ಮಸ್ತಾಗಿತ್ತು ಡಾರ್ಲಿಂಗ್ ಕೃಷ್ಣ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮ. ಯಾರೆಲ್ಲಾ ಇದ್ದು?
‘ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಟ್ರೇಲರಲ್ಲಿ ಡಾರ್ಲಿಂಗ್ ಕೃಷ್ಣ ಅವ್ರು ಒಂದು ಮಾತು ಹೇಳಿದ್ದಾರೆ - ಹುಡುಗೀರು ತಲೆ ಮೇಲೆ ಕೂತ್ಕೊಳ್ಳೋಕೆ ಹೋದಾಗಲೆಲ್ಲ ಕಾಲೆಳೆದು ಕೆಳಗಡೆ ಹಾಕ್ಬೇಕು ಅಂತ. ಧೈರ್ಯ ಇದ್ರೆ ಇದನ್ನವರು ಮನೇಲಿ ಮಾಡ್ಲಿ ಸಾರ್. ಆಮೇಲೆ ಅವರು ರಿಯಲ್ ಮ್ಯಾನ್ ಅಂತ ನಾನೂ ಒಪ್ತೀನಿ. ಮಿಲನಾ ಅವ್ರ ಪಾಯಿಂಟೆಡ್ ಹೀಲ್ಸ್ ನೋಡಿದ್ರಲ್ಲಾ, ಒಂದು ವೇಳೆ ಅವ್ರು ಈ ಡೈಲಾಗ್ ಮನೇಲಿ ಹೇಳಿದ್ರೆ ಅದೆಲ್ಲಿರುತ್ತೆ ಅಂತ ಊಹಿಸಬಹುದು. ಈಗ ಹೇಳಿ ಕೃಷ್ಣ, ನೀವು ರಿಯಲ್ ಮ್ಯಾನಾ?’
ಡಾರ್ಲಿಂಗ್ ಕೃಷ್ಣ ನಟನೆಯ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ಟ್ರೇಲರ್ ಲಾಂಚ್‌ಗೆ ಬಂದ ಕಿಚ್ಚ ಸುದೀಪ್ ಡಾರ್ಲಿಂಗ್ ಕೃಷ್ಣಗೆ ಕಾಲೆಳೆದಿದ್ದು ಹೀಗೆ. ಸುದೀಪ್ ಪ್ರಶ್ನೆಗೆ ಡಾರ್ಲಿಂಗ್ ಕೃಷ್ಣ ಅವರ ನಗುವೇ ಉತ್ತರವಾಗಿತ್ತು.
ಥಾಯ್‌ಲ್ಯಾಂಡಿನ 74ನೇ ಮಹಡಿ ಮೇಲೆ ಕೃಷ್ಣ, ಮಿಲನಾ: ಈ ರೀಲ್ಸ್ 10 ಕೋಟಿ ಜನ ನೋಡಿದ್ದೇಕೆ?
ಡಾರ್ಲಿಂಗ್ ಕೃಷ್ಣ, ‘ನನ್ನ ನಟನಾ ಕೆರಿಯರ್‌ನಲ್ಲಿ ದಿ ಬೆಸ್ಟ್ ಕಥೆ ಈ ಚಿತ್ರದ್ದು. ಇದೊಂದು ಬೆಸ್ಟ್ ಫಿಲಂ ಆಗುತ್ತೆ. ಇನ್ನು ರಿಯಲ್ ಮ್ಯಾನ್ ವಿಷಯಕ್ಕೆ ಬರೋದಾದ್ರೆ ನನ್ ಪ್ರಕಾರ ರಿಯಲ್ ಮ್ಯಾನ್ ಸುದೀಪ್. ನಮ್ಮನೇಲೆಲ್ಲ ಗೆಸ್ಟ್‌ಗಳಿಗೆ ಹೆಂಡತಿ, ಅಮ್ಮ ಅಡುಗೆ ಮಾಡಿ ಬಡಿಸಿದ್ರೆ ಸುದೀಪ್ ಸ್ವತಃ ತಾವೇ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸ್ತಾರೆ. ನಮಗೆಲ್ಲ ತಿನ್ನಿಸ್ತಾರೆ’ ಅಂದರು.
ಇಟಲಿಯಲ್ಲಿ ಕೃಷ್ಣ ಮಿಲನಾ; ಮಂಡ್ಯ ಮೈಸೂರು ಕಡೆ ಬಾರಣ್ಣ ಎಂದ ನೆಟ್ಟಿಗರು!
ನಿರ್ದೇಶಕ ಶಶಾಂಕ್, ನಾಯಕಿ ಬೃಂದಾ, ವಿಶೇಷ ಪಾತ್ರದಲ್ಲಿ ನಟಿಸಿರುವ ಮಿಲನಾ ನಾಗರಾಜ್ ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕರಾದ ಬಿ ಸಿ ಪಾಟೀಲ್, ಸೃಷ್ಟಿ ಪಾಟೀಲ್ ಇದ್ದರು.