ಮುತ್ತೈದೆ ಸಾವಿನ ಭಾಗ್ಯ ಕಂಡ ಸ್ಪಂದನಾಗೆ ತಾಳಿ ಕಟ್ಟಿ ಕಳಿಸಿಕೊಟ್ಟ ವಿಜಯ್‌

By Sathish Kumar KH  |  First Published Aug 9, 2023, 4:35 PM IST

ಮುತ್ತೈದೆ ಸಾವಿನ ಭಾಗ್ಯ ಕಂಡ ಸ್ಪಂದನಾಗೆ ಈಡಿಗ ಸಮುದಾಯದ ಸಂಪ್ರದಾಯದಂತೆ ಪತಿ ವಿಜಯ್‌ ರಾಘವೇಂದ್ರ ಕೊನೆಯದಾಗಿ ತಾಳಿ ಕಟ್ಟಿ ಅಂತ್ಯಕ್ರಿಯೆ ವಿಧಿ ವಿಧಾನ ನೆರವೇರಿಸಿದರು.


ಬೆಂಗಳೂರು (ಆ.09): ನಟ ವಿಜಯ್‌ ರಾಘವೇಂದ್ರನ ಪತ್ನಿ ಸ್ಪಂದನಾ ಮುತ್ತೈದೆಯಾಗಿ ಸಾವನ್ನಪ್ಪಿದ್ದಾಳೆ. ಆದರೆ, ಈಡಿಗ ಸಮುದಾಯದ ಸಂಪ್ರದಾಯದಂತೆ ಕೊನೆಯದಾಗಿ ಸ್ಪಂದನಾ ಪತಿ ವಿಜಯ್‌ ರಾಘವೇಂದ್ರ ತಾಳಿಯನ್ನು ಕಟ್ಟಿ ಮುತ್ತೈದೆ ಭಾಗ್ಯವನ್ನು ನೀಡಿ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದರು.

ಹಿಂದೂ ಧರ್ಮದ ಸಂಪ್ರದಾಯಗಳಂತೆ ಹಲವು ಸಮುದಾಯಗಳಲ್ಲಿ ವಿವಿಧ ಸಂಪ್ರದಾಯಗಳನ್ನು ಅನುಸರಿಸಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಇನ್ನು ಮುತ್ತೈದೆ ಸಾವು ಬರಲೆಂದು ಸಂಪ್ರದಾಯಸ್ಥ ಮಹಿಳೆಯರು ದೇವರಲ್ಲಿ ಕೇಳಿಕೊಳ್ಳುತ್ತಾರೆ. ಮುತ್ತೈದೆ ಸಾವು ಎಂದರೆ ಗಂಡ ಬದುಕಿರುವಾಗಲೇ ಪತ್ನಿ ಸಾವನ್ನಪ್ಪುವುದು ಆಗಿದೆ. ಮುತ್ತೈದೆಯಾಗಿ ಸಾವಿಗೀಡಾದ ಮಹಿಳೆಯರನ್ನು ಈಡಿಗ ಸಮುದಾಯ ಸೇರಿ ಹಲವು ಸಮುದಾಯಗಳಲ್ಲಿ ವಿವಿಧ ಸಂಪ್ರದಾಯಗಳನ್ನು ಪಾಲನೆ ಮಾಡಲಾಗುತ್ತದೆ. ಅದರಲ್ಲಿ ಕೊನೆಯದಾಗಿ ಮೃತ ಪತ್ನಿಗೆ ತಾಳಿ ಕಟ್ಟುವ ಸಂಪ್ರದಾಯವನ್ನೂ ಮಾಡಲಾಗುತ್ತಿದೆ.

Latest Videos

ವಿಜಯ್‌-ಸ್ಫಂದನಾ ದಾಂಪತ್ಯಕ್ಕೆ ಯಾರ ಕೆಟ್ಟ ಕಣ್ಣು ಬಿತ್ತೋ ಅಂತಾರಲ್ಲ, ದೃಷ್ಟಿಯಾಗುತ್ತೆ ಅನ್ನೋದು ನಿಜಾನ?

