Madhagaja; ಶ್ರೀಮುರುಳಿ ಲುಕ್ ಕಂಡು ಹಾಲಿವುಡ್ ಎಂದ ಬೊಮ್ಮಾಯಿ!

By Suvarna NewsFirst Published Nov 20, 2021, 12:36 AM IST
Highlights

* ಸ್ಯಾಂಡಲ್‌ವುಡ್ ನಲ್ಲಿ ಮದಗಜ ಹವಾ
* ಶ್ರೀಮುರಳಿ ಲುಕ್ ಕೊಂಡಾಡಿದ ಸಿಎಂ ಬೊಮ್ಮಾಯಿ
* ಇದು ಹಾಲಿವುಡ್ ಕಂಡಂಗೆ ಕಾಣುತ್ತದೆ
* 1500 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್

ಬೆಂಗಳೂರು(ನ. 19) ಸ್ಯಾಂಡಲ್ ವುಡ್ (Sandalwood) ನಲ್ಲಿ ಮದಗಜ(Madagaja) ಹವಾ ಎಬ್ಬಿಸುತ್ತಿದ್ದಾನೆ.  ಒಂದೇ ಗಂಟೆಯಲ್ಲಿ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಮದಗಜ ಟ್ರೇಲರ್ ಪಡೆದುಕೊಂಡಿದೆ.

ಮಹೇಶ್ ಕುಮಾರ್ ನಿರ್ದೇಶನ, ಉಮಾಪತಿ ಶ್ರೀನಿವಾಸ್ ನಿರ್ಮಾಣ,. ಶ್ರೀಮುರಳಿ((SriiMurali))  ಮತ್ತು ಆಶಿಕಾ ರಂಗನಾಥ್ (Ashika Ranganath) ನಟನೆಯ ಚಿತ್ರ ಮದಗಜ ಡಿಸೆಂಬರ್  3  ರಂದು ಕನ್ನಡ ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಹಾಲಿವುಡ್ ನಲ್ಲಿ ಸಿನಿಮಾದ ಹಾಗೆ ಕಾಣುತ್ತದೆ ಮುರಳಿನ ನೋಡಿದ್ರೆ. ಸೂಪರ್ ಡೂಪರ್ ಹಿಟ್ ಆಗಲಿದೆ ಮದಗಜ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಭವಿಷ್ಯ ನುಡಿದರು.

ಶ್ರೀ ಮುರಳಿ ಅಪ್ಪು ಪುನೀತ್ ರಾಜ್ ಕುಮಾರ್ ಅವರಿಗೆ ನಮಸ್ಕಾರ ಮಾಡಿ ಕಾರ್ಯಕ್ರಮ ಶುರು ಮಾಡಿದ್ದು ತುಂಬಾ ಖುಷಿ ಆಯ್ತು. ವ್ಯಕ್ತಿಗೆ ವಯಸ್ಸು ಮುಖ್ಯವಲ್ಲ ಸಾಧನೆ ಮುಖ್ಯ. ಅದನ್ನು ಜೀವಂತ ದಂತಕಥೆ ಆಗಿರೋ ಅಪ್ಪು ಮಾಡಿದ್ದಾರೆ. ಅವರು ಇವತ್ತು ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ಆದ್ರೂ ಅಪ್ಪು ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ. ಎಲ್ಲವರೆಗೂ ಕನ್ನಡ ಹೃದಯ ಮಿಡಿಯುತ್ತದೆಯೇ ಅಲ್ಲಿವರೆಗೂ ನಮ್ಮ ಜೊತೆ ಇದ್ದಾರೆ ಅನ್ನೋದು ಭಾವನೆ ಎಂದರು.

ಸ್ವಾಮಿ ವಿವೇಕಾನಂದರ ಮಾತು ಒಂದಿದೆ.  ಸಾಧಕನಿಗೆ ಸಾವು ಅಂತ್ಯ ಅಲ್ಲ. ನಿಜವಾದ ಸಾಧಕನಿಗೆ ಸಾವಿನ ನಂತ್ರವೂ ಹೇಗೆ ಬದುಕಬೇಕು ಅನ್ನೋದನ್ನ ತೋರಿಸಿದ್ದಾರೆ. ಅಪ್ಪುಗೆ ನಮ್ಮೆಲ್ಲರ ಹೃದಯ ಅಂತರಾಳದ ನಮಸ್ಕಾರ. ಅಪ್ಪುನ ಸಣ್ಣ ವಯಸ್ಸಿನಿಂದಲೂ ನೋಡಿದ್ದೇನೆ. ದೂರವಾಗುವ ಎರಡು ದಿನ ಮುಂಚೆ ಕಾಲ್ ಮಾಡಿದ್ದರು.  ಟೂರಿಸಂ ಬಗ್ಗೆ ವೆಬ್ ಸೈಟ್ ಮಾಡಿದ್ದೇನೆ. ನ. 2 ರಂದು ಬಿಡುಗಡೆ ಮಾಡಲು ಹೇಳಿದ್ದರು. ಅರ್ಧ ಗಂಟೆ ಟೈಂ ಕೊಡಿ ಅಂದ್ರು ಆಯ್ತು ಬಾ ಅಂದಿದ್ದೆ. ಅವತ್ತೇ ನಾನು ಅಪಾಯಿಂಟ್ ಮೆಂಟ್ ನೀಡಿದ್ದೆ ಎಂದು  ಬಾಂಧವ್ಯ ವಿವರಿಸಿದರು.

