
ಆಗಲೇ ಚಿತ್ರದ ಫೋಟೋಶೂಟ್ ಹಾಗೂ ಟೀಸರ್ ಶೂಟ್ ಮಾಡಿದ್ದು, ಚಿತ್ರೀಕರಣ ಕೂಡ ಶುರುವಾಗಿದೆ. ಸದ್ಯಕ್ಕೆ ಚಿತ್ರತಂಡ ಹೈದರಾಬಾದ್ನಲ್ಲಿ ಬೀಡು ಬಿಟ್ಟಿದೆ. ಸದ್ಯದಲ್ಲೇ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡದ್ದು. ಕೈಯಲ್ಲಿ ಪಿಸ್ತೂಲು ಹಿಡಿದು ನಿಂತ ಫೋಟೋ ಸಾಮಾಜಿ ಜಾಲತಾಣಗಳಲ್ಲಿ ಸಾಕಷ್ಟುವೈರಲ್ ಆಗಿದ್ದು, ಸುದೀಪ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ.
ಸುದೀಪ್ ಮೊದಲ ಸಿನಿಮಾ 'ಸ್ಪರ್ಶ' ಅಲ್ಲ; 'ಈಗ' ಹಿಂದಿದೆ ಈ ಕಥೆ! ಇದು ಸುದೀಪ್ ಮಾತುಕತೆ
ಚಿತ್ರದ ಮೊದಲ ಹಂತದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯಲಿದೆ. ಹೀಗಾಗಿ ಚಿತ್ರತಂಡ ಈಗಾಗಲೇ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದೆ. ಇಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿ ಮತ್ತೆ ಬೆಂಗಳೂರಿಗೆ ಬರಲಿದೆ ಚಿತ್ರತಂಡ. ಸಿಲಿಕಾನ್ ಸಿಟಿಯಲ್ಲಿ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಅಂದುಕೊಂಡದ್ದಿಕ್ಕಿಂತ ವೇಗವಾಗಿಯೇ ಚಿತ್ರೀಕರಣ ಮಾಡುವ ಪ್ಲಾನ್ ನಿರ್ದೇಶಕರದ್ದು.
ಸುದೀಪ್ ಪುತ್ರಿ Instagram ಖಾತೆ ಪಬ್ಲಿಕ್; ಫೋಟೋ ನೋಡಿ!
ಜಾಕ್ ಮಂಜು ನಿರ್ಮಾಣಈ ಚಿತ್ರಕ್ಕೆ ನಾಯಕಿ ಯಾರು ಎಂಬುದು ಸದ್ಯ ಕೇಳಿ ಬರುತ್ತಿರುವ ಪ್ರಶ್ನೆಯಾದರೂ ಈ ಸಿನಿಮಾ ಸುದ್ದಿಯಾದಾಗಿನಿಂದಲೂ ತೆಲುಗಿನ ನಟಿ ಸಮಂತಾ ಹೆಸರು ‘ಫ್ಯಾಂಟಮ್’ ಚಿತ್ರದ ಜತೆಗೆ ಸದ್ದು ಮಾಡುತ್ತಿದೆ. ಹಾಗಾದರೆ ಸಮಂತಾ ಈ ಚಿತ್ರಕ್ಕೆ ಜತೆಯಾಗಲಿದ್ದಾರೆಯೇ ಎಂಬುದು ಇನ್ನಷ್ಟೆನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.