
ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ನಟನೆಯ 'ಮ್ಯಾಕ್ಸ್' ಚಿತ್ರವು (Max) ಸೂಪರ್ ಹಿಟ್ ಆಗಿರುವುದು ಗೊತ್ತೇ ಇದೆ. ಆಕ್ಷನ್-ಥ್ರಿಲ್ಲರ್ ಜೋನರ್ ಸಿನಿಮಾ ಆಗಿರುವ ಮ್ಯಾಕ್ಸ್ ಚಿತ್ರವು ಸುದೀಪ್ ನಟನೆಯಲ್ಲಿ ಮೂಡಿ ಬಂದಿರುವ ಒಂದು ವಿಭಿನ್ನ ಸಿನಿಮಾ ಎನ್ನಲಾಗುತ್ತಿದೆ. 2024r ಕೊನೆಯಲ್ಲಿ, ಅಂದರೆ 25 5ಡಿಸೆಂಬರ್ 2024ರಂದು ಈ ಸಿನಿಮಾ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಎಲ್ಲಾ ಕಡೆ ಉತ್ತಮ ರೆಸ್ಪಾನ್ಸ್ ದೊರಕಿದ್ದು, ಕನ್ನಡದಲ್ಲಿ ಸಿಕ್ಕಾಪಟ್ಟೆ ಎಂಬಷ್ಟು ಕ್ರೇಜ್ ಸೃಷ್ಟಿಸಿದೆ. ಉಪೇಂದ್ರ ಯುಐ ಎದುರು ಕಿಚ್ಚ ನಟನೆಯ ಮ್ಯಾಕ್ಸ್ ಸಿನಿಮಾ ತಲೆ ಎತ್ತಿ ನಿಂತಿದೆ.
ಇನ್ನು ಮ್ಯಾಕ್ಸ್ ಸಿನಿಮಾ ಸಕ್ಸಸ್ ಬಗ್ಗೆ ಯಾರಿಗೂ ಸಂದೇಹವಿಲ್ಲ. ಆದರೆ ಅಧೀಕೃತವಾಗಿ ಸಿನಿಮಾ ಗಳಿಕೆ ಬಗ್ಗೆ ಎಲ್ಲೂ ಮಾಹಿತಿ ಹೊರಬಿದ್ದಿರಲಿಲ್ಲ. ಆದರೆ ಈ ಬಗ್ಗೆ ಕರ್ನಾಟಕದಲ್ಲಿ ಈ ಚಿತ್ರವನ್ನು ಡಿಸ್ಟ್ರಿಬ್ಯೂಟ್ ಮಾಡಿರುವ ಕೆಆರ್‌ಜಿ ಸಂಸ್ಥೆ ಇದೀಗ ಈ ಚಿತ್ರವು ದೊಡ್ಡಮಟ್ಟದಲ್ಲಿ ಗಳಿಕೆ ಕಂಡಿದೆ ಎಂಬುದನ್ನು ಬಹಿರಂಗ ಪಡಿಸಿದ್ದು, ಅಂಕಿ-ಸಂಖ್ಯೆಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ. ಆದರೆ, ಮ್ಯಾಕ್ಸ್ ಚಿತ್ರವು ಈ ವರ್ಷದ ಸೂಪರ್ ಹಿಟ್ ಎಂಬುದನ್ನು ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ (Karthik Gowda) ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ದೃಢ ಪಡಿಸಿದ್ದಾರೆ.
ಕರ್ನಾಟಕದಲ್ಲಿ ಜನರು ಈಗ ಅವ್ರನ್ನು ನೋಡಿ ತುಂಬಾ ಭಯ ಬೀಳ್ತಿದಾರೆ!
ಹಾಗಿದ್ದರೆ ಕಾರ್ತಿಕ್ ಗೌಡ ಅದೇನು ಟ್ವೀಟ್ ಮಾಡಿದ್ದಾರೆ? ಈ ಬಗ್ಗೆ ಇಲ್ಲಿದೆ ಮಾಹಿತಿ ನೋಡಿ.. ಮ್ಯಾಕ್ಸ್ ಚಿತ್ರದ ಹಕ್ಕನ್ನು 'ಕೆಆರ್‌ಜಿ ಸ್ಟುಡಿಯೋಸ್' ಪಡೆದುಕೊಂಡಿದೆ. ಈ ಸಂಸ್ಥೆಯ ಮುಖ್ಯಸ್ಥರಲ್ಲಿ ಒಬ್ಬರಾದ ಕಾರ್ತಿಕ್ ಗೌಡ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. '2024ರ ಕೊನೆಯಲ್ಲಿ ಇದ್ದೇವೆ. ಈ ವರ್ಷ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ ಮ್ಯಾಕ್ಸ್' ಎಂದು ಅವರು ಬರೆದುಕೊಂಡು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಯಶಸ್ಸಿಗೆ ಕಾರಣವಾದ ಕೆಆರ್‌ಜಿ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಚಿತ್ರದ ಮುಖ್ಯ ಆಧಾರ ಸ್ಥಂಭ. ಅವರಿಗೆ ಕಾರ್ತಿಕ್ ಗೌಡ ಅವರು ಧನ್ಯವಾದ ಹೇಳೋದನ್ನು ಮರೆತಿಲ್ಲ.
ಅಂದಹಾಗೆ, ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರವು ಹಿಟ್ ದಾಖಲಿಸುವ ಮೂಲಕ ಸುದೀಪ್ ಅಭಿಮಾನಿಗಳ ಮುಖದಲ್ಲಿ ಸಂತಸ ಮೂಡಿಸಿದೆ. ಈ ಮೊದಲು ತೆರೆಗೆ ಬಂದಿದ್ದ ಪೈಲ್ವಾನ್ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಗಳಿಕೆ ಹಾಗು ಜನಮೆಚ್ಚುಗೆ ದೃಷ್ಟಿಯಿಂದ ನಟ ಸುದೀಪ್ ಅವರಿಗೆ ಈಗ ಒಂದು ಹಿಟ್ ಸಿನಿಮಾದ ಅಗತ್ಯ ಇತ್ತು. ಅದನ್ನು ಈಗ ಬಂದಿರುವ ಮ್ಯಾಕ್ಸ್ ಚಿತ್ರವು ಪೂರೈಸಿದೆ. ಸದ್ಯ ಸುದೀಪ್ ಗೆಲುವಿನ ನಗೆ ಬೀರಿದ್ದು, ಹಳೆಯ ಸೋಲನ್ನು ಮರೆತು ಹೊಸ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ.
ಕೆಲವರು ಅವ್ರ ಲೈಫನ್ನೇ ಬೇರೆಯವ್ರಿಗೋಸ್ಕರ ತ್ಯಾಗ ಮಾಡಿರ್ತಾರೆ: ಕಿಚ್ಚ ಸುದೀಪ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.