ದತ್ತಣ್ಣ,ರಾಜೇಶ್‌ 'ಓಬಿರಾಯನ ಕಥೆ'ಗೆ ಸಾಥ್‌ ಕೊಟ್ಟ ಯಶ್!

Published : Mar 12, 2020, 08:58 AM ISTUpdated : Mar 12, 2020, 09:08 AM IST
ದತ್ತಣ್ಣ,ರಾಜೇಶ್‌ 'ಓಬಿರಾಯನ ಕಥೆ'ಗೆ ಸಾಥ್‌ ಕೊಟ್ಟ ಯಶ್!

ಸಾರಾಂಶ

ರಾಜೇಶ್‌ ನಟರಂಗ ಹೊಸಬರ ಚಿತ್ರವೊಂದರಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ತಂದೆಯಾಗಿ ಹಿರಿಯ ನಟ ದತ್ತಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹೆಸರು ‘ಓಬಿರಾಯನ ಕತೆ’.

ಶೀರ್ಷಿಕೆ ಹಳೇದು, ಕತೆ ಮಾತ್ರ ಹೊಸದು ಎನ್ನುವುದು ಈ ಚಿತ್ರದ ವಿಶೇಷ. ರಂಗಭೂಮಿ ಕಲಾವಿದ ವಿನಯ್‌ ಶಾಸ್ತ್ರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ. ಶಾಮ್‌ ಅನ್ನೂರ್‌ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೀಗ ಚಿತ್ರತಂಡ ಟೈಟಲ್‌ ಹಾಗೂ ಪೋಸ್ಟರ್‌ ಲಾಂಚ್‌ ಮಾಡಿದೆ. ನಟ ಯಶ್‌, ಇತ್ತೀಚೆಗೆ ಚಿತ್ರದ ಟೈಟಲ್‌ ಹಾಗೂ ಪೋಸ್ಟರ್‌ ಲಾಂಚ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ಟೈಟಲ್‌ಗೂ ಮೆಚ್ಚುಗೆ ಹೇಳಿದರು.

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರನ 'ಸೀತಾಯಣ' ಸಖತ್ತಾಗಿದೆ!

‘ರಘು ದಿಕ್ಷೀತ್‌ ಸಂಗೀತ ಸಂಯೋಜನೆ ಜತೆಗೆ ಚಿತ್ರದ ಪ್ರಮುಖ ಪಾತ್ರವೊಂದರಲ್ಲೂ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ರಾಜೇಶ್‌ ನಟರಂಗ ಫೋಟೋಗ್ರಾಫರ್‌. ಚೈತ್ರಾ ಆಚಾರ್‌ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ವಿನಯ್‌ ಶಾಸ್ತ್ರಿ.

ಚಿತ್ರರಂಗಕ್ಕೂ ಕೊರೋನಾ ಬಿಸಿ; ಸದ್ಯಕ್ಕಿಲ್ಲ ಸ್ಟಾರ್ ಸಿನಿಮಾಗಳ ರಿಲೀಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

700 ಅಭಿಮಾನಿಗಳಿಗೆ ಯಶ್ ಯಾಕೆ ಪ್ರತ್ಯೇಕ ಸೆಲ್ಫಿ ಕೊಟ್ಟರು? ಕಾರಣ ಕೇಳಿದ್ರೆ ಮನಸ್ಸು ಕರಗುತ್ತೆ!
ಜ್ಯೇಷ್ಠವರ್ಧನ್ ಗ್ರಾಂಡ್ ಎಂಟ್ರಿ.. ವಿಷ್ಣುವರ್ಧನ್ ಮೊಮ್ಮಗ, ಅನಿರುದ್ದ್ ಮಗನ ಸಿನಿಮಾ ಶೀಘ್ರದಲ್ಲೇ ಶುರು!