ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾ ಸಕ್ಸಸ್ ಕಂಡ ಬೆನ್ನಲ್ಲೇ ಅವರ ಮಗ ಕ್ಯಾಮೆರಾ ಇಟ್ಟು ಆಯುಷ್‌ಗೆ ಮೈಕ್ ಹಿಡಿಯಲಾಗಿದೆ. ಚಿಕ್ಕ ವಯಸ್ಸು, ಮೊದಲೇ ತುಂಬಿಕೊಂಡಿರುವ ಜೋಶ್ ಬೇರೆ! ಅಪ್ಪನ ಬಗ್ಗೆ ಸಹಜವಾಗಿಯೇ ಇರೋ ಪ್ರೀತಿ ಕೂಡ ಕ್ಯಾಮೆರಾ-ಮೈಕ್ ಮುಂದೆ ದುಪ್ಪಟ್ಟು ಆಗಿದೆ. ಇದೇ ಸಮಯ..
ಆತ ಇನ್ನೂ 'ಅವರು' ಅಂತ ಹೇಳಲಾಗದಷ್ಟು ಎಳಸು. ಅಪ್ಪನ ಸಿನಿಮಾ ಬಗ್ಗೆ ಮಗನಿಗೆ ಪ್ರಶ್ನೆ ಕೇಳಿದ್ದಾರೆ. ಉತ್ತರ ಹೇಳಲು ಶುರುಮಾಡಿದ ಮಗ ತನಗೆ ಅನ್ನಿಸಿದ್ದನ್ನೆಲ್ಲಾ ಕ್ಯಾಮೆರಾ ಮುಂದೆ ಹೇಳಿದ್ದಾನೆ. ಅಪ್ಪನ ಮೇಲಿನ ಸಹಜ ಪ್ರೀತಿಯಿಂದ ಆತ ಬೇರೆಯವರು ಹೇಳಬೇಕಾಗಿದ್ದನ್ನೂ ತಾನೇ ಹೇಳಿದ್ದಾನೆ ಎನ್ನಬಹುದು. ಹೌದು, ಅವನ ಅಪ್ಪನ ಬಗ್ಗೆ ಇಡೀ ಕರ್ನಾಟಕ ಮಾತ್ರವಲ್ಲ, ದೇಶ-ವಿದೇಶಗಳಲ್ಲೂ ಗೌರವ-ಪ್ರೀತಿ ಇದೆ. ವಿಭಿನ್ನ ಹಾಗೂ ವೈಚಾರಿಕತೆ ಹುಟ್ಟುಹಾಕುವ ಸಿನಿಮಾ ಮಾಡುವುದರಲ್ಲಿ ಆತನ ಪ್ರೀತಿಯ ಅಪ್ಪ ಗ್ರೇಟ್ ಡೈರೆಕ್ಟರ್. ಅಂಥ ಅಪ್ಪನ ಬಗ್ಗೆ ಹೇಳಿ ವೈರಲ್ ಆಗ್ತಿರೋದು ಬೇರಾರೂ ಅಲ್ಲ, ಆಯುಷ್..,ಆಯುಷ್ ಉಪೇಂದ್ರ!
ಹೌದು, ಕನ್ನಡದ ಖ್ಯಾತ ನಿರ್ದೇಶಕ ಹಾಗು ರಿಯಲ್ ಸ್ಟಾರ್ ಉಪೇಂದ್ರ ಅವರ ಮಗ ಆಯುಷ್ ಅಪ್ಪ ಉಪೇಂದ್ರ ಬಗ್ಗೆ ಮಾತನ್ನಾಡಿದ್ದಾರೆ. ಸದ್ಯ ನಟ-ನಿರ್ದೇಶಕ ಉಪೇಂದ್ರ ನಿರ್ದೇಶನ ಹಾಗೂ ನಟನೆಯ ಯುಐ (UI) ಸಿನಿಮಾ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಪ್ರಪಂಚದಾದ್ಯಂತ 2500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಬಹುತೇಕ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲೂ ಯುಐ ಹಿಂದೆ ಬಿದ್ದಿಲ್ಲ. ಈಗಾಗಲೇ ಒಂದೇ ವಾರದಲ್ಲಿ 30 ಕೋಟಿ ರೂಪಾಯಿಗೂ ಮೀರಿ ಕಲೆಕ್ಷನ್ ಮಾಡಿದೆ.
