ದಕ್ಷಿಣ ಭಾರತದ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿದೆ. ಹಿಂದಿ ಸಿನಿಮಾರಂಗ ಸರಣಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಈ ಬಗ್ಗೆ ಕಿಚ್ಚನಿಗೆ ಪ್ರಶ್ನೆ ಎದುರಾಗಿದೆ. ಸೌತ್ ಸಿನಿಮಾಗಳ ಸಕ್ಸಸ್ ಬಗ್ಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್‌ಗೆ ಎದುರುನೋಡುತ್ತಿದ್ದಾರೆ. ಈಗಾಗಲೇ ಕಿಚ್ಚ ಅಂಡ್ ಟೀಂ ಭರ್ಜರಿ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕಾರ್ಯ ದೇಶದಾದ್ಯಂತ ನಡೆಯುತ್ತಿದೆ. ಸುದೀಪ್ ಮತ್ತು ತಂಡ ಅನೇಕ ರಾಜ್ಯಗಳಿಗೆ ಭೇಟಿ ನೀಡಿ ವಿಕ್ರಾಂತ್ ರೋಣ ಪ್ರಮೋಷನ್ ಮಾಡುತ್ತಿದ್ದಾರೆ. ಈ ನಡುವೆ ಸುದೀಪ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಈ ಸಮಯದಲ್ಲಿ ಕಿಚ್ಚ ಬಾಲಿವುಡ್ ನಲ್ಲಿ ಸೌತ್ ಸಿನಿಮಾಗಳ ಅಬ್ಬರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿ ಸಿನಿಮಾರಂಗದಲ್ಲಿ ಸೌತ್ ಸಿನಿಮಾಗಳೇ ರಾರಾಜಿಸುತ್ತಿವೆ. ಬ್ಯಾಕ್ ಟು ಬ್ಯಾಕ್ ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ನಲ್ಲಿ ಅಬ್ಬರಿಸುತ್ತಿವೆ. ಪುಷ್ಪ, ಕೆಜಿಎಫ್ 2, ಆರ್ ಆರ್ ಆರ್, 777 ಚಾರ್ಲಿ, ವಿಕ್ರಮ್ ಸಿನಿಮಾಗಳು ಬಾಲಿವುಡ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಕ್ಷಿಣ ಭಾರತದ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿದೆ. ಹಿಂದಿ ಸಿನಿಮಾರಂಗ ಸರಣಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಇತ್ತೀಚಿಗೆ ರಿಲೀಸ್ ಆದ ಭೂಲ್ ಭುಲೈಯಾ-2 ಸಿನಿಮಾ ಬಿಟ್ಟರೆ ಬೇರೆ ಯಾವ ಸಿನಿಮಾಗಳು ಬಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿಲ್ಲ. ಸೌತ್ ಸಿನಿಮಾಗಳೇ ಅಬ್ಬರಿಸುತ್ತವೆ. ಈ ಬಗ್ಗೆ ಕಿಚ್ಚನಿಗೆ ಪ್ರಶ್ನೆ ಎದುರಾಗಿದೆ. ಹಿಂದೂಸ್ತಾನ್ ಟೈಮ್ಸ್ ಜೊತೆ ಮಾಡಿರುವ ಸುದೀಪ್ ಸೌತ್ ಸಿನಿಮಾಗಳ ಸಕ್ಸಸ್ ಬಗ್ಗೆ ಹೇಳಿದ್ದಾರೆ.
