ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು, ಅದೂ ಒಂದ್ ಲೈಫಾ; ಯಶ್ ಪ್ರಶ್ನೆಗೆ ಉತ್ರ ಕೊಟ್ರಾ ಅನುಶ್ರೀ..?

By Shriram Bhat  |  First Published Jun 30, 2024, 7:15 PM IST

ಅದು ಇಲ್ಲ ಅಂದ್ರೆ ಲೈಫಲ್ಲಿ ಏನೂ ಮಾಡೋಕೆ ಆಗಲ್ಲ. ನಾನು ನನ್ ಲೈಫಲ್ಲಿ ತುಂಬಾ ರೆಸ್ಪೆಕ್ಟ್ ಮಾಡೋದು ಅದನ್ನೇ.. ಯಾಕಂದ್ರೆ, ಅವ್ರು ನಮ್ಮೊಳಗೆ ಇರೋ ಬೆಸ್ಟ್‌ ಅನ್ನು ಹೊರಗೆ ತರೋದೇ ಅದು ಅಲ್ವಾ..?


ಕೆಜಿಎಫ್ ಸಿನಿಮಾ ಖ್ಯಾತಿಯ (KGF) ನಟ, ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಮಾತನಾಡಿರುವ ವೀಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಆ್ಯಂಕರ್​ ಅನುಶ್ರೀ ಹಾಗೂ ನಟ ಯಶ್ ಅವರಿಬ್ಬರೂ ಒಂದು ವೇದಿಕೆಯ ಮೇಲೆ ಪ್ರಶ್ನೆ-ಉತ್ತರ ರೂಪದಲ್ಲಿ ಮಾತನಾಡಿರುವ ವೀಡಿಯೋ ಅದು. ಅದೊಂದು ಹಳೆಯ ವೀಡಿಯೋ. ಆದರೆ, ವೀಡಯೋ ಓಳ್ಡ್ ಆಗಿದ್ದರೂ ಅದು ಎಲ್ಲಾ ಕಾಲಕ್ಕೂ ಸಲ್ಲುವಂತಹ, ಎಲ್ಲರಿಗೂ ಸ್ಪೂರ್ತಿ ನೀಡುವಂಥ ವೀಡಿಯೋ ಎನ್ನಬೇಕು. ರಿಯಲೀ ಆ ವೀಡಿಯೋದಲ್ಲಿ ನಟ ಯಶ್ ಮಾತನಾಡಿರುವ ರೀತಿ ಎಲ್ಲರಿಗೂ ಇಷ್ಟವಾಗುವಂತಿದೆ. 

ಅನುಶ್ರೀ ಪ್ರಶ್ನೆಗೆ ನಟ ಯಶ್ ಅಲ್ಲಿ ಅದೇನು ಹೇಳಿದ್ದಾರೆ ಗೊತ್ತಾ? ಆ್ಯಂಕರ್​ ಅನುಶ್ರೀ ಅವರು ನಟ ಯಶ್ ಅವರಿಗೆ ಕೆಲವು ಪ್ರಶ್ನೆಗಳನ್ನುಕೇಳಿದ್ದಾರೆ. ಅದಕ್ಕೆ ರಾಕಿಂಗ್ ಸ್ಟಾರ್ ತಮಗೆ ಅನ್ನಿಸಿದಂತೆ ಉತ್ತರ ಕೊಟ್ಟಿದ್ದಾರೆ. ಅನುಶ್ರೀ ಕೇಳಿದ ಪ್ರತಿಯೊಂದು ಪ್ರಶ್ನೆಗೆ ಯಶ್ ಕೊಟ್ಟ ಉತ್ತರಕ್ಕೆ ಅಲ್ಲಿದ್ದ ಪ್ರೇಕ್ಷಕರು  ತಲೆದೂಗಿದ್ದಾರೆ, ಹುಚ್ಚೆದ್ದು ಕುಣಿದಿದ್ದಾರೆ, ಕೇಕೆ ಹಾಕಿದ್ದಾರೆ, ಯಶ್ ಮೆಂಟಾಲಿಟಿ, ಮೆಚ್ಯೂರಿಟಿಗೆ ಕಂಡು ಅಚ್ಚರಿ ಪಟ್ಟಿದ್ದಾರೆ.