'ಯುಐ' ಬಗ್ಗೆ ಇವ್ರ ವಿಮರ್ಶೆ ಕೇಳಿದ್ರೆ ನೋಡೋದು ಬೇಡ ಅಂದ್ಕೊಂಡಿದ್ರೂ ನೀವು ಹೋಗ್ತೀರಾ!
ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾ ಸಕ್ಸಸ್ ಕಂಡ ಬೆನ್ನಲ್ಲೇ ಅವರ ಮಗ ಕ್ಯಾಮೆರಾ ಇಟ್ಟು ಆಯುಷ್‌ಗೆ ಮೈಕ್ ಹಿಡಿಯಲಾಗಿದೆ. ಚಿಕ್ಕ ವಯಸ್ಸು, ಮೊದಲೇ ತುಂಬಿಕೊಂಡಿರುವ ಜೋಶ್ ಬೇರೆ! ಅಪ್ಪನ ಬಗ್ಗೆ ಸಹಜವಾಗಿಯೇ ಇರೋ ಪ್ರೀತಿ ಕೂಡ ಕ್ಯಾಮೆರಾ-ಮೈಕ್ ಮುಂದೆ ದುಪ್ಪಟ್ಟು ಆಗಿದೆ. ಇದೇ ಸಮಯ ಅಪ್ಪನ ಬಗ್ಗೆ ನನಗಿರುವ ಪ್ರೀತಿ-ಗೌರವ ಹೇಳಿಕೊಳ್ಳಲು ಎಂಬಂತೆ, ಆಯುಷ್ ಚೆನ್ನಾಗಿ ಮಾತನ್ನಾಡಿದ್ದಾರೆ. ಮುಗ್ಧ ಮನಸ್ಸು, ತುಂಟಾದ ವಯಸ್ಸಿನ ಹುಡುಗ ಆಯಷ್ ಅಪ್ಪ ಉಪೇಂದ್ರರ ಬಗ್ಗೆ ಕೊಂಚ ಜಾಸ್ತಿಯೇ ಹೇಳಿದ್ದಾರೆ.
ಇಲ್ಲಿ, ಕೊಂಚ ಜಾಸ್ತಿ ಎನ್ನುವುದೂ ಕೂಡ ತಪ್ಪು. ಯಾಕಂದ್ರೆ, ಅಪ್ಪನ ಬಗ್ಗೆ ಮಗ ಏನು ಬೇಕಾದ್ರೂ ಹೇಳಬಹುದು, ಅದು ಜಾಸ್ತಿ ಅಥವಾ ಕಮ್ಮಿ ಅಂತ ಬೇರೆಯವರು ಹೇಗೆ ಹೇಳೋದು? ಆದ್ರೆ ಉಪೇಂದ್ರ ಪುತ್ರ ಅವರ ಅಪ್ಪನ ಅಭಿಮಾನಿಗಳು, ಸಿನಿಪ್ರೇಕ್ಷಕರು ಹೇಳುತ್ತಿರುವುದನ್ನು, ಹೇಳಬೇಕಾಗಿದ್ದನ್ನು ಸೇರಿಸಿ ಆತನೇ ಹೇಳಿದ್ದಾನೆ. ಹಲವರು ಅದನ್ನು ಮೆಚ್ಚಿ ಸೋಷಿಯಲ್ ಮೀಡಿಯಾಗಳಲ್ಲಿ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. 'ನೀನು ಚೆನ್ನಾಗಿ ಮಾತಾಡ್ತೀಯ, ನೋಡೋಕೆ ಕೂಡ ಹ್ಯಾಂಡ್‌ಸಮ್ ಆಗಿದೀಯ. ಬೇರೆಯವರಂತೆ 'ಲೆಗ್ಗಸಿ' ಶುರು ಮಾಡ್ಬಿಡು ಈಗ್ಲೇ.. ಆದಷ್ಟೂ ಬೇಗ ಸಿನಿಮಾರಂಗಕ್ಕೆ ಬಂದ್ಬಿಡು..' ಎಂದಿದ್ದಾರೆ.
ಕರ್ನಾಟಕದಲ್ಲಿ ಜನರು ಈಗ ಅವ್ರನ್ನು ನೋಡಿ ತುಂಬಾ ಭಯ ಬೀಳ್ತಿದಾರೆ!
