
ನಟ, ನಿರ್ದೇಶಕ ನವೀನ್ ಕೃಷ್ಣ ಅವರು ‘ಧಿಮಾಕು’ ಸಿನಿಮಾ ಮಾಡಿ ಸಾಲಗಾರನಾಗಿದ್ದ ಕಥೆಯನ್ನು ಅವರು ಚಿತ್ರಲೋಕಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಮನೆ ಮಾರಿದೆವು!
“ ‘ಮನೆಯೊಂದು ಮೂರುಬಾಗಿಲು’, ‘ಪ್ರೀತಿಯಿಂದ’ ಧಾರಾವಾಹಿಗಳಲ್ಲಿ ನಟಿಸಿದ್ದೆ. ಇದರಿಂದ ಸಾಕಷ್ಟು ಹೆಸರು ಬಂದಿತ್ತು. ಹೀಗಿದ್ದರೂ ಕೂಡ ನನಗೆ ಇನ್ನಷ್ಟು ಬೆಳೆಯಬೇಕು ಅಂತ ಆಸೆ ಇತ್ತು. ಹೀಗಾಗಿ ಆ ಧಾರಾವಾಹಿಗಳಿಂದ ಹೊರಬಂದಿದ್ದೆ. ಆಗ ನನ್ನ ತಾಯಿ ನಾನೇ ಸಿನಿಮಾ ನಿರ್ಮಾಣ ಮಾಡ್ತೀನಿ ಅಂತ ಹೇಳಿದ್ದರು. ಈಗಾಗಲೇ ಒಂದು ಸಿನಿಮಾ ಮಾಡಿ ನಷ್ಟ ಆಗಿತ್ತು. ಹೀಗಾಗಿ ‘ಬೆಳ್ಳಿಬೆಟ್ಟ’ ಎನ್ನುವ ಮನೆಯನ್ನು ಮಾರಿದ್ದೆವು. 2002ರಲ್ಲಿ ಮತ್ತೆ ಸಿನಿಮಾ ಮಾಡೋಣ ಅಂತ ಹೇಳಿದರು. ನಾನು ಹೀರೋ ಆಗಿ ಮತ್ತೆ ನಷ್ಟ ಆದರೆ ಕೊನೇವರೆಗೂ ಪಶ್ಚಾತ್ತಾಪ ಪಡಬೇಕು ಅಂತ ಇತ್ತು” ಎಂದು ನವೀನ್ ಕೃಷ್ಣ ಹೇಳಿದ್ದರು.
200 ಸಂಚಿಕೆ ಪೂರೈಸಿದ ಭೂಮಿಗೆ ಬಂದ ಭಗವಂತ: ಹೊರಗೆ ಹಾಕೊಳ್ಳೋ ರಾಜಾ ಚೆಡ್ಡಿ ಎಲ್ಲಿ ಸಿಗುತ್ತೆಂದು ಕೇಳಿದ ಅಭಿಮಾನಿ!
ನನ್ನ ತಾಯಿ ನಿರ್ಮಾಪಕಿಯಾದ್ರು!
“ಈ ಹಿಂದೆ ಇದ್ದ ಸಾಲವನ್ನು ತೀರಿಸಿದ್ದೇವೆ, ಬೇರೆ ಕಡೆ ಹಣ ಹೂಡಿಕೆ ಮಾಡಿದ್ದೇವೆ ಅಂತ ನನ್ನ ತಾಯಿ ಮಾತ್ರ ಹೇಳಿದ್ದರು. ನಾನು ಇನ್ನೇನು ಸಮಸ್ಯೆ ಇಲ್ಲ ಅಂತ ಸಿನಿಮಾ ಮಾಡಲು ರೆಡಿಯಾದೆ. ಕಥೆ, ನಿರ್ದೇಶಕರ ಹುಡುಗಾಟ ಶುರು ಮಾಡಿದೆ. ಇಂದು ‘ಅಮೃತಧಾರೆ’ ಧಾರಾವಾಹಿ ಸ್ಕ್ರಿಪ್ಟ್ ರೈಟರ್ ಮಹೇಶ್ ಕುಮಾರ್ ಅಂದಿನ ನನ್ನ ಸಿನಿಮಾದ ನಿರ್ದೇಶಕರಾಗಿದ್ದರು. ನಾನಂತೂ ಈ ಸಿನಿಮಾಕ್ಕೆ ನೂರು ಟೈಟಲ್ ಬರೆದಿದ್ದೆ. ರಾಯಭಾರಿ, ಡಿ ಡ್ರಾಮಾ ಅಂತ ಅಂದುಕೊಂಡಿದ್ದೆ. ನನ್ನ ತಂದೆ ಬಳಿ ಟೈಟಲ್ ಹೇಳಿದ್ದಕ್ಕೆ ಅವರು ಕ್ಯಾಚಿ ಆಗಿರಬೇಕು, ಹೀಗೆಲ್ಲ ಟೈಟಲ್ ಕೊಟ್ಟರೆ ಜನರು ಮೂಸಿ ನೋಡಲ್ಲ. ಜನರಿಗೆ ಹತ್ತಿರ ಆಗುವಂಥ ಟೈಟಲ್ ಹುಡುಕು ಎಂದು ಹೇಳಿದ್ದರು” ಎಂದು ನವೀನ್ ಕೃಷ್ಣ ಹೇಳಿದ್ದಾರೆ.
