Padma Shri to Puneeth Rajkumar: ಅಪ್ಪುಗೆ ಪ್ರದ್ಮಶ್ರೀ ನೀಡಲು ಕೇಂದ್ರಕ್ಕೆ ಶಿಫಾರಸು: ಬೊಮ್ಮಾಯಿ!

By Kannadaprabha NewsFirst Published Dec 14, 2021, 8:36 AM IST
Highlights

*‘ಕರ್ನಾಟಕ ರತ್ನ’ ಪ್ರದಾನಕ್ಕೆ ಶೀಘ್ರದಲ್ಲೇ ದಿನಾಂಕ ನಿಗದಿ
*ಮರಣೋತ್ತರ ಪದ್ಮಶ್ರೀ  ಪ್ರದಾನಕ್ಕೆ ಕೇಂದ್ರಕ್ಕೆ ಶಿಫಾರಸು 
*ಕರ್ನಾಟಕ ರತ್ನ ಪಡೆದ ಸಿನಿಮಾ ರಂಗದ 2ನೇ ವ್ಯಕ್ತಿ ಪುನೀತ್‌

ಸುವರ್ಣಸೌಧ(ಡಿ. 14): ಇತ್ತೀಚೆಗೆ ನಿಧನರಾದ ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar Death) ಅವರಿಗೆ ಮರಣೋತ್ತರ ಪದ್ಮಶ್ರೀ (Padma Shri) ಪ್ರದಾನಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆಶ್ವಾಸನೆ ತಿಳಿಸಿದ್ದಾರೆ. ಅಲ್ಲದೆ, ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ಶೀಘ್ರದಲ್ಲಿಯೇ ನಿಗದಿಗೊಳಿಸಲಾಗುವುದು ಎಂದೂ ಅವರು ಹೇಳಿದ್ದಾರೆ.ಸೋಮವಾರ ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನ ಮಾಡಲು ಘೋಷಣೆ ಮಾಡಿದೆ. ಆದರೆ, ದಿನಾಂಕ ಇನ್ನೂ ನಿಗದಿಗೊಳಿಸಿಲ್ಲ. ಶೀಘ್ರದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ನಿಗದಿ ಮಾಡಲಾಗುವುದು. ಅಲ್ಲದೇ, ಪುನೀತ್‌ ರಾಜ್‌ಕುಮಾರ್‌ ಆವರಿಗೆ ಮರಣೋತ್ತರ ಪದ್ಮಶ್ರೀ ಪ್ರದಾನ ಮಾಡುವಂತೆ ಕೇಂದ್ರಕ್ಕೆ ಶಿಫಾರಸನ್ನು ಸಹ ಮಾಡಲಾಗುವುದು ಎಂದು ಹೇಳಿದರು.

ಪುನೀತ್‌ ರಾಜ್‌ಕುಮಾರ್‌ ಆವರ ನಿಧನದ ವೇಳೆ ಜನ ಸೇರಿದ್ದನ್ನು ನೋಡಿದಾಗ ಆಶ್ಚರ್ಯವಾಯಿತು. ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಯುವ ಸಮುದಾಯವು ದೊಡ್ಡ ಸಂಖ್ಯೆಯಲ್ಲಿಯೇ ಸೇರಿತ್ತು. ಕೇವಲ ಚಿತ್ರರಂಗದಲ್ಲಿ ಮಾತ್ರ ಹೆಸರು ಮಾಡಿಲ್ಲ. ಹಲವು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೆಎಂಎಫ್‌ ಸೇರಿದಂತೆ ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು ಎಂದು ತಿಳಿಸಿದರು.

ಜಾತಿ ಧರ್ಮ ಇಟ್ಕೊಂಡು ಡಾ. ರಾಜ್​ ಕುಟುಂಬ ಮಾತಾಡಲ್ಲ'

ಪುನೀತ್​ ರಾಜ್​ಕುಮಾರ್​ ಜತೆಗಿನ ಒಡನಾಟವನ್ನು ಕುಮಾರ್​ ಬಂಗಾರಪ್ಪ ಅವರು ನೆನಪಿಸಿಕೊಂಡಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದ ಗುಣವನ್ನು ಅವರು ಸದನದಲ್ಲಿ ಕೊಂಡಾಡಿದ್ದಾರೆ. ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು. ಪ್ರತಿ ದಿನ ಅವರನ್ನು ನೆನಪು ಮಾಡಿಕೊಳ್ಳುವಂತಹ ಕೆಲಸ ಆಗುತ್ತಿದೆ. ಬೆಳಗಾವಿಯಲ್ಲಿ ವಿಧಾನಸಭೆ ಚಳಿಗಾಲದ ಅಧಿವೇಶನ (Karnataka Assembly Winter Session) ಆರಂಭ ಆಗಿದೆ. ಸದನದಲ್ಲಿ ಅಪ್ಪು ಬಗ್ಗೆ ಅನೇಕರು ಮಾತನಾಡಿದ್ದಾರೆ. ರಾಜ್​ ಕುಟುಂಬದ ಸಂಬಂಧಿ ಆದಂತಹ ಕುಮಾರ್​ ಬಂಗಾರಪ್ಪ (Kumar Bangarappa) ಅವರು ಕೂಡ ಪುನೀತ್​ ಅವರನ್ನು ಸ್ಮರಿಸಿದರು.

