ಪತ್ನಿ ಕೈ ರುಚಿ ಸವಿದಿಲ್ಲ ಎಂದ ನಿಖಿಲ್‌ ಕುಮಾರಸ್ವಾಮಿಗೆ ರೇವತಿ ಮಾಡಿಕೊಟ್ಟೇಬಿಟ್ರು ಚಿಕನ್‌?

By Suvarna News  |  First Published Sep 14, 2020, 12:08 PM IST

ಸೆಲ್ಫಿ ಹಾಗೂ ಟ್ರ್ಯಾವಲಿಂಗ್ ಪೋಟೋಗಳನ್ನು ಶೇರ್ ಮಾಡುತ್ತಿದ್ದ ನಿಖಿಲ್ ಕುಮಾರಸ್ವಾಮಿ ಇದೀಗ ಪತ್ನಿ ರೇವತಿ ಅಡುಗೆ ಮಾಡುತ್ತಿರುವ ವಿಡಯೋವನ್ನು ಶೇರ್ ಮಾಡಿಕೊಂಡಿದ್ದಾರೆ. 'ಅತ್ತಿಗೆ '  ಬಗ್ಗೆ ನೆಟ್ಟಿಗರು ಹೇಳಿದ ಮಾತುಗಳನ್ನು ಕೇಳಿ.


ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಇತ್ತೀಚಿಗೆ ನಿರೂಪಕಿ ಅನುಶ್ರೀ ಅವರ ಯುಟ್ಯೂಬ್‌ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಮೊದಲ ಬಾರಿ ಪತ್ನಿ ರೇವತಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಪತ್ನಿ ಕೈ ರುಚಿ ಬಗ್ಗೆಯೂ ಹೇಳಿದ್ದಾರೆ. 

ಹೊಸ ಮನೆ ಕಟ್ಟಲು ಮುಂದಾದ ನಿಖಿಲ್ ಕುಮಾರಸ್ವಾಮಿ- ರೇವತಿ! 

Tap to resize

Latest Videos

ಲಾಕ್‌ಡೌನ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ತಮ್ಮ ರಾಜಕೀಯ ಜರ್ನಿ, ಮ್ಯಾರಿಡ್‌ ಲೈಫ್‌ ಹಾಗೂ ಟ್ರೋಲ್‌ಗಳ ಬಗ್ಗೆ ಅನುಶ್ರೀ ಜೊತೆ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಪತ್ನಿ ಬಗ್ಗೆ ನಿಖಿಲ್ ಹೇಳಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

undefined

ರೇವತಿ ತುಂಬಾ innocent:

ಹೌದು! ರೇವತಿ ಜೊತೆ ಪೋಟೋ ಶೇರ್ ಮಾಡಿದರೆ ಮಾತ್ರ ವೈರಲ್ ಅಲ್ಲ ಅವರ ಗುಣದ ಬಗ್ಗೆ ಹೇಳಿರುವ ಮಾತುಗಳು ತುಂಬಾನೇ ವೈರಲ್ ಆಗಿದೆ. 'ಕೊರೋನಾದಿಂದ ಅನೇಕ ಜನರ ದಿನ ನಿತ್ಯದ ಜೀವನಕ್ಕೆ ತುಂಬಾನೇ ತೊಂದರೆ ಆಗಿದೆ ಅದಕ್ಕೆ ಬೇಸರವಾಗುತ್ತದೆ. ನಮಗೆ ಯಾವುದೇ ಕೆಲಸವಿಲ್ಲದ ಕಾರಣ ಇಬ್ಬರಿಗೂ ಒಳ್ಳೆ ಸಮಯ ಸಿಕ್ಕಿದೆ. ನನ್ನ ಹೆಂಡತಿ ನನಗೆ ಹೊಸಬರು ಅನಿಸುತ್ತಿಲ್ಲ. ತುಂಬಾ ವರ್ಷಗಳಿಂದ ನಮ್ಮಿಬ್ಬರಿಗೂ ಪರಿಚಯವಿದೆ ಅನಿಸುತ್ತಿದೆ. ನಾವು ಹೊಸ ಜರ್ನಿಯನ್ನು ಎಂಜಾಯ್ ಮಾಡುತ್ತಿದ್ದೀವಿ.ರೇವತಿ ನನಗಿಂತ 100 ಪಟ್ಟು ಮನುಷ್ಯತ್ವ ಇರುವ ವ್ಯಕ್ತಿ. ಮನಸ್ಸು ಮಗುವಿನ ಥರ.ಅವರು  ತುಂಬಾ ವಂಡರ್ಫುಲ್ ವ್ಯಕ್ತಿ ನಾನು ತುಂಬಾನೇ ಲಕ್ಕಿ' ಎಂದು ಹೇಳಿದ್ದಾರೆ. 

"

ಪತ್ನಿ ಕೈ ರುಚಿ:

ರೇವತಿ ಅಡುಗೆ ಚೆನ್ನಾಗಿ ಮಾಡುತ್ತಾರಾ? ಎಂದು ಅನುಶ್ರೀ ಕೇಳಿದ ಪ್ರಶ್ನೆಗೆ ನಿಖಿಲ್ ನಗುನಗುತ್ತಾ ಉತ್ತರಿಸಿದ್ದು 'ಅವರು ಇದೂವರೆಗೂ ಇನ್ನು ಅಡುಗೆ ಮಾಡಿಲ್ಲ.ನೀವು ಅವರನ್ನೇ ಕೇಳಬೇಕು. ಆದರೆ ಯಾವಾಗಲೋ ಒಂದು ಸಲ ಬಿರಿಯಾನಿ ಮಾಡಿದ್ದರಂತೆ ಆದರೆ ನನಗೆ ಗೊತ್ತಿಲ್ಲ' ಎಂದಿದ್ದರು.

 

ಸಂದರ್ಶನ ರಿಲೀಸ್‌ ಆದ ಎರಡನೇ ದಿನದಲ್ಲಿ ಪತ್ನಿ ಮನೆಯಲ್ಲಿ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಅಭಿಮಾನಿಗಳ ಸ್ಕ್ರೀನ್‌ಶಾಟ್‌ ಹಿಡಿದು ಶೇರ್ ಮಾಡಿಕೊಂಡು ಅಡುಗೆ ಏನಿರ ಬಹುದು ಎಂದು ಗೆಸ್ ಮಾಡಿದ್ದಾರೆ. ಕೆಲವರು ಅದನ್ನು ಪನೀರ್‌ ಚಿಲ್ಲಿ ಎಂದರೆ ಕೆಲವರೂ ಪಕ್ಕಾ ಗೌಡ್ರು ಆಗಿರೋ ಕಾರಣ ಅದು ಚಿಕನ್ ಆಗಿರುತ್ತದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪತ್ನಿ ಕೈರುಚಿ ನೋಡಲು ಕಾಯುತ್ತಿದ್ದ ನಿಖಿಲ್‌ಗೆ ಈ ಮೂಲಕ  ಸವಿಯಲು ಯಮ್ಮಿ ಯಮ್ಮಿ ಚಿಕನ್‌ ಸಿಕ್ತು.

click me!