Rocking Star Yash ನಟನೆಯ ಹೊಸ ಚಿತ್ರ ನವೆಂಬರ್‌ 1ಕ್ಕೆ ಘೋಷಣೆ!

Published : Oct 27, 2023, 08:40 PM ISTUpdated : Nov 01, 2023, 12:41 PM IST
Rocking Star Yash ನಟನೆಯ ಹೊಸ ಚಿತ್ರ ನವೆಂಬರ್‌ 1ಕ್ಕೆ ಘೋಷಣೆ!

ಸಾರಾಂಶ

ನಟ ಯಶ್‌ ಅವರ ಹೊಸ ಸಿನಿಮಾ ಯಾವಾಗ ಘೋಷಣೆ ಎನ್ನುವ ಅವರ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.1ರಂದು ಯಶ್‌ ಅವರ 19ನೇ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ ಎಂಬುದು ಸದ್ಯದ ಸುದ್ದಿ. 

ನಟ ಯಶ್‌ ಅವರ ಹೊಸ ಸಿನಿಮಾ ಯಾವಾಗ ಘೋಷಣೆ ಎನ್ನುವ ಅವರ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.1ರಂದು ಯಶ್‌ ಅವರ 19ನೇ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ ಎಂಬುದು ಸದ್ಯದ ಸುದ್ದಿ. ಅಂದಹಾಗೆ ಈ ಚಿತ್ರವನ್ನು ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡುತ್ತಿದ್ದು, ಕೆವಿಎನ್‌ ಸಂಸ್ಥೆ ನಿರ್ಮಿಸುತ್ತಿದೆ. ಕತೆ ಹಾಗೂ ಚಿತ್ರಕಥೆ ಎಲ್ಲವೂ ರೆಡಿಯಾಗಿದ್ದು, ಚಿತ್ರದ ಫಸ್ಟ್‌ ಲುಕ್‌ ಸಮೇತ ಚಿತ್ರವನ್ನು ಘೋಷಣೆ ಮಾಡಲಿದ್ದಾರಂತೆ. ಈ ಬಗ್ಗೆ ಕೆವಿಎಎನ್‌ ಸಂಸ್ಥೆಯ ಸುಪ್ರಿತ್‌ ಅವರ ಮಾತನಾಡಿ, ‘ಯಶ್‌ 19 ಹೆಸರಿನಲ್ಲಿ ಸುದ್ದಿಯಾಗುತ್ತಿರುವ ಚಿತ್ರವು ಕೆವಿಎನ್‌ ಸಂಸ್ಥೆಯೇ ನಿರ್ಮಿಸಲಿದೆ ಎಂಬುದು ನಿಜ. 

ಗೀತು ಮೋಹನ್‌ದಾಸ್‌ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಆದರೆ, ಯಾವಾಗ ಚಿತ್ರದ ಘೋಷಣೆ ಎಂಬುದು ಈಗಲೇ ಹೇಳಲಾಗದು’ ಎನ್ನುತ್ತಾರೆ. ಆದರೆ, ಸದ್ಯದ ಮಾಹಿತಿ ಪ್ರಕಾರ ನ.1ಕ್ಕೆ ಯಶ್‌ 19 ಸಿನಿಮಾ ಸೆಟ್ಟೇರಲಿದೆ. ರಾಕಿಂಗ್ ಸ್ಟಾರ್ ಯಶ್ ದೇಹದವನ್ನ ಇಳಿಸಿಕೊಳ್ಳುತ್ತಿದ್ದಾರೆ. ಈ ಹಿಂದಿನ ಲುಕ್ ಏನಿತ್ತೋ ಅದು ಇದೀಗ ಕಾಣಿಸುತ್ತಿಲ್ಲ. ಬೇರೆ ರೀತಿಯಲ್ಲಿಯೇ ಯಶ್ ಕಂಗೊಳಿಸುತ್ತಿದ್ದಾರೆ. ಮೊನ್ನೆ ದಸರಾ ಹಬ್ಬಕ್ಕೆ ಗಂಡ-ಹೆಂಡ್ತಿ ಜನಕ್ಕೆ ಶುಭಾಷಯ ತಿಳಿಸಿದ್ರು. ಜೋಡಿ ಹಕ್ಕಿಯಂತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು.

ರಾಕಿಂಗ್​ ಸ್ಟಾರ್ ಯಶ್ ಮನೆಯಲ್ಲಿ ದಸರಾ ಧಮಾಕ: ಐರಾ, ಯಥರ್ವ್ ಸೈಕಲ್​ ಸವಾರಿ ನೀವು ನೋಡಿ!

