
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಕುಟುಂಬದವರಿಗೆ ಮಾತ್ರವಲ್ಲodos, ತಮ್ಮ ಪರ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಚೆನ್ನಾಗಿ ನೋಡಿ ಕೊಳ್ಳುತ್ತಾರೆ. ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ತಮ್ಮ ಬಾಡಿಗಾರ್ಡ್‌ಗೆ ಸ್ಪೆಷಲ್ ಉಡುಗೊರೆಯೊಂದನ್ನು ನೀಡಿದ್ದಾರೆ. ಸರ್ಪೈಸ್ ಆಗಿ ಗಿಫ್ಟ್ ಪಡೆದ ಬಾಡಿಗಾರ್ಡ್ ಫುಲ್ ಎಕ್ಸೈಟ್ ಆಗಿದ್ದಾರೆ.
ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸುತ್ತಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್!
ಹಲವು ವರ್ಷಗಳಿಂದ ಸುದೀಪ್‌ಗೆ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಸಾಯಿ ಕಿರಣ್‌ಗೆ ಕಪ್ಪು ಬಣ್ಣದ ರಾಯಲ್ ಎನ್‌ಫೀಲ್ಡ್ ಬುಲೆಟ್ ನೀಡಿದ್ದಾರೆ. ಈ ವಿಚಾರದ ಬಗ್ಗೆ ಸಾಯಿ ಕಿರಣ್ ಮಾಧ್ಯಮವೊಂದಕ್ಕೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
'ಇದು ನನಗೆ ಆಶ್ಚರ್ಯ ಹಾಗೂ ಖುಷಿ ತಂದಿದೆ. ಈ ಬೈಕ್‌ನಲ್ಲಿ ಮೊದಲಿಗೆ ನಾನು ಸುದೀಪ್ ಅವರನ್ನು ಕರೆದುಕೊಂಡು ಸುತ್ತಾಡುತ್ತೇನೆ. ಸ್ಪರ್ಶ ಸಿನಿಮಾ ಶೂಟಿಂಗ್ ಸಮಯದಿಂದಲೂ ನಾನು ಅವರ ಅಭಿಮಾನಿ. ಈಗ 6 ವರ್ಷಗಳಿಂದ ಅವರ ಜೊತೆ ಕೆಲಸ ಮಾಡುತ್ತಿದ್ದೀನಿ. ಅವರು ಕುಟುಂಬಕ್ಕೆ ನಾನು ಚಿರರುಣಿ,' ಎಂದು ಹೇಳಿದ್ದಾರೆ.
'ನಿಮ್ಮ ಜತೆ ಇದ್ದೇನೆ' ಹಿರಿಯ ನಿರ್ದೇಶಕ ಎಟಿ ರಘು ಆರೋಗ್ಯ ವಿಚಾರಿಸಿದ ಕಿಚ್ಚ
ಸುದೀಪ್ ತಮ್ಮ ಜೊತೆ ಕೆಲಸ ಮಾಡಿದವರಿಗೆ ಮಾತ್ರ ಹೀಗೆ ಸಹಾಯ ಮಾಡುತ್ತಾರೆ ಎಂದು ತಿಳಿದುಕೊಂಡರೆ ಅದು ತಪ್ಪು ಕಲ್ಪನೆ. ಕಿಚ್ಚ ಸುದೀಪ್ ಚಾರಿಟಿ ಟ್ರಸ್ಟ್ ಮುಖಾಂತರ ಊರು ಊರುಗಳಿಗೆ ತಮ್ಮ ಜನರನ್ನು ಕಳುಹಿಸಿ, ಅಗತ್ಯ ಇರೋರಿಗೆ ಸಹಾಯ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.