ಕಿಚ್ಚನ ಹೊಸ ಅವತಾರ; ಕೋಟಿಗೊಬ್ಬ-3 ಲುಕ್‌ ಮಸ್ತೈತಿ ನೋಡಿ!

By Suvarna News  |  First Published Jan 5, 2020, 2:44 PM IST

ಹೊಸ ವರ್ಷಕ್ಕೆ ಹೊಸ ಅವತಾರ ಹೊತ್ತು ಅಭಿಮಾನಿಗಳನ್ನು ಮನೋರಂಜಿಸಲು ಬರ್ತಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್! 
 


ಕನ್ನಡ ಚಿತ್ರರಂಗದ 'ಪೈಲ್ವಾನ್' ಕಿಚ್ಚ ಸುದೀಪ್ ಮತ್ತೊಮ್ಮೆ ಅಖಾಡಕ್ಕೆ ಇಳಿಯಲು ಸಿದ್ಧರಾಗುತ್ತಿದ್ದಾರೆ.  ಇತ್ತೀಚಿಗೆ ಬಿಡುಗಡೆಯಾದ 'ದಬಾಂಗ್-3'  ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮುಟ್ಟಿತ್ತು. ಸಲ್ಮಾನ್ ಖಾನ್ ಜೊತೆಗೆ ನಟಿಸಿರುವುದು ನಮ್ಮ ಕನ್ನಡಿಗರಿಗೆ ಹೆಮ್ಮೆ ತಂದಿದೆ. 

ಚಿತ್ರ ಚಿಮರ್ಶೆ: ದಬಾಂಗ್‌- 3

Tap to resize

Latest Videos

ಇನ್ನು 2020 ರಲ್ಲಿ ಹೊಸ ದಾಖಲೆ ಸೃಷ್ಟಿಸಲು ರೆಡಿಯಾಗುತ್ತಿರುವ ಕಿಚ್ಚ ಸುದೀಪ್ ಕೆಲ ದಿನಗಳ ಹಿಂದೆ ಕೋಟಿಗೊಬ್ಬ-3 ಚಿತ್ರದ  ಲುಕ್ ಬಿಡುಗಡೆ ಮಾಡಿದೆ.  ಕಂಠೀರವ ಸ್ಟುಡಿಯೋದಲ್ಲಿ ಇಂಟ್ರಡಕ್ಷನ್ ಸಾಂಗ್ ಚಿತ್ರೀಕರಣ ನಡೆಯುತ್ತಿದ್ದು ಸುದೀಪ್  ಯಂಗ್ ಮ್ಯಾನ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.

ಇನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲು ವ್ಯವಸ್ಥೆ ಮಾಡುವ ಏಜೆನ್ಸಿಗಳ ಸಹಾಯದಿಂದ ಚೇಸಿಂಗ್ ದೃಶ್ಯಗಳನ್ನು ಪೋಲೆಂಡ್‌ನಲ್ಲಿ ಸೆರೆ ಹಿಡಿಯಲಾಗಿದೆ ಅಷ್ಟೇ.  ಅಲ್ಲದೇ ರಾಮೋಜಿ ಫಿಲ್ಮ್  ಸಿಟಿಯಲ್ಲಿ ಫುಡ್‌ ಕೋರ್ಟ್‌ ಸೆಟ್‌ ಅನ್ನು ಅರುಣ್ ಸಾಗರ್ ನಿರ್ಮಿಸಲು 3 ಕೋಟಿ ವೆಚ್ಚವಾಗಿದೆ ಎಂದು ಹೇಳಲಾಗಿದೆ.  ನಿರ್ಮಾಪಕ ಸೂರಪ್ಪ ಬಾಬು ಈ ದೃಶ್ಯಕ್ಕೆ 150ಕ್ಕೂ ಹೆಚ್ಚು ಜ್ಯೂನಿಯರ್ ಕಲಾವಿದರು ಭಾಗಿಯಾಗಿದ್ದರು ಎನ್ನಲಾಗಿದೆ.

click me!