ವಿಷ್ಣುವರ್ಧನ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತೆಲಗು ನಟ

Suvarna News   | Asianet News
Published : Dec 09, 2020, 10:24 AM ISTUpdated : Dec 10, 2020, 08:28 PM IST
ವಿಷ್ಣುವರ್ಧನ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತೆಲಗು ನಟ

ಸಾರಾಂಶ

ತೆಲುಗು ನಟರೊಬ್ಬರು ವಿಷ್ಣುವರ್ಧನ್ ಅವರಿಗೆ ಅವಮಾನವಾಗುವಂತೆ ಮಾತನಾಡಿದ್ದು, ಈ ಬಗ್ಗೆ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಲುಗು ನಟರೊಬ್ಬರು ನಟ ವಿಷ್ಣುವರ್ಧನ್‌ಗೆ ಅವಮಾನ ಮಾಡುವಂತೆ ಮಾತನಾಡಿ, ವಿವಾದ ಸೃಷ್ಟಿಸಿದ್ದಾರೆ. ಈ ಮಾತನ್ನು ಕೇಳಿ ವಿಷ್ಣು ಅಭಿಮಾನಿಗಳು ಕೋಪಗೊಂಡಿದ್ದಾರೆ.

ಇದೀಗ ನ್ಯಾಯಕ್ಕಾಗಿ ವಿಷ್ಣು ಅಭಿಮಾನಿಗಳು ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ಈ ಘಟನೆಯ ಸಂಬಂಧ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದು, ನಟನ ವಿರುದ್ಧ ಕ್ರಮ ಜರುಗಿಸಿ ಎಂದು ಮನವಿ ಮಾಡಲಾಗಿದೆ.

ಟಾಲಿವುಡ್‌ನಲ್ಲಿ ಮತ್ತೊಮ್ಮೆ ಉಪ್ಪಿ, ಈ ಬಾರಿ ಯಾವ ರೋಲ್..?

ತೆಲುಗು ಹಿರಿಯ ನಟ ವಿಜಯ್ ರಂಗರಾಜು ಮಾಧ್ಯಮವೊಂದಕ್ಕೆ ನೀಡಿರುವ ಸಂರ್ದಶನದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡಿದ್ದು ಅಭಿಮಾನಿಗಳಿಗೆ ಆಕ್ರೋಶ ತರಿಸಿದೆ. ಇದು ಸಹಜವಾಗಿ ಕನ್ನಡಾಭಿಮಾನಿಗಳು ಮತ್ತು ಸಾಹಸ ಸಿಂಹ ಅಭಿಮಾನಿಗಳನ್ನು ಕೆರಳಿಸಿದೆ.

ವಿಜಯ ರಂಗರಾಜು ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈ ನಟ ವಿಷ್ಣುವರ್ಧನ್ ನಟಿಸಿರುವ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದು, ಈಗ ವಿಷ್ಣು ಬಗ್ಗೆಯೇ ಮಾತನಾಡುತ್ತಿದ್ದಾರೆ.

ಮುತ್ತೈದೆ ಭಾಗ್ಯ ಸಿನಿಮಾದ ಶೂಟಿಂಗ್ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಅಲ್ಲಿ ನಾನು ಹೋದಾಗ ನನ್ನನ್ನು ಹೊರಗೆ ಕಳಿಸೋಕೆ ವಿಷ್ಣುವರ್ಧನ್ ಹೇಳಿದ್ರು. ಯಾಕೆ ಕಳಿಸ್ಬೇಕು ಎಂದಾಗ ಡಿಸ್ಟರ್ಬ್ ಆಗುತ್ತೆ ಅಂದಿದ್ದರು. ವಿಷ್ಣು ವರ್ಧನ್ ಅವರಿಗೆ ಕೆಲವು ವೀಕ್‌ನೆಸ್ ಇತ್ತು ಎಂದಿದ್ದಾರೆ. 

ಖೈದಿ ಸಿನಿಮಾ ಶೂಟಿಂಗ್ ಸಂದರ್ಭದ ಘಟನೆಯನ್ನು  ಉಲ್ಲೇಖ ಮಾಡಿದ್ದಾರೆ.   ವಿಷ್ಣುವರ್ಧನ್ ಜತೆ ನಾನು ಫೈಟ್ ಸೀನ್ ನಲ್ಲಿ ಅಭಿನಯ ಮಾಡಬೇಕಿತ್ತು. ಆದರೆ ಕಾರಣಾಂತರಳಿಂದ ನಾನು ಮಾಡಲ್ಲ.  ಚಿರಂಜೀವಿ ಆದರೆ ಮಾಡ್ತೆನೆ .. ವಿಷ್ಣುವರ್ಧನ್ ಆದರೆ ಮಾಡುವುದಿಲ್ಲ ಎಂದು ಹೇಳಿದೆ.. ಸರಿ ಈ ವೇಳೆ ಪ್ಯಾಕ್ ಅಪ್ ಎಂದು ಹೇಳಿದ್ರು. ನಾನು ಮೇಕಪ್ ತೆಗೆದು ಬಂದೆ. ಆದರೆ ಅದೇ ದೃಶ್ಯಕ್ಕೆ ಚೆನ್ನೈ ಕಲಾವಿದರೊಬ್ಬರನ್ನು ಬಳಸಿಕೊಳ್ಳಲಾಗಿತ್ತು.

ನಿಗದಿಯಂತೆ ಭುಜಕ್ಕೆ ಹೊಡೆಯಬೇಕಾಗಿತ್ತು. ಆದರೆ ವಿಷ್ಣುವರ್ಧನ್ ಆ  ವ್ಯಕ್ತಿಯ ತಲೆಗೆ ಹೊಡೆದಿದ್ದರು.   ಹೊಡೆತದ ರಭಸಕ್ಕೆ ವ್ಯಕ್ತಿ ಕೆಳಕ್ಕೆ ಬಿದ್ದು ನೀರಿನಿಂದ ಮೇಲೆ ಬಂದ ಮೀನಿನಂತೆ ಒದ್ದಾಡಿದ.  ನೋಡುತ್ತಾ ನಿಂತಿದ್ದ ನನಗೆ ಕೋಪ ಬಂದು ವಿಷ್ಣುವರ್ಧನ್ ಕೊರಳ ಪಟ್ಟಿ ಹಿಡಿದೆ.  ಈ ವೇಳೆ ಮಧ್ಯ ಬಂದ ನಿರ್ದೇಶಕ ಕೆಎಸ್‌ಆರ್ ದಾಸ್  ಹಾಗೆಲ್ಲ ಮಾಡಬೇಡಿ.. ಅವರು ದೊಡ್ಡ ಹೀರೋ  ಎಂದು ಹೇಳಿ ನನ್ನನ್ನು ತಡೆದರು ಎಂದು ತೆಲುಗು ನಟ ಸಂದರ್ಶನದಲ್ಲಿ ಹೇಳಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್