ಯೂಟ್ಯೂಬ್‌ ನಂಬ ಬೇಡಿ, ನಾನು ಈಗಲೂ ಇರುವುದು ಬಾಡಿಗೆ ಮನೆಯಲ್ಲಿ ಎಂದ ಕೆಜಿಎಫ್ ನಟಿ ಶ್ರೀನಿಧಿ

Published : May 09, 2022, 12:50 PM IST
ಯೂಟ್ಯೂಬ್‌ ನಂಬ ಬೇಡಿ, ನಾನು ಈಗಲೂ ಇರುವುದು ಬಾಡಿಗೆ ಮನೆಯಲ್ಲಿ ಎಂದ ಕೆಜಿಎಫ್ ನಟಿ ಶ್ರೀನಿಧಿ

ಸಾರಾಂಶ

ಯುಟ್ಯೂಬ್‌ನಲ್ಲಿ ಹರಿದಾಡುತ್ತಿರುವ ಫೇಕ್ ನ್ಯೂಸ್‌ಗಳ ಬಗ್ಗೆ ಕ್ಲಾರಿಟಿ ಕೊಟ್ಟ ಶ್ರೀನಿಧಿ ಶೆಟ್ಟಿ. ಐಟಿ ಕೆಲಸ ಮಾಡುತ್ತಿದ್ದರಂತೆ ಗೊತ್ತಾ? 

ಚಿಕ್ಕ ವಯಸ್ಸಿನಲ್ಲೇ ಮಾಡಲ್ ಅಗಬೇಕು ಎಂದು ಕನಸು ಕಂಡ ನಟಿ ಶ್ರೀನಿಧಿ ಶೆಟ್ಟಿ (Srinidhi Setty) ಕೆಜಿಎಫ್ ಚಾಪ್ಟರ್ 1 ಮೂಲಕ ಕನ್ನಡ ಚಿತ್ರರಂಗದಲ್ಲಿ ಜರ್ನಿ ಆರಂಭಿಸಿದ್ದರು. ಭಾಗ 1ರಲ್ಲಿ ಶ್ರೀನಿಧಿ ಪಾತ್ರ ಕಡಿಮೆ ಇದ್ದರೂ ಮೊದಲ ಸಿನಿಮಾಗೆ ಇಷ್ಟು ಶಿಸ್ತು ಬೆಸ್ಟ್‌ ಎಂದು ಅಭಿಮಾನಿಗಳು ಹೇಳಿದ್ದಾರೆ. ಚಾಪ್ಟರ್‌ 2ರಲ್ಲಿ ಶ್ರೀನಿಧಿ ಪಾತ್ರಕ್ಕೆ ತೂಕವಿದೆ, ಅದರಲ್ಲೂ ಗರ್ಭಿಣಿ ಆದಾಗ ಅಮ್ಮ ಬರ್ತಿದ್ದಾರೆ ಎಂದು ಹೇಳುವ ಸಾಲು ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿತ್ತು.

ಯೂಟ್ಯೂಬ್‌ ಅವಾಂತರ:

ಪಬ್ಲಿಕ್ ಫಿಗರ್ ಆದ ಮೇಲೆ ಅವರ ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ (Youtube Channel) ಲೋಕ ದೊಡ್ಡದಾಗುತ್ತಿರುವ ಕಾರಣ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಹೀಗೆ ನಟಿ ಶ್ರೀನಿಧಿ ಶೆಟ್ಟಿ ಜೀವನದ ಬಗ್ಗೆ ಯೂಟ್ಯೂಬ್‌ನಲ್ಲಿ ಸಾಕಷ್ಟು ವಿಚಾರಗಳು ಹರಿದಾಡುತ್ತಿರವುದರ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

'ಯೂಟ್ಯೂಬ್‌ನಲ್ಲಿ ಸಾಕಷ್ಟು ಜನ ವಿಡಿಯೋ ಮಾಡ್ತಿದ್ದಾರೆ ಶ್ರೀನಿಧಿ ಶೆಟ್ಟಿ ಸಂಭಾವನೆ ಇಷ್ಟು, ಮನೆ ಹೀಗಿದೆ ಅದು ಇದು ಅಂತ. ನನ್ನ ಫ್ರೆಂಡ್ ಮತ್ತು ಕಸಿನ್‌ಗಳು ಈ ಲಿಂಕ್‌ಗಳನ್ನು ಸೆಂಡ್ ಮಾಡಿ ನನಗೆ ವಿಶ್ ಮಾಡುತ್ತಾರೆ. ಅದೆಲ್ಲಾ ನಿಜ ಅಲ್ಲ ಅದನ್ನು ನಂಬ ಬೇಡಿ ಅಂತ ಹೇಳುತ್ತೀನಿ. ನೋಡಿ ನಾನು ಬೇರೆ ಅವರ ಬಗ್ಗೆ ಮಾತನಾಡುವುದಕ್ಕೆ ಆಗೋಲ್ಲ ಆದರೆ ನನ್ನ ಬಗ್ಗೆ ಮಾತನಾಡಿ ಕ್ಲಾರಿಟಿ ಕೊಡಬಹುದು. ಅದೆಲ್ಲಾ ಸುಮ್ಮನೆ ಸುಳ್ಳು. ನಾನು ಈಗಲೂ ಬಾಡಿ ಮನೆಯಲ್ಲಿ ಇರುವುದು. ನಾಲ್ಕು ವರ್ಷಗಳಿಂದ ಇದೆ ಮನೆಯಲ್ಲಿ ಇದ್ದೀನಿ' ಎಂದು ಖಾಸಗಿ ಸಂದರ್ಶನದಲ್ಲಿ ಶ್ರೀನಿಧಿ ಮಾತನಾಡಿದ್ದಾರೆ. 

