ಕಿಚ್ಚ ಸುದೀಪ್ ಮಗಳು ಸಾನ್ವಿ ಅವರು ಇತ್ತೀಚೆಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ಇಂಗ್ಲಿಷ್ ಮಾತನಾಡಿದ್ದು ಕೆಲವರಿಗೆ ಸಿಟ್ಟು ತರಿಸಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಾನ್ವಿ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ʼಸರಿಗಮಪʼ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಸಾನ್ವಿ ಸುದೀಪ್ ಅವರು ಕನ್ನಡ ಹಾಡು ಹಾಡಿ, ಇಂಗ್ಲಿಷ್‌ನಲ್ಲಿ ಸಂವಹನ ನಡೆಸಿದರು. ಆಗಲೂ ಅನೇಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಇಂಗ್ಲಿಷ್ ಪಾಡ್‌ಕಾಸ್ಟ್‌ವೊಂದರಲ್ಲಿ ಸಾನ್ವಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆಯೂ ಕೆಲವರು ಕೊಂಕು ನುಡಿದಿದ್ದಾರೆ. ಈಗ ಸಾನ್ವಿ ಸುದೀಪ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯಾವ ಭಾಷೆಯಲ್ಲಿ ಸಂದರ್ಶನ ಮಾಡ್ತಾರೆ ಎನ್ನೋದು ನಿರೂಪಕರಿಗೆ ಬಿಟ್ಟಿದ್ದು…!
“ಜಿನಲ್ ಮೋದಿ ಜೊತೆಗಿನ ಸಂದರ್ಶನದ ಬಗ್ಗೆ ನಾನು ಕೆಲ ವಿಷಯಗಳನ್ನು ಹೇಳಬೇಕಿದೆ. ಇಂಗ್ಲಿಷ್ ಪಾಡ್‌ಕಾಸ್ಟ್‌ನ್ನು ಇಂಗ್ಲಿಷ್‌ನಲ್ಲಿಯೇ ಮಾಡಲಾಗಿದೆ. ಇಂಗ್ಲಿಷ್ ಅರ್ಥ ಆಗದಿದ್ದವರ ಬಳಿ ಕ್ಷಮೆ ಕೇಳ್ತೀನಿ, ಕೆಲವರಿಗೆ ಕನ್ನಡವೂ ಅರ್ಥ ಆಗೋದಿಲ್ಲ. ಸಂದರ್ಶನ ಮಾಡುವವರು ಯಾವ ಭಾಷೆಯಲ್ಲಿ ಪ್ರಶ್ನೆ ಕೇಳ್ತಾರೆ ಎನ್ನೋದಕ್ಕೆ ಗಮನಕೊಡೋಣ, ಅವರ ಚಾನೆಲ್, ಅವರ ಭಾಷೆ” ಎಂದು ಸಾನ್ವಿ ಸುದೀಪ್ ಅವರು ಹೇಳಿದ್ದಾರೆ.
200 ಕೋಟಿ ಕೊಡ್ತೀನಿ ಆಸ್ಕರ್ ಪ್ರಶಸ್ತಿ ತರಿಸಿ ನೋಡೋಣ... ಟ್ರೋಲಿಗರ ವಿರುದ್ಧ ರೊಚ್ಚಿಗೆದ್ದ ಮಂಚು ವಿಷ್ಣು
ಕೆಟ್ಟ ಭಾಷೆಯಲ್ಲಿ ಯಾಕೆ ಮಾತಾಡ್ತೀರಿ?
“ನಾನು ಜೀವನದಲ್ಲಿ ಏನು ಸಾಧಿಸಿದ್ದೇನೆ, ಯಾಕೆ ಸಂದರ್ಶನ ಕೊಡುತ್ತಿದ್ದೇನೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ನನ್ನ ಎರಡು ಹಾಡು ರಿಲೀಸ್ ಆಗಿದೆ. ಹೀಗಿದ್ದರೂ ಜನರು ನನ್ನ ಕುಟುಂಬದ ಹೆಸರಿನಿಂದಲೇ ಗುರುತಿಸುತ್ತಿದ್ದಾರೆ. ನಾನು ಇದೇ ವಿಷಯವನ್ನು ಪಾಡ್‌ಕಾಸ್ಟ್‌ನಲ್ಲಿಯೂ ಮಾತನಾಡಿದ್ದೇನೆ. ಎಲ್ಲರ ಸಮಯವನ್ನು ಹಾಳು ಮಾಡೋ ಬದಲು ಪಾಡ್‌ಕಾಸ್ಟ್ ನೋಡಿರಬಹುದು. ಮಕ್ಕಳು, ಯುವಜನತೆ ನನ್ನ ಪ್ರೊಫೈಲ್ ನೋಡುತ್ತಿರುತ್ತಾರೆ, ಈ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡ್ತಿರೋದು ಸರಿ ಅಲ್ಲ” ಎಂದು ಸಾನ್ವಿ ಸುದೀಪ್ ಹೇಳಿದ್ದಾರೆ.