ನಟ ವಿಜಯ್‌ ರಾಘವೇಂದ್ರನ ಪತ್ನಿ ಸ್ಪಂದನಾ ಕೂಡ ಮುತ್ತೈದೆಯಾಗಿ ಮೃತಪಟ್ಟಿದ್ದರಿಂದ ಈಡಿಗ ಸಮುದಾಯದ ಸಂಪ್ರದಾಯದಂತೆ ಸ್ಪಂದನಾಳ ಮೃತದೇಹಕ್ಕೆ ಕೊನೆಯದಾಗಿ ತಾಳಿ ಕಟ್ಟಿಸಿ ಮುತ್ತೈದೆಯರಿಂದ ಆರತಿ ಮಾಡಿಸಲಾಯಿತು. ನಂತರ, ಕೊನೆಯದಾಗಿ ಎಲ್ಲರೂ ಮತ್ತೈದೆ ಸ್ಪಂದನಾಳ ಮುಖವನ್ನು ನೋಡಿದ ನಂತರ, ಅವರ ಮೈಮೇಲಿದ್ದ ಎಲ್ಲ ಆಭರಣಗಳನ್ನೂ ಬಿಚ್ಚಿಕೊಳ್ಳಲಾಯಿತು. ನಂತರ, ಅಂತ್ಯಕ್ರಿಯೆಯ ಕೊನೆಯ ಸಂಸ್ಕಾರ ನೆರವೇರಿಸಲಾಯಿತು.ನಟ ವಿಜಯ್‌ ರಾಘವೇಂದ್ರನ ಪತ್ನಿ ಸ್ಪಂದನಾ ಮುತ್ತೈದೆಯಾಗಿ ಸಾವನ್ನಪ್ಪಿದ್ದಾಳೆ. ಆದರೆ, ಈಡಿಗ ಸಮುದಾಯದ ಸಂಪ್ರದಾಯದಂತೆ ಕೊನೆಯದಾಗಿ ಸ್ಪಂದನಾ ಪತಿ ವಿಜಯ್‌ ರಾಘವೇಂದ್ರ ತಾಳಿಯನ್ನು ಕಟ್ಟಿ ಮುತ್ತೈದೆ ಭಾಗ್ಯವನ್ನು ನೀಡಿ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದರು.

ಹಿಂದೂ ಧರ್ಮದ ಸಂಪ್ರದಾಯಗಳಂತೆ ಹಲವು ಸಮುದಾಯಗಳಲ್ಲಿ ವಿವಿಧ ಸಂಪ್ರದಾಯಗಳನ್ನು ಅನುಸರಿಸಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಇನ್ನು ಮುತ್ತೈದೆ ಸಾವು ಬರಲೆಂದು ಸಂಪ್ರದಾಯಸ್ಥ ಮಹಿಳೆಯರು ದೇವರಲ್ಲಿ ಕೇಳಿಕೊಳ್ಳುತ್ತಾರೆ. ಮುತ್ತೈದೆ ಸಾವು ಎಂದರೆ ಗಂಡ ಬದುಕಿರುವಾಗಲೇ ಪತ್ನಿ ಸಾವನ್ನಪ್ಪುವುದು ಆಗಿದೆ. ಮುತ್ತೈದೆಯಾಗಿ ಸಾವಿಗೀಡಾದ ಮಹಿಳೆಯರನ್ನು ಈಡಿಗ ಸಮುದಾಯ ಸೇರಿ ಹಲವು ಸಮುದಾಯಗಳಲ್ಲಿ ವಿವಿಧ ಸಂಪ್ರದಾಯಗಳನ್ನು ಪಾಲನೆ ಮಾಡಲಾಗುತ್ತದೆ. ಅದರಲ್ಲಿ ಕೊನೆಯದಾಗಿ ಮೃತ ಪತ್ನಿಗೆ ತಾಳಿ ಕಟ್ಟುವ ಸಂಪ್ರದಾಯವನ್ನೂ ಮಾಡಲಾಗುತ್ತಿದೆ.

