
ಕನ್ನಡದ ಸ್ಟಾರ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ಹೇಳಿರುವ ಮಾತೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಕಿಚ್ಚ ಸುದೀಪ್ ಅವರು ಸುಮ್ಮನೇ ಮಾತನ್ನಾಡುವುದಿಲ್ಲ. ಅದಕ್ಕೊಂದು ತೂಕ ಇರುತ್ತದೆ, ಅದರ ಹಿಂದೆ ಒಂದು ಬಲವಾದ ಕಾರಣವಿರುತ್ತದೆ. ನಟ ಸುದೀಪ್ ಮಾತನ್ನಾಡಿರುವ ವಿಡಿಯೋ, ಶಾರ್ಟ್ಸ್ಸ ಹಾಗೂ ಸಂದರ್ಶನಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿವೆ. ಹಾಗಿದ್ದರೆ ನಟ ಕಿಚ್ಚ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ..
'ದಯವಿಟ್ಟು ನೀವು ನಿಮ್ಮನೆ ನೋಡ್ಕೊಳ್ಳಿ, ನಾವು ನಮ್ಮನೆ ನೋಡ್ಕೋತೀವಿ.. ನಮ್ಮಿಬ್ರ ಮನೆ ಚೆನ್ನಾಗಿದ್ರೆ ಕ್ರಾಸ್ ಚೆನ್ನಾಗಿರುತ್ತೆ.. ಕ್ರಾಸ್‌ನಲ್ಲಿರೋ ಎಲ್ಲಾ ಮನೆಗಳೂ ಅವ್ರ ಪಾಡಿಗೆ ಅವ್ರು ಅವ್ರವ್ರ ಮನೆ ನೋಡ್ಕೊಂಡು ಕ್ರಾಸ್ ಚೆನ್ನಾಗಿದ್ರೆ ಏರಿಯಾ ಚೆನ್ನಾಗಿರುತ್ತೆ.. ಏರಿಯಾದವ್ರೆಲ್ಲಾ ನಮ್ ಏರಿಯಾ ಚೆನ್ನಾಗಿರ್ಬೇಕು ಅಂತ ಏರಿಯಾ ನೋಡ್ಕೊಂಡ್ರೆ ನಮ್ ಊರು ಚೆನ್ನಾಗಿರುತ್ತೆ.. ಊರವ್ರೆಲ್ಲಾ ನಮ್ ಊರು ಚೆನ್ನಾಗಿರ್ಬೇಕು ಅಂದ್ಕೊಂಡ್ರೆ ನಮ್ ಊರು ಚೆನ್ನಾಗಿರುತ್ತೆ..
ಚಿತ್ರರಂಗಕ್ಕೆ ಬಂದ ಶುರುವಿನಲ್ಲಿ ಅಣ್ಣಾವ್ರು ಅಭಿಮಾನಿಗಳಿಗೆ ಹೇಳಿದ್ದೇನು? ಬಳಿಕ ಹೇಳಿದ್ದೇನು?!..ಎರಡೂ ಇಲ್ಲಿದೆ..
ಊರವ್ರೆಲ್ಲಾ ನಮ್ ಊರು ಚೆನ್ನಾಗಿರ್ಬೇಕು ಅಂತ ನೋಡ್ಕೊಂಡ್ರೆ ನಮ್ಮ ರಾಜ್ಯ ಚೆನ್ನಾಗಿರುತ್ತೆ.. ಸೇಮ್ ಥಿಂಗ್ ಗೋಸ್ ಟು ದ ಕಂಟ್ರಿ.. 'ಫಸ್ಟ್ ಆಫ್ ಆಲ್ ನಮ್ಮನ್ನ ನಾವು ಚೆನ್ನಾಗಿ ನೋಡ್ಕೊಳ್ಳೋಣ.. ಅದ್ರಿಂದ ಎಲ್ಲಾನೂ ಸರಿಹೋಗುತ್ತೆ..' ಎಂದಿದ್ದಾರೆ ನಟ ಕಿಚ್ಚ ಸುದೀಪ್. ಹೌದು, ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಹೀಗೆ ತಮ್ಮ ಅನುಭವ, ಯೋಚನೆಗಳ ಮೂಲಕ ತುಂಬಾ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಅವೆಲ್ಲವನ್ನೂ ಅವರ ಅಭಿಮಾನಿಗಳು ಹಾಗೂ ಸೋಷಿಯಲ್ ಮೀಡಿಯಾದವರು ಇಡೀ ಜಗತ್ತಿಗೇ ವೈರಲ್ ಮಾಡುತ್ತಾರೆ.
ಸುದೀಪ್ ಇಂಥ ಮಾತುಗಳನ್ನು ಅವರ ಅಭಿಮಾನಿಗಳು ಮೆಚ್ಚುತ್ತಾರೆ, ಖುಷಿ ಪಡುತ್ತಾರೆ ಹಾಗೂ ಫಾಲೋ ಮಾಡುತ್ತಾರೆ. ಅದನ್ನು ಬಹಳಷ್ಟು ವೈರಲ್ ಮಾಡುವ ಮೂಲಕ ಕಿಚ್ಚನ ಅಭಿಮಾನಿಗಳು ಅದನ್ನು ಇನ್ನಷ್ಟು ಜನರಿಗೆ ರೀಚ್ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಾರೆ. ಒಟ್ಟಿನಲ್ಲಿ ಹೇಳಬೇಕು ಎಂದರೆ, ನಟ ಕಿಚ್ಚ ಸುದೀಪ್ ಅವರು ಒಂಥರಾ ಮೋಟಿವೇಶನಲ್ ಸ್ಪೀಕರ್ ತರಹವೇ ಅಗಿದ್ದಾರೆ. ಅವರ ಮಾತುಗಳನ್ನು ಬಹಳಷ್ಟು ಜನರು ಮೆಚ್ಚುತ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಕೂಡ ಮಾಡುತ್ತಾರೆ. ಈ ವಿಡಿಯೋವಂತೂ ಬಹಳಷ್ಟು ವೈರಲ್ ಆಗಿದೆ.
ಪುನೀತ್ ರಾಜ್‌ಕುಮಾರ್‌ಗೆ ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು.. ಅದಕ್ಕೇ ಹಾಗೆ ಹೇಳಿದ್ರಾ..?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.