ಸೌತ್ ಸಿನಿಮಾಗಳ ಅಬ್ಬರದ ಬಗ್ಗೆ ಕಿಚ್ಚನ ಮಾತು
ಹಿಂದಿ ಬೆಲ್ಟ್‌ನಲ್ಲಿ ಬಾಲಿವುಡ್ ಚಿತ್ರಗಳನ್ನು ಹಿಂದಿಕ್ಕಿ ದಕ್ಷಿಣದ ಚಲನಚಿತ್ರಗಳು ಕನ್ನಡ ಇಂಡಸ್ಟ್ರಿ ಸೇರಿದಂತೆ ಆಳುತ್ತಿವೆ, ಈ ಸಮಯದಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗುತ್ತಿದೆ ಏನು ಹೇಳುತ್ತೀರಿ? ಎಂದು ಕೇಳಿದ ಪ್ರಶ್ನೆಗೆ ಸುದೀಪ್, 'ಕಂಟೆಂಟ್ ಮಾತನಾಡಲು ಪ್ರಾರಂಭಿಸಿದಾಗ, ಅದು ಪ್ರಯಾಣಿಸಲು ಪ್ರಾರಂಭಿಸುತ್ತದೆ. ಇದರಲ್ಲಿ ಬಲವಂತ ಏನಿಲ್ಲ. ತಾನಾಗಿಯೇ ನಡೆದುಕೊಂಡು ಹೋಗುತ್ತಿದೆ. ಇದು ಕಟೆಂಟ್‌ನ ಗೆಲುವು' ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇರ್ಬೇಡ ಅಂತ ಅಪ್ಪ ಓಡ್ಸಿದ್ರು ಆಗ ದೆಹಲಿಗೆ ಹೋಗಿದ್ದೆ: ಸುದೀಪ್
ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳಿಂದ ಸೌತ್ ಮತ್ತು ಬಾಲಿವುಡ್ ನಡುವೆ ಕ್ರಾಸ್ ಫ್ಲೋ ನಿಲ್ಲಿಸಿದೆಯೇ ಎಂದು ಕೇಳಿದ ಪ್ರಶ್ನೆಗೆ ಸುದೀಪ್, 'ನಾವು ಹಮ್ ದಿಲ್ ದೇ ಚುಕೇ ಸನಮ್, ಮೈನೆ ಪ್ಯಾರ್ ಕಿಯಾ, ನಾವು ಶೋಲೆ, ಹಮ್ ಸಾಥ್ ಸಾಥ್ ಹೇ ಮತ್ತು ಕಭಿ ಖುಷಿ ಕಭಿಗಳನ್ನು ನೋಡುತ್ತಿದ್ದೆವು. ಆ ಸಂಸ್ಕೃತಿಯ ಚಿತ್ರಗಳನ್ನು, ಗುಜರಾತಿ ಮತ್ತು ಪಂಜಾಬಿ ಕುಟುಂಬಗಳ ಕಥೆಗಳನ್ನು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ನೋಡಿದ್ದೇವೆ. ಇದು ಸಾಂಸ್ಕೃತಿಕ ಭಿನ್ನತೆಗಳ ಬಗ್ಗೆ ಅಲ್ಲ. ನೀವು ನೋಡದಿರುವುದನ್ನು ನಾವು ನಿಮಗೆ ನೀಡಿದರೆ ಅದು ನಿಮಗೆ ನೀವು ಆಸಕ್ತಿಕರವಾಗಿರುತ್ತದೆ' ಎಂದು ಹೇಳಿದರು.
ದುಡಿದ ಹಣವನ್ನು ಅಭಿಮಾನಿಗಳಿಗೆ ಮತ್ತು ಸಮಾಜ ಸೇವೆ ಕೊಟ್ಟಿದ್ದೇನೆ, ನನಗೆ ಏನೂ ಮಾಡಿಕೊಂಡಿಲ್ಲ: ಸುದೀಪ್
ಸಲ್ಮಾನ್ ಖಾನ್ ಬಗ್ಗೆ ಸುದೀಪ್ ಪ್ರತಿಕ್ರಿಯೆ
ಇದೇ ಸಮಯದಲ್ಲಿ ಸಲ್ಮಾನ್ ಖಾನ್ ಹಿಂದಿ ವರ್ಷನ್ ವಿಕ್ರಾಂತ್ ರೋಣ ಸಿನಿಮಾವನ್ನು ಪ್ರೆಸೆಂಟ್ ಮಾಡಲು ಒಪ್ಪಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಲ್ಮಾನ್ ಖಾನ್ ಮತ್ತು ತಾನು ಸಹೋದರಹಾಗೆ ಇದ್ದೀವಿ. ನಮ್ಮ ಸಂಬಂಧ ಸಿನಿಮಾಗಿಂತ ಮಿಗಿಲಾಗಿದೆ ಎಂದು ಹೇಳಿದರು. ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗೆ ದಿನಗಣನೆ ಪ್ರಾರಂಭವಾಗಿದೆ. ಜುಲೈ 28ಕ್ಕೆ ಸಿನಿಮಾ ದೇಶ-ವಿದೇಶಗಲ್ಲಿ ರಿಲೀಸ್ ಆಗುತ್ತಿದೆ.