ಸ್ಪಂದನಾ ಇಲ್ಲದೆ ರಾಘು ಜೀವನ ಶೂನ್ಯ; ನಟ ಹರೀಶ್‌ ರಾಜ್‌

ನಟ ವಿಜಯ್‌ ರಾಘವೇಂದ್ರನ ಪತ್ನಿ ಸ್ಪಂದನಾ ಕೂಡ ಮುತ್ತೈದೆಯಾಗಿ ಮೃತಪಟ್ಟಿದ್ದರಿಂದ ಈಡಿಗ ಸಮುದಾಯದ ಸಂಪ್ರದಾಯದಂತೆ ಸ್ಪಂದನಾಳ ಮೃತದೇಹಕ್ಕೆ ಕೊನೆಯದಾಗಿ ತಾಳಿ ಕಟ್ಟಿಸಿ ಮುತ್ತೈದೆಯರಿಂದ ಆರತಿ ಮಾಡಿಸಲಾಯಿತು. ನಂತರ, ಕೊನೆಯದಾಗಿ ಎಲ್ಲರೂ ಮತ್ತೈದೆ ಸ್ಪಂದನಾಳ ಮುಖವನ್ನು ನೋಡಿದ ನಂತರ, ಅವರ ಮೈಮೇಲಿದ್ದ ಎಲ್ಲ ಆಭರಣಗಳನ್ನೂ ಬಿಚ್ಚಿಕೊಳ್ಳಲಾಯಿತು. ನಂತರ, ಅಂತ್ಯಕ್ರಿಯೆಯ ಕೊನೆಯ ಸಂಸ್ಕಾರ ನೆರವೇರಿಸಲಾಯಿತು.

ನಾವು ಮೃತದೇಹವನ್ನು ಸುಡುವಂತಿಲ್ಲ: ಇನ್ನು ಈಡಿಗ ಸಮುದಾಯದ ಮುತ್ತೈದೆ ಸಾವಿನ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಪ್ರಣಾವನಂದಶ್ರೀ ಸ್ವಾಮೀಜಿ ಅವರು, ಈಡಿಗ ಸಮುದಾಯದ ಸಂಪ್ರದಾಯದಂತೆ ಸ್ಪಂದನ ವಿಧಿ ವಿಧಾನ ನೇರವೇರಿಸಲಾಗಿದೆ. ಮನೆಯಲ್ಲಿಯೇ ಎಲ್ಲಾ ಸಂಪ್ರದಾಯವನ್ನು ಮಾಡಲಾಗಿದೆ. ಈಡಿಗ ಬಿಲ್ಲವ ಸಂಪ್ರದಾಯದಂತೆ ನಾರಾಯಣ ಗುರುಗಳು ಹೇಳಿದಂತೆ ಶಾಸ್ತ್ರ ಮಾಡಲಾಗಿದೆ. ನಾರಾಯಣ ಗುರುಗಳು ಹೇಳಿರುವಂತೆ ಬೆಳಿಗ್ಗೆ 9 ಗಂಟೆಗೆಯೊಳಗೆ ಎಲ್ಲವನ್ನೂ ಶಾಸ್ತ್ರ ಮಾಡಿ ಮುಗಿಸಲಾಗಿದೆ. ನಾವು ಮೃತದೇಹವನ್ನು ಹೂಳುವಂತಿಲ್ಲ ಸುಡಬೇಕೆಂದು ಸೂಚನೆ ನೀಡಿದ್ದಾರೆ. ಅದರಂತೆ ಸುಡಲಾಗಿದೆ. ಮಗ ಶೌರ್ಯ ಮತ್ತು ಕುಟುಂಬದ ಸದಸ್ಯರ ‌ಮೂಲಕ ವಿಧಿ ವಿಧಾನವನ್ನು ಮನೆ ಹತ್ತಿರ ಮಾಡಿಸಿದ್ದೇವೆ. ಮನೆಯಲ್ಲಿ 11 ದಿನಗಳ ಕಾಲ ಪೂಜೆಗಳು ನಡೆಯುತ್ತದೆ ಎಂದು ಮಾಹಿತಿ ನೀಡಿದರು. 

 

click me!