ಗ್ರೇಟ್ ಓಪನಿಂಗ್, ಸ್ಕ್ರೀನ್‌ ಸಂಖ್ಯೆಯಲ್ಲೂ ಹೆಚ್ಚಳ.. 'ಕರಾವಳಿ' ಫಸ್ಟ್ ಡೇ ಕಲೆಕ್ಷನ್ ಎಷ್ಟಾಯ್ತು ಗೊತ್ತಾ?

Published : Jul 26, 2026, 02:38 PM IST
Karavali

ಸಾರಾಂಶ

ಕರಾವಳಿ ಸಿನಿಮಾವನ್ನು ಸದ್ಯ ಕರ್ನಾಟಕದಲ್ಲಿ ಮಾತ್ರ ರಿಲೀಸ್ ಮಾಡಲಾಗಿದೆ. ಸಿನಿಮಾ ಸಿಕ್ತಿರುವ ಪ್ರತಿಕ್ರಿಯೆ ನೋಡಿ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾತು ಕೇಳಿಬಂದಿದೆ. ಮುಂದಿನ ವಾರ ಪಕ್ಕದ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಾಗಿದೆ

ಈ ವರ್ಷ ಕನ್ನಡದ ಗ್ರೇಟ್ ಓಪನಿಂಗ್ ಪಡೆದ ಸಿನಿಮಾಗಳ ಲಿಸ್ಟ್‌ನಲ್ಲಿ ಕರಾವಳಿ.. ಸಿನಿಮಾಗೆ ಹೆಚ್ಚಿದ ಡಿಮ್ಯಾಂಡ್; ಸ್ಚ್ರೀನ್‌ಗಳ ಸಂಖ್ಯೆ ಜಾಸ್ತಿ ಮಾಡಿದ ಚಿತ್ರತಂಡ!

ಗುರುದತ್ ಗಾಣಿಗ ನಿರ್ದೇಶನ, ಪ್ರಜ್ವಲ್ ದೇವರಾಜ್ ನಾಯಕತ್ವ, ಮಿತ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರ ಪೋಷಣೆಯ ಕನ್ನಡ ಸಿನಿಮಾ 'ಕರಾವಳಿ' (Karavali) ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಂಬಳದ ಅದ್ಭುತ ಪ್ರಪಂಚವನ್ನು ಕಣ್ತುಂಬಿಕೊಂಡ ಕನ್ನಡ ಸಿನಿಪ್ರಿಯರು ಕರಾವಳಿ ಸಿನಿಮಾಗೆ ಭರಪೂರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಚಿತ್ರವು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಸ್ಯಾಂಡಲ್‌ವುಡ್ ಚಿತ್ರರಂಗಕ್ಕೆ ಭರವಸೆ ಬೆಳಕು ಮೂಡಿಸಲಿದೆ ಎಂಬ ಮಾತು ಕೇಳಿಬರುತ್ತಿದೆ.

ಕರಾವಳಿ ಸಿನಿಮಾ ಬಿಡುಗಡೆಯಿಂದ ರಾಜ್ಯಾದ್ಯಂತ ಚಿತ್ರಮಂದಿರಗಳು ತುಂಬಿದ ಪ್ರದರ್ಶನ ಕಾಣುತ್ತಿರುವುದು ಖುಷಿಯ ವಿಚಾರ. ಜುಲೈ 24ಕ್ಕೆ ರಿಲೀಸ್ ಆದ ಕರಾವಳಿ, 175 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆದರೀಗ ಸಿನಿಮಾಗೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆ ಹಾಗೂ ಹೌಸ್ ಫುಲ್ ಪ್ರದರ್ಶನ ಕಂಡು ಮತ್ತಷ್ಟು ಸ್ಟ್ರೀನಿಂಗ್ ಜಾಸ್ತಿ ಮಾಡಲಾಗಿದೆ. 2ನೇ ದಿನ 25ಕ್ಕೂ ಸ್ಟ್ರೀನ್‌ಗಳು ಹೆಚ್ಚಾಗಿರುವುದು ಕನ್ನಡ ಸಿನಿಮಾರಂಗದ ಮಟ್ಟಿಗಿದು ನಿಜಕ್ಕೂ ಸಂತಸದ ಸಂಗತಿ ಎನ್ನಲೇಬೇಕು.

