ಗಲ್ಲಿಗಲ್ಲಿಯಲ್ಲಿ ರಚಿತಾ ರಾಮ್ ಸುದ್ದಿ.. 'ಲೇಡಿ ಬಾಸ್' ನೋಡಿ ಮಂಡ್ಯದ ಹಳ್ಳಿಯ ಹೆಣ್ಣುಮಕ್ಕಳು ಹೇಳಿದ್ದೇನು? ಆ ಗುಟ್ಟು ರಟ್ಟು!

Published : Jul 26, 2026, 11:01 AM IST
Rachita Ram

ಸಾರಾಂಶ

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿಯ 'ಅಯೋಗ್ಯ' ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಈಗ ಅದರ ಮುಂದುವರಿದ ಭಾಗ 'ಅಯೋಗ್ಯ-2' ಸಿದ್ಧವಾಗಿದೆ. ಇತ್ತೀಚೆಗೆ ಮಂಡ್ಯದ ಸುತ್ತಮುತ್ತ ಈ ಚಿತ್ರದ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲೇನಾಯ್ತು ನೋಡಿ..

ರಚಿತಾ ರಾಮ್‌ ಸಿಂಪ್ಲಿಸಿಟಿಗೆ ಲೇಡಿ ಫ್ಯಾನ್ಸ್ ಫಿದಾ!

ಕನ್ನಡದ 'ಡಿಂಪಲ್ ಕ್ವೀನ್' ನಟಿ ರಚಿತಾ ರಾಮ್ (Rachita Ram) ಅವರು ಯಾವತ್ತೋ ಮಂಡ್ಯ ಹೈದರ ಮನಗೆದ್ದಿದ್ದಾಗಿದೆ. ಈಗ ಮಂಡ್ಯದ ಹಳ್ಳಿ ಹೆಣ್ಣುಮಕ್ಕಳ ಸರದಿ! ಹೌದು, ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿ ರಚಿತಾ ರಾಮ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬೆಳ್ಳಿತೆರೆಯ ಮೇಲೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಈ ನಟಿ, ನಿಜ ಜೀವನದಲ್ಲಿ ಎಷ್ಟು ಸರಳ ಅನ್ನೋದಕ್ಕೆ ಈಗ 'ಅಯೋಗ್ಯ-2' ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಮಂಡ್ಯದ ಮಣ್ಣಿನ ಸೊಗಡಿನ ಈ ಚಿತ್ರದ 'ಹುಡುಗೀರ್ ಡೇಂಜರಸ್' ಹಾಡಿನ ಮೇಕಿಂಗ್ ಹೊತ್ತಿನಲ್ಲಿ ನಡೆದ ಆ ಒಂದು ವಿದ್ಯಮಾನ ಇದೀಗ ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅದರಲ್ಲಿ ಹಳ್ಳಿ ಹೆಣ್ಣುಮಕ್ಕಳು ಮತ್ತು ರಚಿತಾ ರಾಮ್ ನಡುವಿನ ಆ ಸುಂದರ ಕ್ಷಣಗಳು ಅಭಿಮಾನಿಗಳ ಮನ ಗೆದ್ದಿವೆ.

ಮಂಡ್ಯದ ಹಳ್ಳಿಯಲ್ಲಿ 'ಅಯೋಗ್ಯ' ಹವಾ!

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿಯ 'ಅಯೋಗ್ಯ' ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಈಗ ಅದರ ಮುಂದುವರಿದ ಭಾಗ 'ಅಯೋಗ್ಯ-2' ಸಿದ್ಧವಾಗಿದೆ. ಇತ್ತೀಚೆಗೆ ಮಂಡ್ಯದ ಸುತ್ತಮುತ್ತ ಈ ಚಿತ್ರದ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ಹಳ್ಳಿಯ ಹಸಿರು, ಮಣ್ಣಿನ ವಾಸನೆಯ ನಡುವೆ ಶೂಟಿಂಗ್ ನಡೆಯುತ್ತಿದ್ದಾಗ ಅಲ್ಲಿಗೆ ಬಂದಿದ್ದು ಆ ಭಾಗದ ಮುಗ್ಧ ಹಳ್ಳಿ ಹೆಣ್ಣುಮಕ್ಕಳು.

ಟಿವಿಯಲ್ಲಿ ನೋಡಿದ್ದೀವಿ, ಇವತ್ತು ನೇರವಾಗಿ ನೋಡಿದ್ವಿ!

ತಮ್ಮ ನೆಚ್ಚಿನ ನಟಿಯನ್ನು ಹತ್ತಿರದಿಂದ ನೋಡಿದ ಹಳ್ಳಿ ಮಹಿಳೆಯರ ಖುಷಿಗೆ ಪಾರವೇ ಇರಲಿಲ್ಲ. ಆಗ ರಚಿತಾ ಅವರು ತುಂಬಾನೇ ಪ್ರೀತಿಯಿಂದ ಅವರ ಹತ್ತಿರ ಹೋಗಿ ಮಾತನಾಡಿಸಿದ್ದಾರೆ. "ನೀವು ನಮ್ಮ ಸಿನಿಮಾಗಳನ್ನೆಲ್ಲಾ ನೋಡ್ತೀರಾ?" ಅಂತ ರಚಿತಾ ಕೇಳಿದಾಗ, ಆ ಹೆಣ್ಣುಮಕ್ಕಳು ಕೊಟ್ಟ ಉತ್ತರ ಮಾತ್ರ ಸಖತ್ ಪ್ರಾಮಾಣಿಕವಾಗಿತ್ತು. "ನಮಗೆ ಕೆಲಸ ಮಾಡೋದ್ರಲ್ಲೇ ಹೊತ್ತು ಹೋಗಿರುತ್ತೆ.. ಸಿನಿಮಾ ನೋಡೋಕೆ ಟೈಮ್ ಸಿಗಲ್ಲ. ಆದ್ರೆ ಟಿವಿಯಲ್ಲಿ, ಜೀ ಕನ್ನಡದ ಕಾರ್ಯಕ್ರಮಗಳಲ್ಲಿ ನಿಮ್ಮನ್ನ ಸದಾ ನೋಡ್ತಾ ಇರ್ತೀವಿ. ಇವತ್ತು ನಿಮ್ಮನ್ನ ಹತ್ತಿರದಿಂದ ನೋಡಿ ತುಂಬಾ ಖುಷಿ ಆಯ್ತು" ಅಂತ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

