Latest Videos

ನಟ ಸುದೀಪ್‌ಗೆ ವೈರಲ್‌ ಫೀವರ್, ಕ್ಲ್ಯಾರಿಟಿ ಕೊಟ್ಟ ಕಿಚ್ಚ

By Shruiti G KrishnaFirst Published Jul 20, 2022, 5:13 PM IST
Highlights

ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸುದೀಪ್ ತೊಡಗಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕಾರ್ಯಕ್ಕಾಗಿ ಅನೇಕ ರಾಜ್ಯಗಳಿಗೆ ಸುತ್ತಾಡುತ್ತಿದ್ದಾರೆ. 

ನಟ ಕಿಚ್ಚ ಸುದೀಪ್‌ಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿಕ್ರಾಂತ್ ರೋಣ ಸ್ಟಾರ್ ಸುದೀಪ್ ಅವರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಈಗ ಸ್ವತಃ ಕಿಚ್ಚ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಸ್ಟಷ್ಟನೆ ನೀಡಿದ್ದಾರೆ. ಸುದೀಪ್‌ಗೆ ಕೊರೋನಾ ದೃಟಪಟ್ಟಿಲ್ಲ, ಬದಲಾಗಿ ವೈರಲ್‌ ಫೀವರ್‌ನಿಂದ ಕಿಚ್ಚ ಬಳಲುತ್ತಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸುದೀಪ್ ತೊಡಗಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕಾರ್ಯಕ್ಕಾಗಿ ಅನೇಕ ರಾಜ್ಯಗಳಿಗೆ ಸುತ್ತಾಡುತ್ತ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.

ಈ ಮೊದಲು ಕಳೆದ ವರ್ಷ ಕೊರೊನಾ ಹಾವಳಿ ಹೆಚ್ಚಿದ್ದ ಸಮಯದಲ್ಲಿ ಸುದೀಪ್ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಕೊರೊನಾಗೆ ಚಿಕಿತ್ಸೆ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆದಿದ್ದರು. ಸುದೀಪ್ ನಟನೆಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ತಿಂಗಳ 28ರಂದು ಬಹುನಿರೀಕ್ಷೆಯ ವಿಕ್ರಾಂತ್ ರೋಣ ರಿಲೀಸ್ ಆಗುತ್ತಿದೆ. ಕಳೆದ ಒಂದು ತಿಂಗಳಿಂದ ಪ್ರಚಾರ ಕಾರ್ಯದಲ್ಲಿ ಸುದೀಪ್ ಭಾಗಿಯಾಗಿದ್ದರು. ಮೊನ್ನೆಮೊನ್ನೆಯಷ್ಟೆ ಸುದೀಪ್ ಪತ್ರೀಕಾಗೋಷ್ಠಿ ಆಯೋಜಿಸಿದ್ದರು. ಸುದ್ಧಿಗೋಷ್ಠಿಯಲ್ಲಿ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸಹ ಭಾಗಿಯಾಗಿದ್ದರು. ಚಿತ್ರದ ಬಗ್ಗೆ ಸಾಕಷ್ಟು ಇಂಟ್ರಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದರು. 

ನಿರ್ದೇಶಕ ಮಣಿರತ್ನಂಗೆ ಕೊರೊನಾ ಪಾಸಿಟಿವ್; ಆಸ್ಪತ್ರೆಗೆ ದಾಖಲು

ರಾಜ್ಯದಲ್ಲಿ ಕೊರೊನಾ ಪ್ರಕರಣದ ವರದಿ: ರಾಜ್ಯದಲ್ಲಿ ಮಂಗಳವಾರ (ಜುಲೈ 20) 1,151 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1214 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 7,617 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 25 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4.5 ರಷ್ಟು ದಾಖಲಾಗಿದೆ. 

ಸೋಮವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 12 ಸಾವಿರ ಹೆಚ್ಚು ನಡೆದಿವೆ.  ಹೊಸ ಪ್ರಕರಣಗಳು 41 ಏರಿಕೆಯಾಗಿವೆ. ಸೋಮವಾರ 1,108 ಕೇಸ್‌, ಶೂನ್ಯ ಸಾವು ವರದಿಯಾಗಿತ್ತು. ಸತತ ಎರಡನೇ ದಿನ ಹೊಸ ಪ್ರಕರಣಗಳು ಒಂದು ಸಾವಿರಕ್ಕಿಂತ ಅಧಿಕ ವರದಿಯಾಗಿವೆ. ಕಳೆದ ನಾಲ್ಕು ದಿನಗಳಿಂದ ಸೋಂಕಿತರ ಸಾವು ವರದಿಯಾಗಿಲ್ಲ. ಸಕ್ರಿಯ ಸೋಂಕಿತರ ಪೈಕಿ 67 ಮಂದಿ ಆಸ್ಪತ್ರೆಯಲ್ಲಿದ್ದು, 7550 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.  

click me!