ಮೊದಲ ದಿನ ಕರಾವಳಿ ಸಿನಿಮಾ 1 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಕನ್ನಡ ಸಿನಿಮಾರಂಗದ ಈಗಿನ ಪರಿಸ್ಥಿತಿಗೆ ಇದು ಅತೀ ದೊಡ್ಡ ಕಲೆಕ್ಷನ್ ಅಂದರೆ ತಪ್ಪಾಗಲ್ಲ. ಈ ವರ್ಷ ಕನ್ನಡದಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿಯೇ ಉತ್ತಮ ಓಪನಿಂಗ್ ಪಡೆದುಕೊಂಡ ಚಿತ್ರವೆಂದರೆ ಅದು ಈ ಕರಾವಳಿ ಎನ್ನಬಹುದು. ಕರಾವಳಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ ಹಾಗೂ ಹೆಚ್ಚು ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ. ಇನ್ನು ಇವತ್ತು ಮತ್ತು ನಾಳೆ ವೀಕೆಂಡ್ ಇರುವುದರಿಂದ ಕಲೆಕ್ಷನ್ ದುಪ್ಪಟ್ಟು ಆಗುವ ನಿರೀಕ್ಷೆ ಇದೆ.

ಬುಕ್ ಮೈ ಶೋನಲ್ಲಿ ಗಂಟೆಗೆ 2ಸಾವಿರಕ್ಕೂ ಅಧಿಕ ಟಿಕೆಟ್ಸ್ ಬುಕ್

ಕರಾವಳಿ ರಿಲೀಸ್ ಆದ 2ನೇ ದಿನಕ್ಕೆ ಬುಕ್ ಮೈ ಶೋನಲ್ಲಿ ಗಂಟೆಗೆ 2ಸಾವಿರಕ್ಕೂ ಅಧಿಕ ಟಿಕೆಟ್ಸ್ ಬುಕ್ ಆಗುತ್ತಿದೆ. ಇದು ಕರಾವಳಿ ಸಿನಿಮಾ ಕಣ್ತುಂಬಿಕೊಳ್ಳಬೇಕು ಎನ್ನುವವರ ಹಂಬಲ ಜಾಸ್ತಿಯಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಅಭಿಮಾನಿಗಳಿಂದ ಸಿಕ್ತಿರುವ ಪ್ರತಿಕ್ರಿಯೆ ನೋಡಿ ಸಿನಿಮಾತಂಡ ಕೂಡ ಖುಷಿಯಾಗಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ಬಂದಂತೆ ಆಗಿದೆ. ಉತ್ತಮ ಕಟೆಂಟ್ ಸಿನಿಮಾ ಬಂದರೆ ಸ್ಯಾಂಡಲ್‌ವುಡ್ ಸಿನಿಪ್ರಿಯರು ಥಿಯೇಟರ್‌ಗಳಿಗೆ ಬರುತ್ತಾರೆ ಎಂಬುದಕ್ಕೆ ಈ ಸಿನಿಮಾ ಕರಾವಳಿ ಸಾಕ್ಷಿ ಕೊಡುತ್ತಿದೆ ಎನ್ನಬಹುದು!

ಪರಭಾಷೆಯಲ್ಲೂ ಬೇಡಿಕೆ

ಕರಾವಳಿ ಸಿನಿಮಾವನ್ನು ಸದ್ಯ ಕರ್ನಾಟಕದಲ್ಲಿ ಮಾತ್ರ ರಿಲೀಸ್ ಮಾಡಲಾಗಿದೆ. ಸಿನಿಮಾ ಸಿಕ್ತಿರುವ ಪ್ರತಿಕ್ರಿಯೆ ನೋಡಿ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾತು ಕೇಳಿಬಂದಿದೆ. ಮುಂದಿನ ವಾರ ಪಕ್ಕದ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್ ಸೋದರಳಿಯ ಸಂಚಿತ್ ಸಂಜೀವ್‌ ‘ಮ್ಯಾಂಗೋ ಪಚ್ಚ’ ಈಗ ಒಟಿಟಿಯಲ್ಲಿ: ಎಲ್ಲಿ ನೋಡಬಹುದು?
ಕನಸು ಕಂಡವರು ನಿರ್ಮಾಪಕರಾದರು, ಕತೆ ಬರೆದವರು ಸಿಎಂ ಪಾತ್ರ ಮಾಡಿದರು: 'ಕಾಮನ್‌ ಮ್ಯಾನ್‌'