ಕೆಜಿಎಫ್ ನಂತರ ಕಳೆದೇ ಹೋಗಿದ್ದ ಶ್ರೀನಿಧಿಗೆ ಮತ್ತೆ ಶೈನ್ ಆಗುವಂಥಾ ಚಾನ್ಸ್ವೊಂದು ಬಂದಿದೆ. ಅದು ಅಂತಿಥಾ ಚಾನ್ಸ್ ಅಲ್ಲ ಗೋಲ್ಡನ್ ಚಾನ್ಸ್ ಅಂದ್ರೆ ತಪ್ಪಾಗಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ, ಲೋಕೇಶ್ ಕನಗರಾಜ್ ನಿರ್ದೇಶನದ ಬಹುನಿರೀಕ್ಷಿತ ಕೂಲಿ ಸಿನಿಮಾದಲ್ಲಿ ನಟಿಸೋ...
KGF ಅನ್ನೋ ಗ್ಲೋಬಲ್ ಹಿಟ್ ಸಿನಿಮಾ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟಾಕೆ ಶ್ರೀನಿಧಿ ಶೆಟ್ಟಿ. ಕೆಜಿಎಫ್ ನಂತಹಾ ಅವಕಾಶ ಗಿಟ್ಟಿಸಿದ ಈಕೆಯ ಅದೃಷ್ಟವನ್ನ ಎಲ್ಲರೂ ಕೊಂಡಾಡಿದ್ರು. ಆದ್ರೆ ಅದ್ಯಾಕೋ ಆ ಬಳಿಕ ಶ್ರೀನಿಧಿಗೆ ಅದೃಷ್ಟ ಕೈ ಕೊಟ್ಟುಬಿಟ್ತು. ಒಳ್ಳೆ ಪ್ರಾಜೆಕ್ಸ್ಟ್ ಸಿಗಲಿಲ್ಲ. ಸಿಕ್ಕಿದ್ದು ಗೆಲ್ಲಲಿಲ್ಲ. ಸೋ ಗಣಿಯಲ್ಲಿ ಮುಳುಗಿ ಹೋಗಿದ್ದ ಶ್ರೀನಿಧಿಗೆ ಈಗ ನಿಧಿಯಂಥಾ ಚಾನ್ಸ್ವೊಂದು ಹುಡುಕಿಕೊಂಡು ಬಂದಿದೆ.
ಯೆಸ್ ಕೆಜಿಎಫ್ ನಂತರ ಕಳೆದೇ ಹೋಗಿದ್ದ ಶ್ರೀನಿಧಿಗೆ ಮತ್ತೆ ಶೈನ್ ಆಗುವಂಥಾ ಚಾನ್ಸ್ವೊಂದು ಬಂದಿದೆ. ಅದು ಅಂತಿಥಾ ಚಾನ್ಸ್ ಅಲ್ಲ ಗೋಲ್ಡನ್ ಚಾನ್ಸ್ ಅಂದ್ರೆ ತಪ್ಪಾಗಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ, ಲೋಕೇಶ್ ಕನಗರಾಜ್ ನಿರ್ದೇಶನದ ಬಹುನಿರೀಕ್ಷಿತ ಕೂಲಿ ಸಿನಿಮಾದಲ್ಲಿ ನಟಿಸೋ ಅವಕಾಶ ಶ್ರೀನಿಧಿಗೆ ಸಿಕ್ಕಿದೆ.
ಈಗಾಗ್ಲೇ ಈ ಸಿನಿಮಾದಲ್ಲಿ ಇಂಡಿಯನ್ ಸಿನಿಇಂಡಸ್ಟ್ರಿಯ ದಿಗ್ಗಜರು ನಟಿಸ್ತಾ ಇರೋ ವಿಷ್ಯ ರಿವೀಲ್ ಆಗಿದೆ. ಟಾಲಿವುಡ್ ಕಿಂಗ್ ನಾಗಾರ್ಜುನ್, ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಈ ಸಿನಿಮಾದಲ್ಲಿ ರಜನಿ ಜೊತೆಗೆ ನಟಿಸ್ತಾ ಇದ್ದಾರೆ. ಅಷ್ಟೆಲ್ಲಾ ಯಾಕೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ, ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿದ್ದಾರೆ.