ʼಪಿಯುಸಿ ಆದ್ಮೇಲೆ ಓದಲಿಲ್ಲʼ; ಕಿಚ್ಚ ಸುದೀಪ್ ಮಗಳು ಸಾನ್ವಿ ಈ ರೀತಿ ನಿರ್ಧಾರ ತಗೊಂಡಿದ್ದೇಕೆ?
ನಾನು ಯಾಕೆ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡೆ ಅಂದ್ರೆ..!
“ಪಾಡ್‌ಕಾಸ್ಟ್‌ಗೆ ಯಾವ ರೀತಿ ಅತಿಥಿಗಳನ್ನು ಕರೆದುಕೊಂಡು ಬರಬೇಕು ಎನ್ನೋದು ಜಿನಲ್ ಮೋದಿ ಆಯ್ಕೆ. ಮೊದಲ ಪಾಡ್‌ಕಾಸ್ಟ್‌ಗೆ ಉನ್ನತ ಅತಿಥಿಗಳನ್ನು ಕರೆದುಕೊಂಡು ಬರೋದು ಸುಲಭ ಆಗಿದ್ರೆ, ನೀವು ಸೆಲೆಬ್ರಿಟಿಗಳನ್ನು ಭೇಟಿ ಆಗೋದನ್ನು ನಾನು ನೋಡ್ತಿದ್ದೆ. ಈಗ ತಾನೇ ಆರಂಭ ಮಾಡಿರೋ ಪಾಡ್‌ಕಾಸ್ಟ್‌ಗೆ ಬೆಂಬಲ ಕೊಡೋದು ಏನು ತಪ್ಪು? ಇದರಿಂದ ಏನೂ ಕಳೆದುಕೊಳ್ಳೋದಿಲ್ಲ. ಹೀಗಾಗಿ ನೀವು ನಿಮ್ಮ ಜೀವನದಲ್ಲಿ ಮುಂದುವರೆಯಿರಿ” ಎಂದು ಸಾನ್ವಿ ಸುದೀಪ್ ಹೇಳಿದ್ದಾರೆ.
ಕಿಚ್ಚ ಸುದೀಪ್ ಮಗಳು ಸಾನ್ವಿ ಅವರಿಗೆ ಸಿದ್ದಾರ್ಥ್ ಮಲ್ಹೋತ್ರ ಅಂದ್ರೆ ತುಂಬ ಇಷ್ಟವಂತೆ. ಇನ್ನು ಅಲ್ಲು ಅರ್ಜುನ್ ಕೂಡ ಫೇವರಿಟ್ ಅಂತೆ. ನಾನು ಸಾಧನೆ ಮಾಡಿ ಅವರನ್ನು ಭೇಟಿ ಆಗ್ತೀನಿ, ಅಪ್ಪನ ಮೂಲಕ ಭೇಟಿ ಆಗೋದಿಲ್ಲ ಎಂದು ಸಾನ್ವಿ ಸುದೀಪ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ತಂದೆಯ ಪಾರ್ಟಿಗಳಲ್ಲಿ ಯಶ್ ಭಾಗಿ ಆಗ್ತಿದ್ದರು, ಅವರ ಜೊತೆ ನಾನು ಆಟ ಆಡ್ತಿದ್ದೆ, ತಂದೆ ಸ್ನೇಹಿತನ ಮೇಲೆ ಕ್ರಶ್ ಆಗೋದಿಲ್ಲ ಎಂದು ಕೂಡ ಸಾನ್ವಿ ಹೇಳಿದ್ದಾರೆ. ಇನ್ನು ಪಿಯುಸಿ ಮುಗಿದ್ಮೇಲೆ ನಾನು ಓದಿಲ್ಲ, ಆಕ್ಟಿಂಗ್ ಕಡೆ ಗಮನ ಕೊಟ್ಟೆ ಎಂದು ಕೂಡ ಅವರು ಹೇಳಿದ್ದಾರೆ.