ದಯವಿಟ್ಟು ಪೈರಸಿ ಮಾಡಬೇಡಿ : ಟೀಮ್‌ ಕೆಜಿಎಫ್‌ 2

By Kannadaprabha News  |  First Published Apr 14, 2022, 9:15 AM IST

ಇಂದು ವಿಶ್ವಾದ್ಯಂತ ಕೆಜಿಎಫ್ ಸಿನಿಮಾ ಬಿಡುಗಡೆ. ರಾಕಿಂಗ್ ಸ್ಟಾರ್ ಯಶ್‌ ರಾಖಿ ಭಾಯ್ ಆಗಿ ಚಿತ್ರದ ಕೊನೆಯಲ್ಲಿ ಮತ್ತೊಂದು ಗುಡ್‌ ನ್ಯೂಸ್ ಕೊಟ್ಟಿದ್ದಾರೆ.


‘ಪೈರಸಿ ವಿರುದ್ಧದ ಹೋರಾಟ ನಿಮ್ಮಿಂದಲೇ ಶುರುವಾಗಲಿ. ದಯವಿಟ್ಟು ಸಿನಿಮಾ ವೀಕ್ಷಿಸುವಾಗ ವೀಡಿಯೋ, ಫೋಟೋಗಳನ್ನು ತೆಗೆಯಬೇಡಿ. ಅವುಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡಬೇಡಿ’ ಎಂದು ಪ್ರಶಾಂತ್‌ ನೀಲ್‌ ವಿನಂತಿಸಿದ್ದಾರೆ. ‘8 ವರ್ಷಗಳ ಕಾಲ ರಕ್ತ, ಬೆವರು, ಕಣ್ಣೀರು ಹರಿಸಿ ನಿಮಗಾಗಿ ಕೆಜಿಎಫ್‌ ಚಿತ್ರ ಮಾಡಿದ್ದೇವೆ. ಈ ಅಗಾಧ ಪರಿಶ್ರಮದ ಫಲವನ್ನು ಚಿತ್ರವನ್ನು ಥಿಯೇಟರ್‌ನಲ್ಲೇ ಅನುಭವಿಸಿ’ ಎಂದು ಚಿತ್ರತಂಡ ತಿಳಿಸಿದೆ. ಪೈರಸಿ ಕಂಡುಬಂದಲ್ಲಿ ಆ್ಯಂಟಿ ಪೈರಸಿ ಕಂಟ್ರೋಲ್‌ ರೂಮ್‌ಗೆ ದೂರು ನೀಡಬಹುದು.

ದೊಡ್ಮನೆ ಶುಭ ಹಾರೈಕೆ

Tap to resize

Latest Videos

ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿಯ ಮುಂದೆ ನಿಂತು ರಾಘವೇಂದ್ರ ರಾಜ್‌ಕುಮಾರ್‌ ಅವರು ಕೆಜಿಎಫ್‌ 2 ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ತಮ್ಮ ಅಪ್ಪುವನ್ನು ಬಿತ್ತಿದ ನೆಲದಲ್ಲಿ ನಿಂತು ಕೆಜಿಎಫ್‌ಗೆ ಶುಭ ಹಾರೈಸುತ್ತಿದ್ದೇನೆ’ ಎಂದು ರಾಘಣ್ಣ ಈ ವೇಳೆ ಹೇಳಿದ್ದಾರೆ.

KGF ಅಬ್ಬರಕ್ಕೆ ವಿಜಯ್ ಅಭಿನಯದ ಬೀಸ್ಟ್ ಮೂವಿ ಧೂಳಿಪಟ, ಒಂದೇ ದಿನಕ್ಕೆ ಎತ್ತಂಗಡಿ!

ಇಂದು ತೆರೆ ಕಾಣುತ್ತಿರುವ ‘ಕೆಜಿಎಫ್‌ 2’ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌. ಇದರ ಸ್ಥಾಪಕ, ನಿರ್ಮಾಪಕ ವಿಜಯ್‌ ಕಿರಗಂದೂರು. ‘ಕೆಜಿಎಫ್‌ 2’ ಬಿಡುಗಡೆಗೂ ಮುನ್ನ ಇವರ ಮಂಡ್ಯದ ಮನೆಗೆ ನಾಯಕ ಯಶ್‌, ನಿರ್ದೇಶಕ ಪ್ರಶಾಂತ್‌ ನೀಲ್‌ ಭೇಟಿ ನೀಡಿದ್ದಾರೆ.

