ಕಿಚ್ಚ ಸುದೀಪ್‌ ಸಿನಿಮಾ ಟೀಸರ್‌ನಲ್ಲಿ ದರ್ಶನ್‌ ಸಿನಿಮಾ ಹಾಡಿನ ಟ್ಯೂನ್, ಪ್ರೇಮ್‌ ಜೊತೆ Dada On Holiday ಮೂಡ್‌ನಲ್ಲಿ ಅಭಿನಯ ಚಕ್ರವರ್ತಿ!

Published : Nov 27, 2026, 08:21 PM ISTUpdated : Nov 27, 2026, 08:23 PM IST
dada on holidays teaser

ಸಾರಾಂಶ

ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ 'ದಾದಾ ಆನ್ ಹಾಲಿಡೇಸ್' ಟೀಸರ್ ಬಿಡುಗಡೆಯಾಗಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾದ ಟೀಸರ್‌ನಲ್ಲಿ ದರ್ಶನ್ ಅವರ 'ಕರಿಯಾ' ಸಿನಿಮಾದ ಟ್ಯೂನ್ ಗಮನ ಸೆಳೆದಿದೆ. ಮಾಸ್ ಎಂಟರ್‌ಟೇನರ್ ಲುಕ್‌ನಲ್ಲಿ ಸುದೀಪ್ ಮಿಂಚಿದ್ದಾರೆ.

ಬೆಂಗಳೂರು (ನ.27): ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ಟೀಸರ್‌ನಲ್ಲಿ ದರ್ಶನ್ ಸಿನಿಮಾ ಹಾಡಿನ ಟ್ಯೂನ್ ಕೇಳಿಬಂದಿದ್ದು, ಜೋಗಿ ಪ್ರೇಮ್ ಜೊತೆ 'ದಾದಾ ಆನ್ ಹಾಲಿಡೇಸ್' (Dada On Holidays) ಮೂಡ್‌ನಲ್ಲಿ ಅಭಿನಯ ಚಕ್ರವರ್ತಿ ಮಿಂಚಿದ್ದಾರೆ. ಇಂದು ಬಿಡುಗಡೆಯಾಗಿರುವ ಈ ಸಿನಿಮಾದ ಟೀಸರ್‌ನಲ್ಲಿ ಮಾಸ್ ಎಂಟರ್‌ಟೇನಿಂಗ್ ಲುಕ್ ಇದ್ದು, ಒಟ್ಟು 3.19 ನಿಮಿಷದ ಟೀಸರ್ ಮೂಲಕ ಮುಂದಿನ ವರ್ಷದ ಹಬ್ಬದ ಸೀಸನ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಸೂಚನೆ ನೀಡಲಾಗಿದೆ. ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಓಡುತ್ತಿರುವಾಗ ಕಿಚ್ಚ ಸುದೀಪ್ ಮಾಸ್ ಎಂಟರ್‌ಟೇನರ್ ಲುಕ್‌ನಲ್ಲಿ ಮತ್ತೆ ವಾಪಸಾಗಿದ್ದಾರೆ. ವಿಷ್ಣುವರ್ಧನ ಸಿನಿಮಾ ರೀತಿಯಲ್ಲಿ ಕಾಮಿಡಿ ಆಕ್ಷನ್ ಎಂಟರ್‌ಟೇನರ್ ಸಿನಿಮಾ ಇದಾಗಿರಬಹುದು ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