Tap to resize

Latest Videos

ದರ್ಶನ್‌ ಪ್ರಾಣಕ್ಕೇ ಕಂಟಕವಿತ್ತು, ಅದು ತಪ್ಪಿಹೋಗಿ ಜೈಲಿನಲ್ಲಿ ಸೇಫ್ ಆಗಿದ್ದಾರೆ; ಹೀಗೊಂದು ಸುದ್ದಿ ವೈರಲ್!

ನಟಿ, ನಿರೂಪಕಿ ಅನುಶ್ರೀ ಪ್ರಶ್ನೆ ಕೇಳುತ್ತಲೇ ಹೋಗಿದ್ದಾರೆ. ನಟ ಯಶ್ ಉತ್ತರಿಸುತ್ತ ಹೋಗಿದ್ದಾರೆ. ಅನುಶ್ರೀ ಅವರು  'ಕಾಂಪಿಟೀಶನ್' ಎಂಬ ಪ್ರಶ್ನೆಗೆ ಉತ್ತರ ಅದು ಇರ್ಬೇಕು, ಅದು ಇಲ್ಲ ಅಂದ್ರೆ ಲೈಫಲ್ಲಿ ಏನೂ ಮಾಡೋಕೆ ಆಗಲ್ಲ. ನಾನು ನನ್ ಲೈಫಲ್ಲಿ ತುಂಬಾ ರೆಸ್ಪೆಕ್ಟ್ ಮಾಡೋದು ನನ್ ಕಾಂಪಿಟೀಟರ್ಸ್‌. ಯಾಕಂದ್ರೆ, ಅವ್ರು ನಮ್ಮೊಳಗೆ ಇರೋ ಬೆಸ್ಟ್‌ ಅನ್ನು ಹೊರಗೆ ತರ್ತಾರೆ. ಯಾಕೆ ಅಂದ್ರೆ, ಅವ್ರು ಕೊಡೋ ಫೋಸು, ನಾವು ಗ್ರೇಟು ಅನ್ನೋ ಫೀಲಿಂಗ್‌ಗೆ ನಾವು ಕೋಡೋ ಕೌಂಟರ್‌ಗಳಿಂದ ಇನ್ನೂ ಸ್ವಲ್ಪ ಹೆಚ್ಚು ಒಳ್ಳೇದು ಹೊರಗಡೆ ಬರುತ್ತೆ. ಅದರಿಂದ ಅವ್ರನ್ನ ಗೌರವಿಸ್ಬೇಕು. ಐ ಲವ್ ದೆಮ್. 

ನಾನು ನೋಡಿದ್ದು ಅಪ್ಪು ಅಲ್ಲ ಭಾಗ್ಯವಂತ; ಕಿಚ್ಚ ಸುದೀಪ್ ಪುನೀತ್ ಬಗ್ಗೆ ಹೀಗ್ ಯಾಕ್ ಅಂದ್ರು..?

ಗೌರವ ಅಂದರೆ, ಕೇಳಿ ಪಡಿಬಾರ್ದು, ಅಂದ್ರೆ ಅದನ್ನ ಕೇಳಿ ಪಡಿಬಾರ್ದು, ಅದ್ರ ಹಿಂದೆ ಹೋಗ್ಬಾರ್ದು. ಗೌರವ ಅಂದ್ರೆ ಏನು ಗೊತ್ತಾ? ನಿಮ್ಮ ಮುಂದೆ ಕೊಡೋದಲ್ಲ, ನಿಮ್ಮ ಹಿಂದೆ, ಅಂದ್ರೆ ನೀವು ಇಲ್ಲದೇ ಇರೋವಾಗ್ಲೂ ನಿಮ್ಮ ಬಗ್ಗೆ ಜನರು ಮಾತಾಡ್ತಾರಲ್ಲ, ಅದು ನಿಜವಾದ ಗೌರವ. ಆತ್ಮ ಗೌರವ ಅಂದಾಗ, ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು. ನಾನು ಆತ್ಮಗೌರವನ್ನು ತುಂಬಾ ಇಷ್ಟಪಡ್ತೀನಿ, ಬೇರೆಯವರ ಆತ್ಮಗೌರವಕ್ಕೂ ಅಷ್ಟೇ ಬೆಲೆ ಕೊಡ್ತೀನಿ. ನಮ್ಮದು ನಮಗೆ ಗ್ರೇಟ್ ಅಂತಾದರೆ ಬೇರೆಯವರಿಗೆ ಅವರದ್ದೂ ಗ್ರೇಟ್ ಆಗಿರಲೇಬೇಕು ತಾನೆ?' ಎಂದಿದ್ದಾರೆ ನಟ ಯಶ್. 