ಮಂಡ್ಯ ತಾಲ್ಲೂಕಿನ ಪುಟ್ಟಗ್ರಾಮ ಕಿರಗಂದೂರು. ಅಲ್ಲಿ ನಿರ್ಮಾಪಕ ವಿಜಯ್‌ ಕಿರಗಂದೂರು ಅವರ ಮೂಲ ಮನೆಯಿದೆ. ಹಳೇ ಕಾಲದ, ಮರ, ಹೆಂಚಿನಿಂದ ನಿರ್ಮಿಸಲಾಗಿರುವ ಮಂಡ್ಯದ ಸಾಂಪ್ರದಾಯಿಕ ಮಾದರಿಯ ಮನೆಯಲ್ಲಿ ವಿಜಯ್‌ ಕಿರಗಂದೂರು ಹಾಗೂ ಅವರ ಮನೆಯವರು ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಮನೆಯ ಹಿರಿಯರ ಫೋಟೋದೆದುರು ಎಲ್ಲರೂ ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ತಮ್ಮೂರಿನ ದೇವಾಲಯಕ್ಕೆ ಅತಿಥಿಗಳನ್ನು ಕರೆದೊಯ್ದಿದ್ದಾರೆ. ಮಧ್ಯರಾತ್ರಿವರೆಗೂ ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಇಲ್ಲೇ ಸಮಯ ಕಳೆದಿದ್ದಾರೆ.

ಕೆಜಿಎಫ್‌ 2: ಸುಲ್ತಾನ್‌ ಹಾಡು 4 ಮಿಲಿಯನ್‌ಗೂ ಅಧಿಕ ವೀಕ್ಷಣೆ

ಯಶ್‌ ನಟನೆಯ ಕೆಜಿಎಫ್‌ 2 ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ 3 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಯಾದ 6 ಗಂಟೆಗಳಲ್ಲಿ ಕನ್ನಡದಲ್ಲಿ 14 ಲಕ್ಷ, ಹಿಂದಿಯಲ್ಲಿ 20 ಲಕ್ಷ, ತೆಲುಗಿನಲ್ಲಿ 5.4 ಲಕ್ಷ, ತೆಲುಗಿನಲ್ಲಿ 1,80,000 ಹಾಗೂ ಮಲಯಾಳಂನಲ್ಲಿ 74 ಸಾವಿರ ವೀಕ್ಷಣೆ ಸಿಕ್ಕಿದೆ. ಈ ಹಾಡಿನಲ್ಲಿ ಯಶ್‌ ಅವರ ಜೊತೆಗೆ ನಾಯಕಿ ಶ್ರೀನಿಧಿ ಶೆಟ್ಟಿಲುಕ್‌ ಗಮನ ಸೆಳೆದಿದೆ.

ಮುಂಬೈನಲ್ಲಿ ಯಶ್‌ 100 ಫೀಟ್‌ ಕಟೌಟ್‌

‘ಲಾರ್ಜರ್‌ ದೆನ್‌ ಲೈಫ್‌’ ಅನ್ನೋ ಕಾಂಸೆಪ್‌್ಟನಲ್ಲಿ ರಾಕಿ ಭಾಯ್‌ ಯಶ್‌ ಅವರ 100 ಅಡಿಗಳ ಕಟೌಟ್‌ ಮುಂಬಯಿಯ ಥಿಯೇಟರ್‌ನಲ್ಲಿ ರಾರಾಜಿಸುತ್ತಿದೆ. ಮುಂಬೈಯ ಕಾರ್ನಿವಾಲ್‌ ಸಿನಿಮಾಸ್‌ ಅನ್ನೋ ಥಿಯೇಟರ್‌ನಲ್ಲಿ ಇದೇ ಮೊದಲ ಬಾರಿಗೆ ಯಶ್‌ ಅವರ ಬೃಹತ್‌ ಕಟೌಟ್‌ ಹಾಕಲಾಗಿದೆ. ಬೆಂಗಳೂರಿನ ಹೆಚ್ಚಿನೆಲ್ಲ ಥಿಯೇಟರ್‌ಗಳಲ್ಲಿ ಯಶ್‌ ಕಟೌಟ್‌, ಪೋಸ್ಟರ್‌ಗಳು ಗಮನಸೆಳೆಯುತ್ತಿವೆ. ಊರ್ವಶಿ ಥಿಯೇಟರ್‌ ಮುಂಭಾಗ ರಾಕಿ ಭಾಯ್‌ ಬೃಹತ್‌ ಕಟೌಟ್‌ ಇದೆ. ತ್ರಿವೇಣಿ, ನವರಂಗ್‌, ವೀರೇಶ್‌ ಸೇರಿದಂತೆ ಬೆಂಗಳೂರಿನ ಹೆಚ್ಚಿನೆಲ್ಲ ಥಿಯೇಟರ್‌ ಮುಂಭಾಗ ಯಶ್‌ ಕಟೌಟ್‌ ಹಾಗೂ ಪೋಸ್ಟರ್‌ಗಳು ಗಮನ ಸೆಳೆಯುತ್ತಿವೆ.

"

click me!