
ಸ್ಪರ್ಶ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 28 ವರ್ಷಗಳ ಜರ್ನಿ ಪೂರೈಸಿರುವ ಕಿಚ್ಚ ಸುದೀಪ್ ವಂದನೆ ಪತ್ರ ಬರೆದಿದ್ದಾರೆ. ಅಭಿನಯ ಚಕ್ರವರ್ತಿ ಬಿರುದು ಪಡೆಯಲು ಯಾರೆಲ್ಲಾ ಕಾರಣ, ಯಾರೆಲ್ಲ ಬೆಂಬಲ ಕೊಟ್ಟಿದ್ದಾರೆ ಅವರಿಗೆ ಕೈ ಮುಗಿದು ಥ್ಯಾಂಕ್ಸ್ ಹೇಳುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
'ನನ್ನ ಜೀವನದ ಪ್ರಮುಖ ಭಾಗವಾಗಿರುವ ಮನೋರಂಜನೆ ಕ್ಷೇತ್ರದಲ್ಲಿ 28 ವರ್ಷಗಳ ಬ್ಯೂಟಿಫುಲ್ ಜರ್ನಿ ಪೂರೈಸಿರುವೆ. ಯಾವುದಕ್ಕೂ ಸರಿಸಾಟಿಯಿಲ್ಲದ ಈ ಅಮೂಲ್ಯವಾದ ಉಡುಗರೆ ನೀಡಿರುವುದಕ್ಕೆ ವದಂನೆಗಳು. ನನ್ನ ಪೋಷಕರಿಗೆ, ನನ್ನ ಕುಟುಂಬವರಿಗೆ, ನನ್ನ ಸಹ-ಕಲಾವಿದರಿಗೆ, ಮಾಧ್ಯಮ, ಮನೋರಂಜನೆ ಚಾನೆಲ್‌ಗಳು, ವಿತರಕರು, ಎಕ್ಸಿಬಿಟರ್ಸ್, ವಕುಟಾ ಪರಿವಾರದ ಪ್ರತಿಯೊಬ್ಬರು ಈ ಜರ್ನಿಯಲ್ಲಿ ಇದ್ದು ಇದನ್ನು ಸುಂದರ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್. ಫ್ಯಾನ್ಸ್ ರೂಪದಲ್ಲಿರುವ ನನ್ನ ಸ್ನೇಹಿತರಿಗೆ ಅತಿ ದೊಡ್ಡ ಥ್ಯಾಂಕ್ಸ್, ನನ್ನ ಜೀವನದಲ್ಲಿ ಗಳಿಸಿರುವ ಅಮೂಲ್ಯವಾದದ್ದು ಅಂದ್ರೆ ಅದು ನೀವೇ. ಮಿತಿ ಇಲ್ಲದಷ್ಟು ಪ್ರೀತಿ ಕೊಟ್ಟಿದ್ದೀರಿ. ಈ ಜರ್ನಿ ಅಷ್ಟು ಸುಲಭವಾಗಿ ಇರಲಿಲ್ಲ ಒಂದು ರೋಲರ್ ಕೋಸ್ಟರ್ ಆಗಿತ್ತು, ಆದರೂ ನಾನು ಎಂಜಾಯ್ ಮಾಡಿರುವೆ. ನಾನು flawless ಅಲ್ಲ, ನಾನು ಪರ್ಫೆಕ್ಟ್ ಅಲ್ಲ ಅವಕಾಶ ಬಂದಾಗ ಶ್ರಮದಿಂದ ಕೆಲಸ ಮಾಡಿ ಆದಷ್ಟು ಬೆಸ್ಟ್ ಕೊಟ್ಟಿರುವೆ. ನಾನು ಇದ್ದ ಹಾಗೆ ನನ್ನನ್ನು ಒಪ್ಪಿಕೊಂಡಿರುವುದಕ್ಕೆ ವಂದನೆಗಳು' ಎಂದು ಕಿಚ್ಚ ಸುದೀಪ್ ಪತ್ರ ಬರೆದಿದ್ದಾರೆ.
ಸಮಸ್ಯೆ ಏನೆಂದು ಹುಡುಕುತ್ತಿದ್ದೀವಿ; ದರ್ಶನ್ ಸ್ನೇಹದ ಬಗ್ಗೆ ಕಿಚ್ಚ ಸುದೀಪ್ ನೇರ ಮಾತು
'ಕೆಲವು ವರ್ಷಗಳ ಹಿಂದೆ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಬ್ರಹ್ಮ ಸಿನಿಮಾ ಸೆಟ್‌ಗೆ ಕಾಲಿಟ್ಟಂತೆ ಅನಿಸುತ್ತಿದೆ. ಅಂಬರೀಶ್ ಮಾಮ ಜೊತೆ ನಾನು ಕ್ಯಾಮೆರಾ ಎದುರಿಸಿದೆ. ಆಗಲೇ 28 ವರ್ಷ ಕಳೆದಿದೆ. ತುಂಬಾ ಹಂಬಲ್ ಫೀಲ್ ಅಗುತ್ತಿದೆ. ಇಷ್ಟು ಅಮೂಲ್ಯವಾದ ಗಿಫ್ಟ್ ನೀಡಿದ್ದ ಖುಷಿಯಾಗಿದೆ, ಪ್ರೀತಿ ಇದೆ ಅದಕ್ಕೂ ಮೀರಿದ ಗೌರವವಿದೆ' ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.