'ದಾದಾ ಆನ್ ಹಾಲಿಡೇಸ್' ಟೀಸರ್ ಹೈಲೈಟ್ಸ್: 'ಕರಿಯಾ' ಟ್ಯೂನ್ ಮತ್ತು ಪ್ರೇಮ್ ಧ್ವನಿಯ ಹಾಡು

ಇಂದು ರಿಲೀಸ್ ಆಗಿರುವ ಟೀಸರ್‌ನ ಆರಂಭ ಹಾಗೂ ಸಂಗೀತದ ಅಂಶಗಳು ಸಿನಿಪ್ರಿಯರನ್ನು ಸೆಳೆದಿವೆ. ಟೀಸರ್‌ನ ಆರಂಭದಲ್ಲಿ ಪ್ರೇಮ್ ಅವರ ಸೂಪರ್ ಹಿಟ್ ಸಿನಿಮಾಗಳಾದ 'ಕರಿಯಾ', 'ಜೋಗಿ' ಹಾಗೂ 'ಎಕ್ಸ್‌ಕ್ಯೂಸ್ ಮೀ' ಟ್ಯೂನ್‌ಗಳು ಕೇಳಿವೆ. ಅದರಲ್ಲೂ ದರ್ಶನ್ ಅವರ 'ಕರಿಯಾ' ಸಿನಿಮಾದ 'ಕೆಂಚಾಲೋ ಮಚ್ಚಾಲೋ' ಟ್ಯೂನ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ಸಿನಿಮಾಗೆ ಔಟ್ ಆಂಡ್ ಔಟ್ ಇಂಗ್ಲಿಷ್ ಹೆಸರಿಟ್ಟಿರುವುದು ಕೆಲ ಅಭಿಮಾನಿಗಳಿಗೆ ಕೊಂಚ ಬೇಸರವಾಗಿದೆ.

ಟೀಸರ್‌ನ ಹಾಡು ಎಲ್ಲರ ಗಮನಸೆಳೆದಿದ್ದು, "ಒಂದನೊಂದು ಊರಲಿ ಒಬ್ಬ ರಾಜನಿದ್ದನು. ಅಜ್ಜಿ ಹೇಳುವ ಕಥೆಯ ಇವ ಕೇಳುತಿದ್ದನು. ಪ್ರೀತ್ಸೋರಿಗಂತೂ ಪ್ರೀತಿ ಕೊಟ್ಟು ತಲೆಯ ಬಾಗುವ.. ಸ್ನೇಹಕ್ಕೆ ಮಾತು ಕೊಟ್ಟು ನಿಂತ್ರೆ ತಲೆಯ ಕಾಯುವ.. ಯಾರೋ ಯಾರೋ ಇವ.. ಬಲು ಜೋರೋ ಜೋರೋ ಇವ.." ಎನ್ನುವ ಹಾಡು ಪ್ರೇಮ್ ಧ್ವನಿಯಲ್ಲಿ ಅದ್ಭುತವಾಗಿ ಕೇಳಿದೆ. ಒಟ್ಟು 3.19 ನಿಮಿಷದ ಟೀಸರ್ ಇದಾಗಿದ್ದು, ಮುಂದಿನ ವರ್ಷದ ಹಬ್ಬದ ಸೀಸನ್‌ನಲ್ಲಿ ಅಂದರೆ ದಸರಾ, ದೀಪಾವಳಿ ಹೊತ್ತಿಗೆ ರಿಲೀಸ್ ಮಾಡುವ ಸೂಚನೆ ನೀಡಿದ್ದಾರೆ.

