ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು; ಕೆಜಿಎಫ್ 2 ನಲ್ಲಿ ನಟಿಸ್ತಾರಾ?

Published : Apr 22, 2019, 11:41 AM IST
ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು; ಕೆಜಿಎಫ್ 2 ನಲ್ಲಿ ನಟಿಸ್ತಾರಾ?

ಸಾರಾಂಶ

ಕೆಜಿಎಫ್- 2 ಶೂಟಿಂಗ್ ಶುರು | ನಟಿ ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು | ಕೆಜಿಎಫ್2 ಶೂಟಿಂಗ್‌ನಲ್ಲಿ ಭಾಗವಹಿಸ್ತಾರಾ? 

ಕನ್ನಡ ಚಿತ್ರರಂಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ ಸಿನಿಮಾ ಕೆಜಿಎಫ್.  ಅನೇಕ ದಾಖಲೆಗಳನ್ನು ಈ ಸಿನಿಮಾ ತನ್ನದಾಗಿಸಿಕೊಂಡಿದೆ. ಇದೀಗ ಕೆಜಿಎಫ್-2 ಶೂಟಿಂಗ್ ಶುರುವಾಗಿದೆ. 

ಆದರೆ ನಟಿ ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ರೀನಾ ಪಾತ್ರದ ಮೂಲಕ ಶ್ರೀನಿಧಿ ಶೆಟ್ಟಿ ಜನಪ್ರಿಯತೆ ಗಳಿಸಿದ್ದರು. ಕೆಜಿಎಫ್2 ನಲ್ಲೂ ಇವರ ಪಾತ್ರ ಪ್ರಮುಖವಾಗಿದೆ. 

ಶ್ರೀನಿಧಿ ಶೆಟ್ಟಿ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿದ್ದರು. ಅದರಲ್ಲಿ ಅವರ ಕೈಗೆ ಪೆಟ್ಟಾಗಿದ್ದು ಬ್ಯಾಂಡೇಜ್ ಕಟ್ಟಿಕೊಂಡಿದ್ದನ್ನು ಗಮನಿಸಬಹುದಾಗಿದೆ. ಈಗಾಗಲೇ ಕೆಜಿಎಫ್2 ಶೂಟಿಂಗ್ ಶುರುವಾಗಿದ್ದು ಶ್ರೀನಿಧಿ ಭಾಗವಹಿಸ್ತಾರಾ ಎಂಬ ಕುತೂಹಲ ಮೂಡಿದೆ.

 

ಶ್ರೀನಿಧಿ ಶೆಟ್ಟಿ ಕರುವಿನೊಂದಿಗಿರುವ ಫೋಟೋದಲ್ಲಿ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡಿರುವುದನ್ನು ನೋಡಬಹುದು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‌ದೊಡ್ಮನೆ ಹಬ್ಬ ಮಾಡಿ Bigg Boss ಸ್ಪರ್ಧಿಗಳ ಗುಟ್ಟು ರಟ್ಟು ಮಾಡಿದ Bhagyalakshmi Serial ನಟಿ ಸುಷ್ಮಾ ರಾವ್
Gilli Nata: ಜೈಲಿಗೆ ಹೋಗಿ ನಟ ದರ್ಶನ್ ಭೇಟಿಯಾಗಲು ಪ್ರಯತ್ನಿಸಿದ್ದು ನಿಜ.. ಸತ್ಯ ಒಪ್ಪಿಕೊಂಡ ಗಿಲ್ಲಿ ನಟ!