
ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗಾಗಿ ಕಾಯುತ್ತಿದ್ದ ಸ್ಟಾರ್ ನಟರ ಚಿತ್ರಗಳಿಗೆ ಕೊನೆಗೂ ತೆರೆ ಕಾಣುವ ಭಾಗ್ಯ ಸಿಕ್ಕಿದೆ. ಅರ್ಥಾತ್ ಎಲ್ಲ ಚಿತ್ರಗಳ ಬಿಡುಗಡೆಯ ದಿನಾಂಕ ಅಂತಿಮಗೊಂಡಿದೆ.
ಫೆಬ್ರವರಿ 5 ಪೊಗರು
ಈಗಾಗಲೇ ಸಕ್ರೀಯ ನಿರ್ಮಾಪಕರು ಪ್ಲಾನ್ ಮಾಡಿಕೊಂಡಿರುವಂತೆ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ನಟನೆಯ, ನಂದ ಕಿಶೋರ್ ನಿರ್ದೇಶನದ ‘ಪೊಗರು’ ಚಿತ್ರವನ್ನು ಫೆ. 5ರಂದು ತೆರೆಗೆ ತರಲಾಗುತ್ತಿದೆಯಂತೆ. ನಿರ್ಮಾಪಕ ಗಂಗಾಧರ್ ಈ ನಿಟ್ಟಿನಲ್ಲಿ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಒಂದು ವೇಳೆ ಇದೇ ಆದರೆ ಈ ವರ್ಷ ಥಿಯೇಟರ್‌ಗಳಿಗೆ ಬರುತ್ತಿರುವ ಮೊದಲ ಸ್ಟಾರ್ ಸಿನಿಮಾ ಎನ್ನುವ ಹೆಗ್ಗಳಿಗೆ ‘ಪೊಗರು’ ಪಾತ್ರವಾಗಲಿದೆ.
"
ಮಾಚ್‌ರ್ 11 ರಾಬರ್ಟ್
ಈಗಾಗಲೇ ಸ್ವತಃ ದರ್ಶನ್ ಅವರೇ ಘೋಷಣೆ ಮಾಡಿರುವಂತೆ ‘ರಾಬರ್ಟ್’ ಚಿತ್ರ ಮಾ.11ರಂದು ಬಿಡುಗಡೆ ಆಗುತ್ತಿದೆ. ಉಮಾಪತಿ ಶ್ರೀನಿವಾಸ್‌ಗೌಡ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಶಿವರಾತ್ರಿ ಹಬ್ಬದಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಹೊರಟಿದೆ. ಆ ಮೂಲಕ ಮಾಚ್‌ರ್ ತಿಂಗಳ ಪೂರ್ತಿ ಡಿ ಬಾಸ್ ಅಭಿಮಾನಿಗಳಿಗೆ ಸಿನಿಮಾ ಜಾತ್ರೆ.
ಸುನಾಮಿ ಸುಂಟರಗಾಳಿಯಂತೆ ಬರಲಿದೆ ಕನ್ನಡ ಚಿತ್ರಗಳು!
ಏಪ್ರಿಲ್ 1 ಯುವರತ್ನ
ಏಪ್ರಿಲ್‌ನಲ್ಲಿ ಇಬ್ಬರು ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ ‘ಯುವರತ್ನ’ ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಏ.1ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.
ಏಪ್ರಿಲ್ 23 ಕೋಟಿಗೊಬ್ಬ
ಏ.23ಕ್ಕೆ ಸುದೀಪ್ ಶಿವಕಾರ್ತಿಕ್ ನಿರ್ದೇಶನದ ‘ಕೋಟಿಗೊಬ್ಬ 3’ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಸೂರಪ್ಪ ಬಾಬು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಶೇ.25 ವೀಕ್ಷಕರಿಗೆ ಅವಕಾಶವಿದ್ದರೂ, ಥಿಯೇಟರ್‌ನಲ್ಲೇ ಚಿತ್ರ ರಿಲೀಸ್; '5G ದೊಡ್ಡ ಸ್ಕ್ಯಾಮ್'
ಸಲಗನಿಗೆ ದುನಿಯಾ ಸೆಂಟಿಮೆಂಟು
ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘ಸಲಗ’ ಚಿತ್ರವನ್ನು ಯಾವಾಗ ಬಿಡುಗಡೆ ಮಾಡುತ್ತಾರೆ ಎಂಬುದು ಎಲ್ಲರ ಕುತೂಹಲ. ಈ ನಾಲ್ಕು ಚಿತ್ರಗಳ ನಡುವೆಯೇ ‘ಸಲಗ’ ಆಗಮಿಸಲಿದೆಯಂತೆ. ಆದರೆ, ನಟ ವಿಜಯ್ ಅವರಿಗೆ ‘ದುನಿಯಾ’ ಸೆಂಟಿಮೆಂಟ್ ಹೆಚ್ಚಾಗಿದೆ. ಹೀಗಾಗಿ ಆ ಚಿತ್ರ ತೆರೆಗೆ ಬಂದ ದಿನವಾಗ ಫೆ.23ರಂದು ‘ಸಲಗ’ನನ್ನು ಥಿಯೇಟರ್‌ಗಳಿಗೆ ಕರೆತರಲು ಪ್ಲಾನ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿದೆ.
ಆಗಸ್ಟ್ ನಂತರ ಯಾರು?
ಉಳಿದಂತೆ ಬಹುತೇಕ ಚಿತ್ರಗಳು ಆಗಸ್ಟ್ ತಿಂಗಳ ನಂತರ ಥಿಯೇಟರ್‌ಗಳಿಗೆ ಬರುವ ಯೋಜನೆ ಹಾಕಿಕೊಂಡಿವೆ. ಯಶ್ ನಟನೆಯ ‘ಕೆಜಿಎಫ್ 2’, ಶಿವರಾಜ್‌ಕುಮಾರ್ ಅವರ ‘ಭಜರಂಗಿ 2’, ಸುದೀಪ್ ನಟನೆಯ ‘ಫ್ಯಾಂಟಮ್’, ರಕ್ಷಿತ್ ಶೆಟ್ಟಿಅವರ ‘777 ಚಾರ್ಲಿ’ ಹಾಗೂ ಗಣೇಶ್ ಅವರ ‘ಗಾಳಿಪಟ 2’, ‘ಸಕತ್’ ಮುಂತಾದ ಚಿತ್ರಗಳು ವರಮಹಾಲಕ್ಷ್ಮಿ ಹಬ್ಬದ ನಂತರವೇ ತೆರೆಗೆ ಬರಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.