
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್, ಕೆಜಿಎಫ್ ಕಿಂಗ್ ಯಶ್ ಪುತ್ರ ಯಥರ್ವ್ ಜೊತೆ ಆಟವಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಬಹುದಿನಗಳ ನಂತರ ಯಶ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು ಪುತ್ರನ ಸ್ಪೆಷಲ್ ಪದದ ಬಗ್ಗೆ ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟಿದ್ದಾರೆ.
'Ohoooo' ಮಾಲ್ಡೀವ್ಸ್‌ನಲ್ಲಿ ಡಾಲ್ಫಿನ್‌ಗಳನ್ನು ನೋಡಿ ಎಗ್ಸೈಟ್ ಆದ ರಾಧಿಕಾ ಪಂಡಿತ್, ಐರಾ!
ಯಶ್ ಬಾಯಲ್ಲಿ ಗಾಳಿ ತುಂಬಿಕೊಂಡು ಮಗನಿಗೆ ಡಬ್ ಮಾಡುವಂತೆ ಹೇಳುತ್ತಾರೆ. ಯಥರ್ವ್ ಹಾಗೆ ಆಟವಾಡುತ್ತಾ ಅಪಾಪೀನ್ ಎಂಬ ಪದ ಬಳಸುತ್ತಾರೆ. ಆರಂಭದಲ್ಲಿ ಏನೆಂದು ಅರ್ಥವಾಗದ ಕಾರಣ ಯಶ್ ಎರಡೆರಡು ಬಾರಿ ಅದೇ ಪದವನ್ನು ರಿಪೀಟ್ ಮಾಡುತ್ತಾರೆ. ವಿಭಿನ್ನ ಧ್ವನಿಯಲ್ಲಿ ಯಶ್ ಅಪಾಪೀನ್ ಹೇಳಿದಂತೆ ಅಥರ್ವ್ ಕೂಡ ಹೇಳುತ್ತಾನೆ, ಆನಂತರ ಅಪಾಪೀನ್ ಅಂದರೆ ಏನೆಂದು ಕೈ ಸನ್ನೆ ಮಾಡಿ ತೋರಿಸುತ್ತಾನೆ.
ಹೌದು! ಯಥರ್ವ್ ಭಾಷೆಯಲ್ಲಿ ಅಪಾಪೀನ್ ಅಂದ್ರೆ ಏರೋಪ್ಲೇನ್ ಎಂದರ್ಥ. ಕೈಯಲ್ಲಿ ಏರೋಪ್ಲೇನ್ ಹೋಗುವ ಸನ್ನೆ ಮಾಡಿ 'Ushhhh' ಎಂದು ಶಬ್ಧ ಮಾಡುತ್ತಾನೆ. ಪುತ್ರನ ಏರೋಪ್ಲೇನ್ ಆಕ್ಷನ್ ನೋಡಿ ಯಶ್ ಖುಷಿ ಪಟ್ಟ ಮುತ್ತಿಡುತ್ತಾರೆ. ಅಪ್ಪ-ಮಗನ ಈ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಶ್ ಹಾಗೂ ಯಥರ್ವ್ ಆಟವಾಡುತ್ತಿದ್ದರೆ ಎಲ್ಲಿಂದಲೋ ಐರಾ ಬೇಬಿ ಧ್ವನಿ ಕೇಳಿಸುತ್ತಿತು.
ಮಿಕ್ಕಿ ಮೌಸ್ ಜೊತೆ ಪೋಸ್ ಕೊಟ್ಟ ಐರಾ; ತಾಯಿ ಜೊತೆ ಬೀಚ್‌ನಲ್ಲಿ ಯಥರ್ವ್!
ಈ ಹಿಂದೆ ಯಶ್ ಮತ್ತು ಐರಾ ಐಸ್ ಕ್ರೀಮ್ ತಿನ್ನುವ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಐರಾ ಅಪ್ಪನಿಗೆ ತಿನ್ನಿಸುವುದಾಗಿ ಹೇಳಿ ತುಂಟತನದಿಂದ ತಾನೇ ತಿನ್ನುತ್ತಿದ್ದಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.