ಫೋನ್ ಇಸ್ಕೊಂಡು ಫೋಟೋ ತೆಗೆಸಿಕೊಂಡ ರಚಿತಾ!

ಕೇವಲ ಮಾತುಕತೆಗೆ ಸೀಮಿತವಾಗದ ರಚಿತಾ ರಾಮ್, ಅಲ್ಲಿ ಒಂದು ಅಪರೂಪದ ಕೆಲಸ ಮಾಡಿದರು. ತಾವೇ ಮುಂದೆ ನಿಂತು ಆ ಮಹಿಳೆಯರ ಮೊಬೈಲ್ ಫೋನ್ ಪಡೆದು, ಅಲ್ಲಿದ್ದ ಲೈಟ್ ಬಾಯ್ಸ್ ಅಥವಾ ಸೆಟ್ ಹುಡುಗರ ಕೈಗೆ ಕೊಟ್ಟು, "ನಮ್ಮೆಲ್ಲರ ಫೋಟೋ ಚೆನ್ನಾಗಿ ತೆಗೆಯಿರಿ" ಅಂತ ಹೇಳಿ ಎಲ್ಲರ ಜೊತೆ ನಗುನಗುತ್ತಾ ಪೋಸ್ ಕೊಟ್ಟಿದ್ದಾರೆ. ಒಬ್ಬ ಸ್ಟಾರ್ ನಟಿಯಾಗಿ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಅವರು ನಡೆದುಕೊಂಡ ರೀತಿ ನಿಜಕ್ಕೂ ಮೆಚ್ಚುವಂತದ್ದು. ಈ ವಿಡಿಯೋ ಈಗ ಇನ್‌ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ಹರಿದಾಡುತ್ತಿದೆ. ಜೊತೆಗೆ, ಮಂಡ್ಯದ ಆ ಹಳ್ಳಿಯ ಹುಡಗಿಯರು-ಹುಡಗರ ಮೊಬೈಲ್‌ಗಳಲ್ಲಿ ಈ ವಿಡಿಯೋ ಓಡಾಡುತ್ತಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಜೊತೆಗೆ, 'ಸುದ್ದಿ ಮನೆ' ನ್ಯೂಸ್ ಇನ್‌ಸ್ಟಾಗ್ರಾಂ' ಪೇಜ್‌ನಲ್ಲಿ ಈ ವಿಡಿಯೋ ಸಖತ್ ಸುದ್ದಿ ಮಾಡುತ್ತಿದೆ.

ಆಗಸ್ಟ್ 7ಕ್ಕೆ 'ಅಯೋಗ್ಯ-2' ದರ್ಬಾರ್ ಶುರು!

ಇನ್ನು ಸಿನಿಮಾದ ವಿಷಯಕ್ಕೆ ಬಂದರೆ, 'ಅಯೋಗ್ಯ-2' ಇದೇ ಆಗಸ್ಟ್ 7 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸತೀಶ್ ನೀನಾಸಂ, ರಚಿತಾ ರಾಮ್ ಜೊತೆಗೆ ದಡಿಯಾ ಗಿರಿ, ಶಿವರಾಜ್ ಕೆ.ಆರ್. ಪೇಟೆ ತಾರಾಗಣದಲ್ಲಿದ್ದಾರೆ. ಚಿತ್ರತಂಡ ಈಗಾಗಲೇ ಹುಬ್ಬಳ್ಳಿಯ ಸಿದ್ಧರೂಢ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದೆ. ಹಳ್ಳಿಯ ಸೊಗಡು, ಹಾಸ್ಯ ಮತ್ತು ಎಮೋಷನ್ ಒಳಗೊಂಡ ಈ ಚಿತ್ರವು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ಒಟ್ಟಿನಲ್ಲಿ ರಚಿತಾ ರಾಮ್ ಅವರ ಈ ಸರಳತೆ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಬಹುದು. ಇನ್ನೇನು ಸ್ವಲ್ಪ ದಿನಗಳು ಕಾದರೆ ಸಾಕು, ಅಯೋಗ್ಯ -2 ಚಿತ್ರವನ್ನು ತೆರೆಯ ಮೇಲೆ ನೋಡಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್ ಸೋದರಳಿಯ ಸಂಚಿತ್ ಸಂಜೀವ್‌ ‘ಮ್ಯಾಂಗೋ ಪಚ್ಚ’ ಈಗ ಒಟಿಟಿಯಲ್ಲಿ: ಎಲ್ಲಿ ನೋಡಬಹುದು?
ಕನಸು ಕಂಡವರು ನಿರ್ಮಾಪಕರಾದರು, ಕತೆ ಬರೆದವರು ಸಿಎಂ ಪಾತ್ರ ಮಾಡಿದರು: 'ಕಾಮನ್‌ ಮ್ಯಾನ್‌'