಾ ಸಿನಿರಸಿಕರಿಗೆ ಹಾಗೂ ಆ ಚಿತ್ರದಲ್ಲಿ ನಟಿಸಿರುವ ನಟರುಗಳ ಫ್ಯಾನ್ಸ್‌ಗಳಿಗೆ ಹಬ್ಬದ ವಾತಾವರಣ ನಿರ್ಮಿಸಿದೆ.

ಗೆಲ್ಲುತ್ತಾ 45 ಸಿನಿಮಾ?

ಈ ತಿಂಗಳು 11ರಂದು (11 ಡಿಸೆಂಬರ್ 2025) ಬಹು ನಿರೀಕ್ಷೆಯ ಸಿನಿಮಾಗಳಾದ ದರ್ಶನ್ ನಟನೆಯ 'ದಿ ಡೆವಿಲ್' ಸಿನಿರಸಿಕರ ನಿರೀಕ್ಷೆ ತಲುಪಿಲ್ಲ. ಇದೀಗ 25ರಂದು, ಅಂದರೆ ಕ್ರಿಸ್‌ಮಸ್‌ ಹಬ್ಬದ ರಜೆಯಂದು ಬಿಡುಗಡೆ ಕಂಡಿರುವ 45 ಹಾಗೂ ಮಾರ್ಕ್ ಸಿನಿಮಾಗಳು ಜನರ ನಿರೀಕ್ಷೆಯ ಕನಸನ್ನು ನಿಜ ಮಾಡಲಿವೆಯಾ ಅಥವಾ ಸುಳ್ಳಾಗಿಸುವೊದೋ ಎಂಬುದು ಈ ವಾರದ ಕೊನೆಯ ಹೊತ್ತಿಗೆ ಅಥವಾ ಮುಂದಿನ ವಾರದ ಮೊದಲ ದಿನ ತಿಳಿಯಲಿದೆ ಎನ್ನಬಹುದು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂಗಾಂಗ ತೋರಿಸೋ ಬಟ್ಟೆ ಹಾಕಿದ್ರೆ ನಿಮ್ಮನ್ನು ದರಿದ್ರ ಅಂತ ಅಂದುಕೊಳ್ತಾರೆ ಹೇಳಿಕೆಗೆ ನಟ ಶಿವಾಜಿ ಕ್ಷಮೆಯಾಚನೆ
ಸಿನಿ ಸ್ನೇಹಿತೆಯರ ಜೊತೆ ಭರ್ಜರಿಯಾಗಿ ಕ್ರಿಸ್‌ಮಸ್‌ ಆಚರಿಸಿದ ಮೇಘನಾ ರಾಜ್‌!