ಸೀರಿಯಲ್ಗಳಲ್ಲಿ ಮಿಂಚುವ ಆಸೆನಾ? ಖ್ಯಾತ ನಿರ್ದೇಶಕ ಆರೂರು ಜಗದೀಶ್ರಿಂದ ಆಹ್ವಾನ- ಡಿಟೇಲ್ಸ್ ಇಲ್ಲಿದೆ...
ಧಿಮಾಕು ಅಂತಲೇ ಟೈಟಲ್ ಕೊಟ್ಟೆವು!
“ನನ್ನ ಮೊದಲ ಸಿನಿಮಾ, ನಮ್ಮ ಪ್ರೊಡಕ್ಷನ್ ಸಿನಿಮಾಕ್ಕೆ ಧಿಮಾಕು ಅಂತ ಇಟ್ಟರೆ ಏನ್ ಕತೆ ಅಂತ ತಲೆಬಿಸಿ ಆಯ್ತು. ಆಮೇಲೆ ನಿರ್ದೇಶಕರು ಧಿಮಾಕು ಅಂತ ಹೆಸರಿಡಿ ಅಂತ ಅಂದರು. ರಾಮ್‌ಜೀ ಕೂಡ ಟೈಟಲ್ ಸೂಪರ್ ಆಗಿದೆ ಅಂದ್ರು. ಕೊನೆಗೂ ಸಿನಿಮಾ ರಿಲೀಸ್ ಆಯ್ತು. ರಿಲೀಸ್ ದಿನ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಎಲ್ಲರೂ ಬಂದು ಶುಭ ಹಾರೈಸಿದರು. ಆಮೇಲೆ ಸಿನಿಮಾ ನೋಡೋಕೆ ಯಾರೂ ಬರಲಿಲ್ಲ. ಕೊನೆಗೆ ನನಗೆ ಗೊತ್ತಾಗಿದ್ದು ಏನಂದ್ರೆ ನನ್ನ ಸಿನಿಮಾಕ್ಕೋಸ್ಕರ ನಮ್ಮ ಮನೆಯಲ್ಲಿ ಸಾಲ ಮಾಡಿದ್ದರು. ಮಗ ಹೀರೋ ಆಗುವ ಆಸೆ ಇಟ್ಟುಕೊಂಡಿದ್ದಾನೆ, ಅದು ಈಡೇರಬೇಕು ಅಂತ ಅವರು ಸಾಲ ಮಾಡಿದ್ದರು” ಎಂದು ನವೀನ್ ಕೃಷ್ಣ ಹೇಳಿದ್ದಾರೆ.
“ನಮ್ಮ ಸಿನಿಮಾ ಹೀರೋಯಿನ್‌ಗೆ ಅಷ್ಟು ಪ್ರಾಮುಖ್ಯತೆ ಕೊಡಲಿಲ್ಲ. ಅತ್ತೆ ಪಾತ್ರಕ್ಕೆ ಹೆಚ್ಚು ಮಹತ್ವ ಕೊಟ್ಟೆವು, ಆರ್‌ಜೆ ಭವಾನಿ ಅವರನ್ನು ಹೀರೋಯಿನ್ ಆಗಿ ಮಾಡಿಕೊಂಡೆವು. ಭವಾನಿ ಅವರು ತೆರೆ ಮೇಲೆ ವೀಕ್ಷಕರಿಗೆ ಇಷ್ಟವಾಗಲಿಲ್ಲ. ನಾವು ಅಂದುಕೊಂಡಂತೆ ಆದರೂ ಕೂಡ ಈ ಸಿನಿಮಾ ಜನರಿಗೆ ಇಷ್ಟವಾಗಲಿಲ್ಲ” ಎಂದು ನವೀನ್ ಕೃಷ್ಣ ಹೇಳಿದ್ದಾರೆ.
ಸಾಲ ತೀರಿಸಲು ಹತ್ತು ವರ್ಷ ಆಯ್ತು!
“ಅರವತ್ತು ಲಕ್ಷ ರೂಪಾಯಿ ಸಾಲ ತೀರಿಸಲು ಹತ್ತು ವರ್ಷ ಕಷ್ಟ ಅನುಭವಿಸಿದ್ದೇನೆ. ನಾನು, ನನ್ನ ತಂದೆ ಇಬ್ಬರೂ ಸೇರಿಕೊಂಡು ಸಿನಿಮಾ ಮಾಡಿದೆವು, ನಾನು ಏನು ಕೆಲಸ ಸಿಗತ್ತೋ ಅದನ್ನೆಲ್ಲ ಮಾಡಿದ್ದರೂ ಕೂಡ ಸಾಲ ತೀರಿಸೋಕೆ ತುಂಬ ಕಷ್ಟ ಆಗಿತ್ತು. ನಾನು ಅಂದು ಭಿಕ್ಷುಕನಾಗಿದ್ದೆ” ಎಂದು ನವೀನ್ ಕೃಷ್ಣ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.