ಫ್ಯಾಂಟಮ್ ಬದಲಾದ, ಬುರ್ಜ್‌ ಖಲೀಫಾ ಮೇಲೆ ವಿಕ್ರಾಂತ್ ರೋಣ ಬಂದ.. !

Published : Jan 21, 2021, 10:12 PM IST
ಫ್ಯಾಂಟಮ್ ಬದಲಾದ, ಬುರ್ಜ್‌ ಖಲೀಫಾ ಮೇಲೆ ವಿಕ್ರಾಂತ್ ರೋಣ ಬಂದ.. !

ಸಾರಾಂಶ

ಫ್ಯಾಂಟಮ್'  ಹೆಸರು ಬದಲಾಯ್ತು/  'ವಿಕ್ರಾಂತ್ ರೋಣ' ಅಭಿಮಾನಿಗಳ ಮುಂದೆ ಬರಲಿದೆ/ ನವರಿ 31ರಂದು ದುಬೈನ ಬುರ್ಜ್‌ ಖಲೀಫಾದಲ್ಲಿ 'ವಿಕ್ರಾಂತ್ ರೋಣ' ಅನಾವರಣ/ ಕಿಚ್ಚ ಸುದೀಪ್ ಅಭಿನಯದ ಚಿತ್ರ

ಬೆಂಗಳೂರು(ಜ.  21) ಗುಮ್ಮ ಬಂದ ..ಗುಮ್ಮ..ಬಂದ..  ಗುಮ್ಮ.. ಕಿಚ್ಚ ಸುದೀಪ್‌ ಅಭಿನಯದ ಬಹುನಿರೀಕ್ಷಿತ 'ಫ್ಯಾಂಟಮ್‌' ಸಿನಿಮಾದ ಟೈಟಲ್ ಬದಲಾಗಿದೆ  'ಫ್ಯಾಂಟಮ್' ಬದಲು 'ವಿಕ್ರಾಂತ್ ರೋಣ' ಅಭಿಮಾನಿಗಳ ಮುಂದೆ ಬರಲಿದೆ.

ಸೋಶಿಯಲ್ ಮೀಡಿಯಾದಲ್ಲಿ ತಂಡ ಈ ಬಗ್ಗೆ ತಿಳಿಸಿದರು ದೊಡ್ಡ ಮಟ್ಟದಲ್ಲಿ ಟೈಟಲ್ ಅನಾವರಣ ಆಗಲಿದೆ.   ಜನವರಿ 31ರಂದು ದುಬೈನ ಬುರ್ಜ್‌ ಖಲೀಫಾದಲ್ಲಿ 'ವಿಕ್ರಾಂತ್ ರೋಣ' ಲುಕ್ ಕಾಣಲಿದೆ.

ಜಗತ್ತಿನ ಅತೀ ಎತ್ತರ ಕಟ್ಟಡದಲ್ಲಿ ಟೈಟಲ್ ಲಾಂಚ್ ಮಾಡಿಕೊಳ್ಳಲಿರುವ ಕನ್ನಡದ ಮೊದಲ ಸಿನಿಮಾ 'ವಿಕ್ರಾಂತ್ ರೋಣ' ಎಂಬ ಕೀರ್ತಿಯೂ ದಕ್ಕಲಿದೆ.  ಟೈಟಲ್ ಲಾಂಚ್ ಜೊತೆಗೆ ಅಂದೇ ಚಿತ್ರದ 3 ನಿಮಿಷ ಒಂದು ಸ್ನೀಕ್ ಪೀಕ್ ವಿಡಿಯೋ ಸಹ ಲಾಂಚ್ ಆಗಲಿದೆ.

'ವಿಕ್ರಾಂತ್ ರೋಣ'  ಚಿತ್ರತಂಡ ತನ್ನ ಸಾಹಸಗಳನ್ನು ಅಭಿಮಾನಿಗಳ ಮುಂದೆ  ಇಡುವ ಸಾಧ್ಯತೆ ಇದೆ. ಸುದೀಪ್ ಅಭಿಮಾನಿಗಳಿಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 25 ವರ್ಷ ತುಂಬಿದ್ದು ಸಂಭ್ರಮವನ್ನು ಇಮ್ಮಡಿ ಮಾಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