ಕರ್ನಾಟಕ ರತ್ನ ಪಡೆದ ಸಿನಿಮಾ ರಂಗದ 2ನೇ ವ್ಯಕ್ತಿ ಪುನೀತ್‌

ಹಠಾತ್‌ ನಿಧನರಾಗಿ ಕರುನಾಡನ್ನು ದುಃಖದಲ್ಲಿ ಮುಳುಗಿಸಿದ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌(Puneeth Rajkumar) ರಾಜ್ಯದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಕರ್ನಾಟಕ ರತ್ನಕ್ಕೆ(Karnataka Ratna Award) ಭಾಜನರಾದ 10ನೇ ವ್ಯಕ್ತಿ. ಅಲ್ಲದೆ, ಮರಣೋತ್ತರವಾಗಿ ಪ್ರಶಸ್ತಿಗೆ ಪಾತ್ರರಾಗುತ್ತಿರುವ ಮೊದಲ ವ್ಯಕ್ತಿ ಕೂಡಾ ಹೌದು. ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಈವರೆಗೆ ಒಂಬತ್ತು ಗಣ್ಯರಿಗೆ ನೀಡಲಾಗಿದೆ. ಕಡೆಯ ಬಾರಿಗೆ 2009ರಲ್ಲಿ ಈ ಪ್ರಶಸ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ನೀಡಲಾಗಿತ್ತು. ಇದಾಗಿ 11 ವರ್ಷದ ನಂತರ ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.

ಕರ್ನಾಟಕ ರತ್ನ ಪುರಸ್ಕೃತರು

ಡಾ. ಕುವೆಂಪು 1992 ಸಾಹಿತ್ಯ
ಡಾ. ರಾಜಕುಮಾರ್‌ 1992 ಸಿನಿಮಾ, ಸಂಗೀತ
ಎಸ್‌. ನಿಜಲಿಂಗಪ್ಪ 1999 ರಾಜಕೀಯ
ಡಾ. ಸಿ.ಎನ್‌.ರಾವ್‌ 2000 ವಿಜ್ಞಾನ
ಡಾ. ದೇವಿಶೆಟ್ಟಿ 2001 ಮೆಡಿಸಿನ್‌
ಪಂ. ಭೀಮಸೇನ ಜೋಶಿ 2005 ಸಂಗೀತ
ಡಾ. ಶಿವಕುಮಾರ ಸ್ವಾಮೀಜಿ, ಸಿದ್ದಗಂಗಾಮಠ 2007 ಸಮಾಜ ಸೇವೆ
ಡಾ. ಜವರೇಗೌಡ 2008 ಶಿಕ್ಷಣ ಮತ್ತು ಸಾಹಿತ್ಯ
ಡಾ. ವೀರೇಂದ್ರ ಹೆಗ್ಗಡೆ 2009 ಸಮಾಜ ಸೇವೆ, ಪರೋಪಕಾರ
ಪುನೀತ್‌ ರಾಜಕುಮಾರ್‌, 2021, ಸಿನಿಮಾ ಹಾಗೂ ಸಾಮಾಜಿಕ ಸೇವೆ

ಇದನ್ನೂ ಓದಿ:

1)Yuva Rajkumar Film:ಪುನೀತ್‌ರಾಜ್‌ಕುಮಾರ್ ಅವರಿಗಾಗಿಯೇ ಬರೆದುಕೊಂಡಿದ್ದ ಕಥೆಗೆ ಯುವ ನಾಯಕ!

2)Madhagaja: ಅಪ್ಪು ಸಾಧನೆಯನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸಿ ಎಂದ ಶ್ರೀಮುರಳಿ

3)Puneeth Rajkumar Museum: ಗಾಜನೂರು ಮನೆಯನ್ನು ಮ್ಯೂಸಿಯಂ ಮಾಡಲು ಕುಟುಂಬದ ಚಿಂತನೆ?

click me!