ಬಾಲಿವುಡ್ ರಾಮಾಯಣಕ್ಕೆ ಯಶ್ ಸಂಭಾವನೆ ಎಷ್ಟು?: ಯಶ್ 19 , ಕೆಜಿಎಫ್ 3 ಸಿನಿಮಾಗಳು ಯಶ್ ಖಾತೆಯಲ್ಲಿದ್ದು ಅದಕ್ಕೂ ಮುನ್ನ ಯಶ್ ರಾವಣನಾಗ್ತಾರೆ ಅನ್ನೋ ಸುದ್ದಿ ದಟ್ಟವಾಗಿ ಹಬ್ಬಿದೆ.ಬಾಲಿವುಡ್ನಲ್ಲಿ ರಾಮಾಯಣ ಮಾಡೋದು ಖಚಿತವಾಗಿದೆ. ರಣ್ಬೀರ್ಕಪೂರ್ ರಾಮನಾಗಿ ಹಾಗೂ ಸಾಯಿಪಲ್ಲವಿ ಸೀತೆಯಾಗಿ ನಟಿಸುವುದು ಖಚಿತವಾಗಿದೆ, ಇ್ತತ ರಾಕಿಭಾಯ್ ಯಶ್ ರಾವಣನ ಪಾತ್ರ ಮಾಡಬೇಕೆಂದು ಅವರಿಗಾಗಿ ಈಗಾಗಲೆ ಲುಕ್ ಟೆಸ್ಟ್ ಕೂಡ ಮಾಡಲಾಗಿದೆಯೆಂದು ಚರ್ಚೆಗಳಾಗುತ್ತಿವೆ. 



ಈ ನಡುವೆ ಯಶ್ ಮಾಡುತ್ತಿರೋ ರಾವಣನ ಪಾತ್ರಕ್ಕೆ ಯಶ್ ಪಡೆಯುತ್ತಿರೋ ಸಂಭಾವನೆ ಎಷ್ಟು ಗೊತ್ತಾ ಎಂಬ ಚರ್ಚೆ ದೊಡ್ಡಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ ಯಶ್ ರಾವಣನ ಲುಕ್ ನ ಫೋಟೋಗಳು. ಮತ್ತೊಂದು ಕಡೆ ಯಾವಾಗ ಯಶ್ ಬಾಲಿವುಡ್ ರಾಮಾಯಣದಲ್ಲಿ ರಾವಣನಾಗ್ತಾರೆ ಅನ್ನೋ ಸುದ್ದಿ ವೈರಲ್ ಆಗುತ್ತಿದ್ದಂತೆ. ಯಶ್ ಲುಕ್ ಟೆಸ್ಟ್ನ ಗ್ರ್ಯಾಫಿಕ್ಸ್ ಫೋಟೋಗಳು ಸಹ ವೈರಲ್ ಆಗುತ್ತಿವೆ.ಆದರೆ ಬಾಲಿವುಡ್ನ ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ಮಾಡುತ್ತಿರೋ ಬಾಲಿವುಡ್ ಸಿನಿಮಾ ರಾಮಾಯಣದ ರಾವಣನ ಪಾಥ್ರಕ್ಕೆ ಯಶ್ ಕೇಳಿರೋ ಸಂಭಾವನೆ ದೊಡ್ಡ ಮೊತ್ತದ್ದು ಎನ್ನಲಾಗಿದೆ. 

ದರ್ಶನ್‌, ದುನಿಯಾ ವಿಜಯ್‌ ಜತೆಗೆ ಪಾತ್ರ ಮಾಡುವ ಆಸೆ ಇದೆ: ಸತೀಶ್ ನೀನಾಸಂ

ರಾಮನ ಪಾತ್ರಧಾರಿ ರಣ್ಬೀರ್ ಕಪೂರ್ಗಿಂತ ಯಶ್ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಯಶ್ 100 ರಿಂದ 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆಂಬ ಸುದ್ದಿ ಇದೀಗ ಬಾಲಿವುಡ್ ಅಂಗಳಲ್ಲಿದೆ.  ಇದೆಲ್ಲ ಚರ್ಚೆಗಳ ನಡುವೆ ಯಶ್ ಮೂಲಗಳು ಹೇಳುವಂತೆ ಯಶ್ಗೆ ರಾವಣನ ಪಾತ್ರಕ್ಕೆ ಅಪ್ರೋಚ್ ಮಾಡಿದ್ದು ನಿಜ.. ಆದ್ರೆ ಯಶ್ ಒಪ್ಪಿಕೊಂಡಿಲ್ಲ. ಮೊದಲೆ ರಾವಣನ ಪಾತ್ರ ವಿಲನ್ ಪಾತ್ರ. ರಾವಣ ಅದರಲ್ಲೂ ಒಬ್ಬ ರಾಕ್ಷಸ ಅಂಥಾ ಪಾತ್ರ ಯಶ್ ಯಾಕೆ ಮಾಡ್ತಾರೆ ಎನ್ನುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್