ಇದೀಗ ಶ್ರೀನಿಧಿ ಶೆಟ್ಟಿ ಕೂಡ ಈ ಮಲ್ಟಿಸ್ಟಾರರ್ ಮೂವಿಯ ಭಾಗ ಆಗೋದು ಬಹುತೇಕ ಫಿಕ್ಸ್ ಆಗಿದೆ. ಈ ಆಫರ್ ಸಿಕ್ಕಿರೋದು ಶ್ರೀನಿಧಿಗೆ ನಿಧಿ ಸಿಕ್ಕಷ್ಟೇ ಖುಷಿ ತಂದಿದೆ. ಯಾಕಂದ್ರೆ ಕೆಜಿಎಫ್ 1 & 2 ಬಳಿಕ ಶ್ರೀನಿಧಿಗೆ ಮತ್ತೊಂದು ಸಕ್ಸಸ್ ಸಿಕ್ಕೇ ಇಲ್ಲ.
ಕೆಜಿಎಫ್-2 ಬಳಿಕ ಶ್ರೀನಿಧಿ ಅಳೆದು ತೂಗಿ ಒಪ್ಪಿಕೊಂಡಿದ್ದು, ವಿಕ್ರಮ್ ನಟನೆಯ ಕೋಬ್ರಾ ಮೂವಿಯನ್ನ. ಚಿಯಾನ್ ವಿಕ್ರಮ್ ಜೊತೆ ನಟಿಸಿ ನೆಕ್ಸ್ಟ್ ಲೆವೆಲ್ಗೆ ಹೋಗ್ತಿನಿ ಅಂದಿಕೊಂಡಿದ್ದ ಶ್ರೀನಿಧಿಗೆ ಈ ಸಿನಿಮಾದ ಸೋಲು ನಿರಾಸೆ ತಂದಿತ್ತು.
ಅಲ್ಲಿಂದ ಮುಂದೆ ಶ್ರೀನಿಧಿಗೆ ಯಾವ ದೊಡ್ಡ ಅವಕಾಶ ಬರಲೂ ಇಲ್ಲ. ಬಂದಿದ್ದನ್ನ ಈಕೆ ಒಪ್ಪಲೂ ಇಲ್ಲ. ಈ ನಡುವೆ ಸುದೀಪ್ ನಟನೆಯ ಕಿಚ್ಚ47 ಪ್ರಾಜೆಕ್ಟ್ಗೆ ಶ್ರೀನಿಧಿ ಆಯ್ಕೆಯಾದ ಸುದ್ದಿ ಬಂತು. ಆದ್ರೆ ಈ ಸಿನಿಮಾ ಡಿಲೇ ಆಗ್ತಾನೇ ಬರ್ತಾ ಇದೆ. ಈ ನಡುವೆ ಎರಡು ತೆಲುಗು ಪ್ರಾಜೆಕ್ಟ್ಗಳನ್ನ ಒಪ್ಪಿಕೊಂಡಿದ್ದ ಶ್ರೀನಿಧಿಗೆ ಈಗ ಒಂದು ಬಿಗ್ ಆಫರ್ ಬಂದಿದೆ. ಕೂಲಿ ಮೂವಿಯ ಭಾಗವಾಗೋ ಚಾನ್ಸ್ ಸಿಕ್ಕಿದೆ.
ಕೆಜಿಎಫ್ನಂಥಾ ಚಿನ್ನದ ಗಣಿಯಿಂದ ಬಂದರೂ ಲಕ್ ಕುದುರಲಿಲ್ಲವಲ್ಲ ಅಂತ ಬೇಸರಿಕೊಂಡಿದ್ದ ಚೆಲುವೆಗೆ ಈಗ ಕೂಲಿ ಮೇಲೆ ನಿರೀಕ್ಷೆ ಹುಟ್ಟಿಕೊಂಡಿದೆ. ಚಿನ್ನದ ಗಣಿಯಿಂದ ಸಿಗದ ಲಕ್ ಕೂಲಿ ದೆಸೆಯಿಂದ ಸಿಕ್ಕುತ್ತಾ ಕಾದುನೋಡಬೇಕಿದೆ. ಡೀಟೇಲ್ಸ್‌ಗೆ ವಿಡಿಯೋ ನೋಡಿ.....