Kichcha Sudeep ಹೀಗೂ ಮಾಡ್ತಾರಾ! ವಿಕ್ರಾಂತ್ ರೋಣ ತಂಡ ನೀಡಿದೆ ಹೊಸ ಸರ್ಪೈಸ್

Contributor Asianet   | Asianet News
Published : Mar 03, 2022, 05:26 PM IST
Kichcha Sudeep ಹೀಗೂ ಮಾಡ್ತಾರಾ! ವಿಕ್ರಾಂತ್ ರೋಣ ತಂಡ ನೀಡಿದೆ ಹೊಸ ಸರ್ಪೈಸ್

ಸಾರಾಂಶ

ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಅವತಾರವೆತ್ತಿ ಸಾಕಷ್ಟು ಕಾಲವಾಯ್ತು. ಈಗಲಾದರೂ ಹೊಸ ರಿಲೀಸ್ ಡೇಟ್ ನೀಡುತ್ತಾ ಅಂತಿದ್ದ ಫ್ಯಾನ್ಸ್ ಗೆ ಬೇರೆಯದೇ ಸರ್ಪೈಸ್ ನೀಡಿದೆ ಟೀಮ್ ವಿಕ್ರಾಂತ್ ರೋಣ. ಇದನ್ನು ನೋಡಿ ಸುದೀಪ್ ಹೀಗೂ ಮಾಡ್ತಾರಾ ಅಂತ ಅಚ್ಚರಿ ಪಡ್ತಿದ್ದಾರೆ ಅಭಿಮಾನಿಗಳು.  

ಕಿಚ್ಚ ಸುದೀಪ್ (Kichcha Sudeep) ನಟನೆಯ ಬಹು ನಿರೀಕ್ಷೆಯ ಚಿತ್ರ 'ವಿಕ್ರಾಂತ್ ರೋಣ’ (Vikrant Rona). ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಈ ಸಿನಿಮಾ (Cinema) ಬಾಕ್ಸ್ ಆಫೀಸ್ ದೋಚಬೇಕಿತ್ತು. ಫೆಬ್ರವರಿ 24 ವಿಕ್ರಾಂತ್ ರೋಣ ಚಿತ್ರದ ಹಿಂದಿನ ಅಪ್‌ಡೇಟ್ ಆಗಿತ್ತು. ಆದರೆ ಕೋವಿಡ್ (Covid), ಥಿಯೇಟರ್‌ಗಳಲ್ಲಿ ಶೇ.50 ಸೀಟು ಭರ್ತಿಗಷ್ಟೇ ಅವಕಾಶ ಇತ್ಯಾದಿ ಸಮಸ್ಯೆಗಳಿಂದ ಈ ಚಿತ್ರವನ್ನು ರಿಲೀಸ್ ಮಾಡೋದು ಸಾಧ್ಯವಾಗಿರಲಿಲ್ಲ. ಹಾಗಂತ ಸಿನಿಮಾ ಟೀಮ್ ಸುಮ್ಮನೆ ಕೂತಿಲ್ಲ. ಒಂದಿಲ್ಲೊಂದು ಅಚ್ಚರಿಗಳನ್ನು ಹೊರ ಹಾಕುತ್ತಾ, ಅಭಿಮಾನಿಗಳ ಜೊತೆಗೆ ಒಂದಿಲ್ಲೊಂದು ಕಾರಣಕ್ಕೆ ಟಚ್ ಇಟ್ಟುಕೊಂಡೇ ಬಂದಿದೆ.