ಒಳ್ಳೆ ಕಂಟೆಂಟ್ ಇದ್ರೆ ಯಾವ ಭಾಷೆಯಲ್ಲಾದ್ರೂ ನಟಿಸೋಕೆ ರೆಡಿ: ಶ್ರೀನಿಧಿ ಶೆಟ್ಟಿ

ಶ್ರೀನಿಧಿ ಜರ್ನಿ:

'ನನ್ನ ಜರ್ನಿನ ಒಂದು ಪದದಲ್ಲಿ ವರ್ಣನೆ ಮಾಡುವುದಕ್ಕೆ ಕಷ್ಟ. ನಾನು ಮಾಡಬೇಕು ಅಂದುಕೊಂಡಿದನ್ನು ಮಾಡಿದ್ದೀನಿ. ಎಲ್ಲೂ ನಾನು ಇಲ್ಲ ಆಗೋಲ್ಲ ಮಿಡಲ್ ಕ್ಲಾಸ್‌ ಜನರಿಗೆ ಕಷ್ಟ ಅನ್ನೋ ರೀತಿ ಯೋಚನೆ ಮಾಡಿಲ್ಲ. ಶಾಲೆ ಕಾಲೇಜ್‌ಗೆ ಹೋಗಬೇಕಾದರೆ ನಾನು ಐಶ್ವರ್ಯ (Aishawarya Rai) ಮತ್ತು ಲಾರಾ ದತ್ತ (Lara Datta) ಕ್ರೌನ್ ಪಡೆಯುತ್ತಿರುವುದನ್ನು ನೋಡಿದ್ದೆ ನಾನು ಹೀಗೆ ಸ್ಪರ್ಧಿಸಿ ಕ್ರೌನ್ ಪಡೆಯಬೇಕು ಎಂದು ಆಸೆ ಇತ್ತು. ಕಲಿಯುವುದು ಮುಖ್ಯ ಹೀಗಾಗಿ ವಿದ್ಯಾಭ್ಯಾಸ ಮುಗಿಸಿ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ದೀನಿ ಆದರೆ ನನಗೆ ಇಂಟ್ರೆಸ್ಟ್‌ ಇರಲಿಲ್ಲ ಒಂದು ನಿರ್ಧಾರ ಮಾಡಿ ಇಲ್ಲ ಇದು ಆಗೋಲ್ಲ ನನಗೆ ಈ ಕೆಲಸ ಬೇಡ  ಬೇರೆ ಏನಾದರೂ ಕೆಲಸ ಮಾಡಬೇಕು ಅಂತ ಮುಂದಾದೆ' ಎಂದು ಶ್ರೀನಿಧಿ ಹೇಳಿದ್ದಾರೆ.

ಫಟಾಫಟ್ ಸ್ಟೈಲಿಶ್ ಜಡೆ ಹಾಕೋದ್ಹೇಗೆ.? ಶ್ರೀನಿಧಿ ಶೆಟ್ಟಿ ಟಿಪ್ಸ್

'ನನಗೂ ಕೂಡ ರಿಜೆಕ್ಟ್‌ ಆಗಿದೆ. ಆಡಿಷನ್ ಮಾಡಿದಾಗ ಇಲ್ಲ ನೀನು ದಪ್ಪ ಇದ್ಯಾ ಸರಿಯಾಗಿ ವಾಕಿಂಗ್ ಮಾಡೋಕೆ ಬರಲ್ಲ ಕರೆಕ್ಟ್ ಆಗಿಲ್ಲ. ಓ ನನಗೆ ಇದೆಲ್ಲಾ ಮಾಡೋಕೆ ಆಗೋಲ್ಲ ಅಂದುಕೊಂದೆ ಒಂದೆರಡು ದಿನ ಅತ್ತೆ. ಆಮೇಲೆ ಮತ್ತೆ ಜಿಮ್‌ಗೆ ಹೋಗಲು ಶುರು ಮಾಡಿದೆ ವರ್ಕೌಟ್ ಮಾಡಿ ಆಡಿಷನ್ ಶುರು ಮಾಡಿದೆ. ಬೆಂಗಳೂರು ಮುಂಬೈ ಎಲ್ಲಾ ಕಡೆ ಸ್ಪರ್ಧಿಸಿದೆ. ಮಿಸ್ ಡಿವಾ ಗೆದ್ದೆ, ಇಂಟರ್‌ನ್ಯಾಷನಲ್‌ ಪೇಜೆಂಟ್‌ ಗೆದ್ದೆ. ದೇವರ ದಯೇ ಅಪ್ಪ ಅಮ್ಮನ ಆಶೀರ್ವಾದದಿಂದ ಎಲ್ಲಾ ಒಳ್ಳೆಯದಾಗಿದೆ' ಎಂದಿದ್ದಾರೆ ರೀನಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