ಹಾಗಿದ್ರೆ ಉಪೇಂದ್ರ-ಪ್ರಿಯಾಂಕಾ ಮಗ ಆಯುಷ್ ಉಪೇಂದ್ರ ಮೈಕ್-ಕ್ಯಾಮೆರಾ ಮುಂದೆ ಅದೇನು ಹೇಳಿದ್ದಾರೆ? ಇಲ್ಲಿ ನೋಡಿ.. 'ಅಪ್ಪ ಅವರನ್ನ, ಒಬ್ಬರು ನಿರ್ದೇಶಕರಾಗಿ ಕನ್ನಡ ಇಂಡಸ್ಟ್ರಿಯಲ್ಲಿ ಅವ್ರನ್ನ ಯಾರು ಮುಟ್ಟೋಕೂ ಆಗಲ್ಲ.. ಅವ್ರು ಆ ಲೆಗ್ಗಸಿ ಹಂಗೆ ಸ್ಥಾಪನೆ ಮಾಡಿದಾರೆ ಅಂದ್ರೆ, ಅವ್ರು ನೆಕ್ಸ್ಟ್ ಲೆವಲ್‌ಗೆಹೊರಟುಹೋಗಿದಾರೆ.. ಅವ್ರು ಸುಮ್ನೆ ಡೈರೆಕ್ಷನ್ ಕ್ಯಾಪ್ ಹಾಕಿದ್ರೇನೇ ಜನ ನಡಗ್ತಾರೆ.. ಅವ್ರಿಗೆ ಇಮಾಜಿನ್ ಪವರ್ ಎಷ್ಟಿರಬಹುದು? ಇನ್‌ಫ್ಲುಯೆನ್ಸ್ ಅಂಡ್ ಮೊಟಿವೇಶನ್ ಎಲ್ಲಾನೂ.. ಅವ್ರು ಪ್ರತಿಯೊಂದನ್ನು, ಅಂದ್ರೆ ಪ್ರತಿಯೊಂದು ಕಾನ್ಸೆಪ್ಟ್ ಬಂದಾಗ ಅವ್ರು ತುಂಬಾನೆ ಮೋಟಿವೇಟೆಡ್ ಆಗಿರ್ತಾರೆ..
ಒಂದು ಐಡಿಯಾ ಬಂದ್ರೆ ಆ ಐಡಿಯಾ ಜೊತೆನೇ ಒಂದು ವಾರ ಇರ್ತಾರೆ ಅವ್ರು.. ಅದೇ ಐಡಿಯಾನ ನಮ್ಗೆ ಅಂದ್ರೆ ಫ್ಯಾಮಿಲಿಗೆ ಬಂದು ಹೇಳ್ತಾರೆ.. ಏನ್ ಮಾಡ್ಬಹುದು, ಏನ್ ಚೇಂಜ್ ಮಾಡ್ಬಹುದು? ಕೇಳ್ತಾರೆ.. ಆಮೆಲೆ ಹೇಳ್ತಾರೆ, ಇದೇ ಕಾನ್ಸೆಪ್ಟು, ಜನಕ್ಕೆ ಹೆಲ್ಪ್ ಆಗುತ್ತೆ.. ಸೋ, ಅವ್ರು ಯಾವಾಗ್ಲೂ ಜನಕ್ಕೋಸ್ಕರ, ಅವ್ರ ಉಪಯೋಗಕ್ಕೋಸ್ಕರ ಫಿಲಂ ಮಾಡ್ತಾರೆ, ಅವ್ರಿಗೋಸ್ಕರ ಅಲ್ಲ.. ಅದಕ್ಕೇ ಅವ್ರ ಸಿನಿಮಾಗಳು ಯಾವತ್ತೂ ಕಮರ್ಷಿಯಲ್ ಆಗಿರಲ್ಲ.. ಅದು ಯಾವತ್ತೂಯುನಿವರ್ಸಲ್, ಯುಐ.. ಅದಕ್ಕೇ ಅವ್ರನ್ನು ತುಂಬಾ ವರ್ಸಟೈಲ್ ಡೈರೆಕ್ಟರ್ ಅನ್ನಬಹುದು.. ಹಾಗೇನೇ, ಅವ್ರು ತುಂಬಾ ಡೌನ್ ಟು ಅರ್ಥ್, ಹಂಬಲ್ ಹಾಗೂ ಕಾಮನ್ ಮ್ಯಾನ್ ಥರ ಇರ್ತಾರೆ..' ಎಂದಿದ್ದಾರೆ ಆಯುಷ್ ಉಪೇಂದ್ರ.!
ದರ್ಶನ್ ಕಷ್ಟದ ಕ್ಷಣದಲ್ಲಿ ವಿಜಯಲಕ್ಷ್ಮಿ 'ನಿಜರೂಪ' ಹೇಳಿದ ದಿನಕರ್ ತೂಗುದೀಪ!