 

ಅವ್ರು ಕೊಡೋ ಪೋಸ್, ನಾವೇ ಗ್ರೇಟು ಅನ್ನೋ ಫೀಲಿಂಗ್‌ಗೆ ಕೌಂಟರ್..;ಕೆಜಿಎಫ್ ಸ್ಟಾರ್ ಯಶ್!

ಇನ್ನು ಆ್ಯಂಕರ್​ ಅನುಶ್ರೀ ಬಗ್ಗೆ ಕನ್ನಡಿಗರಿಗೆ ಏನೂ ಹೇಳಬೇಕಾಗಿಲ್ಲ. ಅನುಶ್ರೀ ಎಂದರೆ ಅವರೊಂದು ಬೊಂಬಾಟ್ 'ಮಾತಿನ ಬೊಂಬೆ' ಇದ್ದಂತೆ ಎಂಬುದು ಬಹಳಷ್ಟು ಜನರು ಹೇಳುವ ಮಾತು. ಸ್ಯಾಂಡಲ್‌ವುಡ್ ಹಾಗು ಕಿರುತೆರೆಯ ಹಲವಾರು ಕಲಾವಿದರನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅನುಶ್ರೀ ಸಂದರ್ಶನ ಮಾಡುತ್ತಾರೆ. ಅಲ್ಲಿ ಹಲವರನ್ನು ಕಾಲೆಳೆದು ನಕ್ಕುನಗಿಸುತ್ತಾರೆ, ಅವರಿಕೆ ಪ್ರಶ್ನೆ ಕೇಳಿ ಉತ್ತರ ಪಡೆದು ಅದನ್ನೆಲ್ಲ ಜಗತ್ತಿನ ತುಂಬಾ ಹರಿದಾಡಲು ಬಿಟ್ಟು ಎಂಜಾಯ್ ಮಾಡುತ್ತಾರೆ, ಅದು ಅನುಶ್ರೀ ಕೆಲಸವೋ ಹವ್ಯಾಸ ಹಾಗೂ ಕೆಲಸವೂ ಎನ್ನಬಹುದೇನೋ!

ಅವ್ನೊಬ್ಬ ಕಂತ್ರಿ.. ಕಜ್ಜಿನಾಯಿ, ಶುರುವಾಗಿದ್ದೇ ಅವ್ನಿಂದ; ಆದ್ರೆ ನಟ ದರ್ಶನ್ 'ಇದನ್ನ' ಮಾಡ್ಬೇಕಿತ್ತು: ಅಗ್ನಿ ಶ್ರೀಧರ್

ಅಂದಹಾಗೆ, ಕನ್ನಡದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರರು. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ಈಗಾಗಲೇ ನಟಿಸುತ್ತಿದ್ದಾರೆ.

ಮಡಿಕೇರಿಗೆ ಶಿಫ್ಟ್ ಆದ್ರಾ ವಿಜಯಲಕ್ಷ್ಮಿ, ಮಗ ವಿನೀಶ್‌ ಜೊತೆ ಬೆಂಗಳೂರು ತೊರೆದ್ರಾ ದರ್ಶನ್ ಪತ್ನಿ!

click me!