ಅಂಥದ್ದೇ ಒಂದು ಅಚ್ಚರಿಯ ಸಂಗತಿಯನ್ನು ಟೀಮ್ ವಿಕ್ರಾಂತ್ ರೋಣ ನಿನ್ನೆ ಹೊರ ಹಾಕಿದೆ. ನಿನ್ನೆ ಈ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಅವರ ಬರ್ತ್ ಡೇ ಆಗಿತ್ತು ಅನ್ನೋ ಸಂಗತಿ ಎಲ್ಲರಿಗೂ ತಿಳಿದದ್ದೇ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಏನಾದರೂ ಹೊಸ ಅಪ್ ಡೇಟ್ ಹೇಳಬಹುದು ಅನ್ನುವ ನಿರೀಕ್ಷೆ ಇತ್ತು. ಟ್ರೈಲರ್ ರಿಲೀಸ್ ದಿನಾಂಕ ಹೇಳುತ್ತೋ ಏನೋ ಅಂತ ಹಲವರು ಅಂದುಕೊಂಡಿದ್ದರು. ಇನ್ನೂ ಕೆಲವು ಅಭಿಮಾನಿಗಳು ಸಿನಿಮಾ ರಿಲೀಸ್ ಡೇಟ್‌ ಅನ್ನೇ ಹೇಳಿಬಿಡಬಹುದು ಅಂತ ಕಾಯ್ಕೊಂಡಿದ್ದರು. ಆದರೆ ಜಾಣ ಟೀಮ್ ಅಚ್ಚರಿಯ ಸಂಗತಿಯೊಂದನ್ನು ಹೊರ ಹಾಕಿದೆ. ಇದು ಕಿಚ್ಚ ಸುದೀಪ್ ಮೇಲಿದ್ದ ಗೌರವವನ್ನು ಹೆಚ್ಚು ಮಾಡಿದೆ. ಜೊತೆಗೆ ಸುದೀಪ್ ಹೀಗೂ ಮಾಡಬಹುದಾ ಅನ್ನೋ ಅಚ್ಚರಿ ಮೂಡಿಸಿದೆ. 

BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ, ಮನೇಲಿ ಮೂವಿ ನೋಡ್ಬಹುದಾ?

ವಿಕ್ರಾಂತ್ ರೋಣ ಇಂಗ್ಲೀಷ್​ನಲ್ಲೂ ತೆರೆಗೆ ಬರುತ್ತಿರುವುದು ಎಲ್ಲರಿಗೆ ತಿಳಿದೇ ಇದೆ. ವಿಶೇಷವೆಂದರೆ ಇಂಗ್ಲೀಷ್​ನಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ಧ್ವನಿ ನೀಡಿದ್ದಾರೆ. ‘ಕನ್ನಡದ ಸೂಪರ್ ಸ್ಟಾರ್ ಒಬ್ಬರು ತಮ್ಮ ಇಂಗ್ಲೀಷ್ ಚಿತ್ರಕ್ಕೆ ತಮ್ಮದೇ ಧ್ವನಿ ನೀಡುತ್ತಿರೋದು ಇದೇ ಮೊದಲ ಬಾರಿ. ಅಷ್ಟೇ ಅಲ್ಲ, ಭಾರತ ಮಟ್ಟದಲ್ಲೂ ಇಂತಹ ನಾಯಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ’ ಎಂದು ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ ಅನೂಪ್ ಭಂಡಾರಿ. ಅಲ್ಲದೇ ಸುದೀಪ್ ಈಗಾಗಲೇ ಇಂಗ್ಲೀಷ್ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ಕಾಣಿಸಿಕೊಂಡಿರುವ ದೃಶ್ಯದ ಸಣ್ಣ ಟೀಸರ್ ಒಂದನ್ನೂ ರಿಲೀಸ್ ಮಾಡಲಾಗಿದೆ. ಇದನ್ನು ನೋಡಿದ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ (Jaqueline Fernandes) ಕೂಡ ಕಾಣಿಸಿಕೊಂಡಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಚಿತ್ರತಂಡವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

BIFFES: 'ಪೆದ್ರೋ' ಸಿನಿಮಾ ಆಯ್ಕೆಯಾಗದ್ದಕ್ಕೆ ನಟ ರಿಷಬ್‌, ನಟೇಶ್‌ ಬೇಸರ

"