ಕಿಚ್ಚ ಸುದೀಪ್ ಫ್ಯಾಮಿಲಿ ಸಿನಿಮಾ ಮಾಡುತ್ತಿದ್ದು, 'ಫ್ಯಾಮ್‌ಜಾಮ್' ಅಂತಲೇ ಜೋಗಿ ಪ್ರೇಮ್ ಇದನ್ನು ಪ್ರಮೋಟ್ ಮಾಡುತ್ತಿದ್ದಾರೆ. ಮೊನ್ನೆಯಿಂದಲೇ ಈ ಚಿತ್ರದ ಟೈಟಲ್ ಬಗ್ಗೆ ಭಾರೀ ಕುತೂಹಲ ಹುಟ್ಟಿಕೊಂಡಿತ್ತು. ಟೈಟಲ್ ಏನಾಗಿರಬಹುದು ಎಂದು ಗೆಸ್ ಮಾಡಿ ಎನ್ನುವ ಅರ್ಥದಲ್ಲಿಯೇ ಪೋಸ್ಟರ್‌ಗಳು ಹೊರಬಂದಿದ್ದವು. ಅದರ ಬೆನ್ನಲ್ಲೇ 'ದಾದಾ ಆನ್ ಹಾಲಿಡೇಸ್' ಅನ್ನುವ ಟೈಟಲ್ ಹೆಚ್ಚು ಗಮನ ಸೆಳೆದಿತ್ತು. ಇದು ನಿಜವೇ ಅಥವಾ ಫ್ಯಾನ್ ಕ್ರಿಯೇಟೆಡ್ ಟೈಟಲ್ಲೇ ಎಂಬ ಪ್ರಶ್ನೆ ಇದ್ದರೂ, ಬಲ್ಲ ಮೂಲಗಳ ಪ್ರಕಾರ ಇದೇ ಟೈಟಲ್ ಎನ್ನಲಾಗುತ್ತಿದ್ದು, ಈಗ ಅಧಿಕೃತವಾಗಿಯೇ ಜೋಗಿ ಪ್ರೇಮ್ ಅವರೇ ರಿಲೀಸ್ ಮಾಡಿದ್ದಾರೆ. ನವೆಂಬರ್ 27ರ ಶುಕ್ರವಾರ ಸಂಜೆ 6 ಗಂಟೆ ಹೊತ್ತಿಗೆ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಓರಾಯನ್ ಮಾಲ್ ಅಲ್ಲಿರುವ ಮಲ್ಟಿಪ್ಲೆಕ್ಸ್‌ನಲ್ಲಿ ಇದು ರಿಲೀಸ್ ಆಗಿದೆ. ಇದಕ್ಕೂ ಮೊದಲೇ ಟೈಟಲ್ ಲೀಕ್ ಆಯಿತೇ ಎಂಬ ಪ್ರಶ್ನೆಯೂ ಇದ್ದು, ಈ ಟೈಟಲ್ ಟೀಸರ್‌ಗೆ ಸೆನ್ಸಾರ್ ಆಗಿ U/A ಪ್ರಮಾಣ ಪತ್ರವೂ ಬಂದಿದೆ.

ಜೋಗಿ ಪ್ರೇಮ್–ಸುದೀಪ್ ಮೂರನೇ ಸಿನಿಮಾ

ಜೋಗಿ ಪ್ರೇಮ್ ಹಾಗೂ ಸುದೀಪ್ ಅವರು ಮೂರನೇ ಸಲ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಈ ಹಿಂದೆ 'ದಿ ವಿಲನ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು; ಆ ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ನಟಿಸಿದ್ದರು ಹಾಗೂ ಸುದೀಪ್ ಹೇಳುವ "ಓ ಭ್ರಮೆ" ಡೈಲಾಗ್ ವೈರಲ್ ಆಗಿತ್ತು. ಅದಾದ ಬಳಿಕ ಸುದೀಪ್ ಅವರು ಜೋಗಿ ಪ್ರೇಮ್ ಅವರ 'ಕೆಡಿ' (KD) ಚಿತ್ರದಲ್ಲೂ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದು, ಈಗ ಈ ಸಿನಿಮಾದಲ್ಲಿ ಮತ್ತೊಮ್ಮೆ ಒಂದಾಗಿದ್ದಾರೆ. 'ಮುಂದಿನ ವರ್ಷ ಸಂಕ್ರಾಂತಿ, ಯುಗಾದಿ, ದಸರಾ ದೀಪಾವಳಿ ಎಲ್ಲ ಹಬ್ಬಗಳಲ್ಲು ನಮ್ಮದೇ ಹಾವಳಿ, Dada On Holidays, BRB, Devaraya" ಹಾಗೂ "Finally Kichcha Is Back In Full Mass Mode" ಎಂಬ ಅಭಿಮಾನಿಗಳ ಕಾಮೆಂಟ್‌ಗಳೂ ವೈರಲ್‌ ಆಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪೊಲೀಸ್ ಸ್ಟೋರಿಗೆ ಮೊದಲ ಆಯ್ಕೆ ಸಾಯಿ ಕುಮಾರ್ ಅಲ್ಲ! ಆ ಒಂದು ಸನ್ನಿವೇಶ ಡೈಲಾಗ್‌ ಕಿಂಗ್ ಬದುಕನ್ನೇ ಬದಲಿಸಿತು!
ಲಕ್ಷ್ಮೀಪುತ್ರ ವಿಮರ್ಶೆ- ಕೃಷ್ಣನ ಲವ್.. ಮದುವೆ ಆಗುತ್ತಾ? ಮದರ್ ಸೆಂಟಿಮೆಂಟ್, ಮಾಸ್-ಕ್ಲಾಸ್ ಜೊತೆಗೆ ಭರಪೂರ ಕಾಮಿಡಿ