ಆದ್ರೆ ವಿಧಿಯ ಆಟ ಬೇರೆ ಆಯ್ತು, ಮೇಲೊಬ್ಬ ಅಪಾಯಟ್ಮೆಂಟ್ ಕೊಟ್ಟ ಅನಿಸುತ್ತೆ. ಅಪ್ಪುವಿನಿಂದ ಪ್ರೇರಣೆ ಆಗಿರೋದು ಶ್ರೀ ಮುರಳಿ. ಅಪ್ಪು ತೀರಿಕೊಂಡಾಗ ಶ್ರೀಮುರಳಿ ಓಡಾಡೋದು ನಾನು ನೋಡಿದೆ. ಅವತ್ತೆ ಅಂದುಕೊಂಡೆ ಶ್ರೀ ಮುರಳಿ ಎಷ್ಟು ಅಚ್ಚಿಕೊಂಡಿದ್ದ ಅಂತ ಮದಗಜಕ್ಕೆ ಒಳ್ಳೆಯದಾಗಲಿ.  ಕಥೆಯ ಬಗ್ಗೆ ಏನಪ್ಪಾ ಅಂತ ಕೇಳಿದೆ, ಯಾರಿಗೂ ಹೇಳಿಲ್ಲ ಆಂಕಲ್ ಅಂದ್ರು, ಹೇಳಬೇಡ ಬಿಡು  ಎಂದು ಚಟಾಕಿ ಹಾರಿಸುತ್ತಲೇ ಈ ಸಿನಿಮಾ ಖಂಡಿತ  ನೋಡುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.

ಮದಗಜ ಟ್ರೇಲರ್ ನೋಡಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ಡಿಸೆಂಬರ್ 3ರಂದು ಬಿಡುಗಡೆ ಆಗುತ್ತಿದೆ. ಯಾವುದಕ್ಕೂ ಕಡಿಮೆ ಮಾಡದಂತೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ. ಒಟ್ಟು 1500 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಲಾಗುತ್ತಿದೆ. ಕೊರೋನಾ ಲಾಕ್‌ಡೌನ್‌ ಆದ್ಮೇಲೆ ಚಿತ್ರರಂಗದಿಂದ ಒಳ್ಳೆ ಒಳ್ಳೆ ಸುದ್ದಿಗಳು ಕೇಳಿ ಬರುತ್ತಿದೆ.

ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಹಾಗೂ ಮಹೇಶ್ ಕುಮಾರ್ (Mahesh Kumar) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಮದಗಜ' (Madhagaja) ಚಿತ್ರದ ಫಸ್ಟ್‌ಲುಕ್, ಟ್ರೇಲರ್, ಸಾಂಗ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಈಗಾಗಲೇ ಪ್ರಕಟಿಸಿದ್ದು, ಚಿತ್ರವನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. 

ಶ್ರೀಮುರಳಿ ಅವರ ಅಭಿಮಾನಿಯೊಬ್ಬರು 'ಮದಗಜ' ಚಿತ್ರ ವೀಕ್ಷಿಸಲು ಒಂದು ದಿನ ಇಡೀ ಕಾಲೇಜಿಗೆ ರಜೆ ನೀಡುವಂತೆ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ.  ಮೈಸೂರಿನ ಜ್ಞಾನೋದಯ ಕಾಲೇಜಿನ ವಿದ್ಯಾರ್ಥಿ ತಮ್ಮ ಪ್ರಿನ್ಸಿಪಾಲ್​ಗೆ ಪತ್ರ ಬರೆದಿದ್ದು, ಚಿತ್ರ ಬಿಡುಗಡೆಯಾಗುವ ದಿನಾಂಕ ಡಿಸೆಂಬರ್. 3ರಂದು ಇಡೀ ಕಾಲೇಜಿಗೆ ರಜೆ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದು ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. 

"

click me!