ವಿಕ್ರಾಂತ್ ರೋಣ ವಿಶ್ವದ ಹಲವಾರು ಭಾಷೆಗಳಲ್ಲಿ ಹೊರಬರುತ್ತಿರುವ ಚಿತ್ರ. ಇದು ವಿಶ್ವದೆಲ್ಲೆಡೆ ರಿಲೀಸ್ ಆಗಲಿದೆ. ಜನರಿಗೆ ಅವರ ಭಾಷೆಯಲ್ಲೇ ಕಂಟೆಂಟ್ ಕೊಡಬೇಕು ಅನ್ನೋದು ಚಿತ್ರತಂಡದ ಉದ್ದೇಶ. ಜೊತೆಗೆ ತಮ್ಮ ಚಿತ್ರವನ್ನು ವಿಶ್ವಮಟ್ಟದಲ್ಲಿ ಜನರಿಗೆ ತಲುಪಿಸಬೇಕು ಎಂಬ ಮಹದಾಸೆಯೂ ಇದೆ. ಇಂಥದ್ದೊಂದು ಪ್ರಯತ್ನ ಮಾಡುತ್ತಿರುವ ಕನ್ನಡದ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಯೂ ಚಿತ್ರತಂಡದ್ದು. ನಿನ್ನೆ ಈ ಅಪ್‌ ಡೇಟ್ ನೀಡೋ ಮೊದಲು ನಿರ್ದೇಶಕ ಅನೂಪ್ ಭಂಡಾರಿ ಒಂದು ಮ್ಯಾಪ್‌ಮೂಲಕ ಸಿನಿಮಾದ ಅಪ್ ಡೇಟ್ಸ್ ಯಾವ ಅನುಕ್ರಮದಲ್ಲಿ ಬರುತ್ತವೆ ಅನ್ನೋದನ್ನೂ ತಿಳಿಸಿದ್ದಾರೆ. ಟೀಸರ್, ಲಿರಿಕಲ್ ಹಾಡುಗಳು, ಟ್ರೈಲರ್ ಹೀಗೆ ಸಿನಿಮಾದ ಇಣುಕು ನೋಟಗಳು ಜನರಿಗೆ ಸಿಗುತ್ತಾ ಹೋಗುತ್ತವೆ. ಈ ಚಿತ್ರದಲ್ಲಿ ಅದ್ಭುತವಾದ ಹಾಡುಗಳಿವೆ ಅನ್ನೋ ಮಾಹಿತಿಯೂ ಚಿತ್ರತಂಡದಿಂದ ಬಂದಿದೆ. ಹೇ ಫಕೀರ, ಗುಮ್ಮ ಬಂದ ಗುಮ್ಮ, ಲುಲ್ಲಬೈ, ದಿ ಕ್ವೀನ್ ಆಫ್ ಗುಡ್‌ ಟೈಮ್ಸ್, ಚಿಕ್ಕಿಬೊಂಬೆ ಎಂಬ ಡಿಫರೆಂಟಾದ ಹಾಡುಗಳು ಕೆಲವೇ ದಿನಗಳಲ್ಲಿ ರಿಲೀಸ್ ಆಗುತ್ತವೆ ಅಂತ ಅನೂಪ್‌ ಭಂಡಾರಿ ಹೇಳಿದ್ದಾರೆ. ಸೋ, ಈ ಎಲ್ಲ ಸರ್ಪೈಸ್ ಗಳೂ ಬೇಗ ಬೇಗ ಸಿಕ್ಕಲಿ ಅನ್ನೋದು ಅಭಿಮಾನಿಗಳ ಹಾರೈಕೆ.

ಸಲ್ಮಾನ್ ಸೊನಾಕ್ಷಿಯನ್ನು ಮದ್ವೆಯಾದ್ರಂತೆ, ಈ ಸುಳ್ಳು ಸುದ್ದಿ ವೈರಲ್ ಆಗಿದ್ದೇಕೆ?

 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?