ಸೆಲ್ಫಿ ಕ್ಲಿಕ್ ಮಾಡುತ್ತಿದ್ದ ರಾಧಿಕಾ; ಬೋರಾಗಿ ವಿಡಿಯೋ ಮಾಡಿದ ಯಶ್-ಐರಾ!

By Suvarna News  |  First Published Sep 15, 2020, 11:55 AM IST

ರಾಧಿಕಾ ಪಂಡಿತ್ ಸೆಲ್ಫಿ ಕ್ಲಿಕ್ ಮಾಡುತ್ತಲೇ ಇರುವಾಗ ಬೇಜಾರಾಗಿ ಪತಿ ರಾಕಿಂಗ್ ಸ್ಟಾರ್ ಯಶ್  ಮಗಳು ಐರಾ ಜೊತೆಗೂಡಿ ವಿಡಿಯೋವನ್ನು  ಸೆರೆ ಹಿಡಿದಿದ್ದಾರೆ. ಇದೀಗ ಆ ವಿಡಿಯೋ ಸೋಷಿಯಲ್ ಮಿಡೀಯಾದಲ್ಲಿ ವೈರಲ್ ಆಗುತ್ತಿದೆ. 


ಹಾಸನದ ಫಾರ್ಮ್‌ಹೌಸ್‌ನಲ್ಲಿ ಪುತ್ರನ ನಾಮಕರಣ ಮಾಡಿ ಕೆಲ  ದಿನಗಳ ಕಾಲ ಪರಿಸರದ ನಡುವೆ ಸಮಯ ಕಳೆದಿರುವ ರಾಕಿಂಗ್ ದಂಪತಿಗಳು ಈ ಬಗ್ಗೆ ಅಭಿಮಾನಿಗಳಿಗೆ  ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್‌ ನೀಡುತ್ತಲೇ ಇದ್ದಾರೆ.  ಅದರಲ್ಲೂ ರಾಧಿಕಾ ಪಂಡಿತ್‌ಗೆ ಅಭಿಮಾನಿಗಳು ಮೆಸೇಜ್ ಮಾಡಿದ ಲಿಟಲ್‌ ಸ್ಟಾರ್ಸ್‌ಗಳ ಬಗ್ಗೆ ಕೇಳುತ್ತಲ್ಲೇ ಇರುತ್ತಾರಂತೆ. 

Tap to resize

Latest Videos

undefined

ರಾಧಿಕಾ ಸೆಲ್ಫಿ:

ನಟಿ ರಾಧಿಕಾರನ್ನು ನೋಡಿದರೆ ನಮ್ಮ ಪಕ್ಕದ ಮನೆ ಹುಡುಗಿ ರೀತಿ ಭಾಸವಾಗುತ್ತದೆ. ಆಕೆ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ನಮಗೆ ಕನೆಕ್ಟ್ ಆಗುತ್ತದೆ ಅಲ್ಲದೇ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ಬೆರೆಯುವ ರೀತಿಗೆ ಫಿದಾ ಆಗಿದ್ದಾರೆ . ಇದೀಗ  ರಾಧಿಕಾ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಿದ್ದರೆ ಪತಿ ಯಶ್ ಹಾಗೂ ಪುತ್ರಿ ಐರಾ ಅದನ್ನು ವಿಡಿಯೋ ಮಾಡಿದ್ದಾರೆ. ಒಂದೊಳ್ಳೆ ಸೆಲ್ಫಿ ಕ್ಯಾಪ್ಚರ್ ಮಾಡಲು ರಾಧಿಕಾ ಹೇಗೆಲ್ಲಾ ಪ್ರಯತ್ನಿಸುತ್ತಾರೆ ಎಂದು ಈ ವಿಡಿಯೋದಲ್ಲಿ ನೋಡಬಹುದು.

 

'ಎಲ್ಲಾ ಹುಡುಗೀಯರು ಒಳ್ಳೆ 'ಸೆಲ್ಫಿ ಲೈಫ್‌' ಹಿಂದೆ ಈ ಸಾಹಸವಿದ್ದರೆ   ಹೇಗೆ ಪರ್ಫೆಕ್ಟ್ ಸೆಲ್ಫಿ  ಬರುತ್ತದೆ ಹೇಳಿ? ತುಂಬಾನೇ ಕಷ್ಟದ ಕೆಲಸ. ಬೋರಾದ ತಂದೆ ಮಗಳು ನನಗೆ ತಿಳಿಯದ ಹಾಗೆ ಸೆರೆ ಹಿಡಿದ ವಿಡಿಯೋ ಇದು' ಎಂದು ರಾಧಿಕಾ ಬರೆದಿದ್ದಾರೆ.

ಗೌರಿ ಹಬ್ಬಕ್ಕೆ 'ಪಾಥೋಲಿ' ಸ್ವೀಟ್‌ ತಯಾರಿಸಿದ ರಾಧಿಕಾ ಪಂಡಿತ್! 

'ಕ್ಲಿಕ್ ಮಾಡಿದ ಸೆಲ್ಫೆ ಶೇರ್ ಮಾಡಿ ಅಕ್ಕ' ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಮಾಡಿದ್ದರೆ. ಐರಾ ಫ್ಯಾನ್‌ ಫೇಜ್‌ಗಳು 'ಛೇ ಕೊನೆಯಲ್ಲಿ ಐರಾ ಬೇಬಿ ಮುಖ ನೋಡುವುದು ಮಿಸ್ ಆಯ್ತು' ಎಂದಿದ್ದಾರೆ.

click me!