ಹಿಂದಿ ಸಿನಿಮಾಗಳಲ್ಲಿ ನಟಿಸಲು ಸೌತ್ ಸ್ಟಾರ್ಸ್ ಯಾಕೆ ಇಷ್ಟಪಡಲ್ಲ? ಅಭಿಮಾನಿಗಳ ಹೃದಯ ಗೆದ್ದ ರಿಷಬ್ ಉತ್ತರ

By Shruthi Krishna  |  First Published Nov 1, 2022, 6:14 PM IST

ದಕ್ಷಿಣ ಭಾರತದ ಸ್ಟಾರ್ಸ್ ಬಾಲಿವುಡ್ ನಲ್ಲಿ ನಟಿಸಲು ನಟಿಸಲು ಯಾಕೆ ಇಷ್ಟಪಡುವುದಿಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ ಉತ್ತರ ಅಭಿಮಾನಿಗಳ ಹೃದಯ ಗೆದ್ದಿದೆ. 


ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಸಿನಿರಂಗವನ್ನು ಕಬ್ಜ ಮಾಡಿದೆ. ಒಂದು ಕಾಲದಲ್ಲಿ ಭಾರತೀಯ ಸಿನಿಮಾರಂಗ ಎಂದರೆ ಬಾಲಿವುಡ್ ಎನ್ನುವ ಮಾತಿತ್ತು. ಆದರೀಗ ಕಾಲ ಬದಲಾಗಿದೆ. ಭಾರತೀಯ ಸಿನಿಮಾರಂಗ ಎಂದರೆ ಬಾಲಿವುಡ್ ಮಾತ್ರ ಅಲ್ಲ ಎಂದು ಸೌತ್ ಸಿನಿಮಾಗಳು ನಿರೂಪಿಸಿವೆ. ದಕ್ಷಿಣ ಭಾರತದ ಅನೇಕ ಸಿನಿಮಾಗಳು ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಇದೀಗ ಕನ್ನಡದ ಕಾಂತಾರ ಸಿನಿಮಾ ಎಲ್ಲಾ ಕಡೆ ರಾರಾಜಿಸುತ್ತಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಷಬ್ ಶೆಟ್ಟಿ ಸಿನಿಮಾ ಕನ್ನಡ ಮಾತ್ರಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 

ಈ ನಡುವೆ ಸೌತ್ ಕಲಾವಿದರು ಯಾಕೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡಲ್ಲ ಎನ್ನುವ ಮಾತು ಚರ್ಚೆಯಾಗುತ್ತಿದೆ. ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಅನೇಕ ದೊಡ್ಡ ಕಲಾವಿದರಿದ್ದಾರೆ. ಆದರೆ ಅವರ್ಯಾರು ಬಾಲಿವುಡ್ ಕಡೆ ಹೋಗಲು ಇಷ್ಟಪಡುವುದಿಲ್ಲ. ಈ ಬಗ್ಗೆ ರಿಷಬ್ ಶೆಟ್ಟಿಗೆ ಪ್ರಶ್ನೆ ಎದುರಾಗಿದೆ. ಕಾಂತಾರ ಸಿನಿಮಾದ ಸಕ್ಸಸ್ ನಲ್ಲಿರುವ ರಿಷಬ್ ಶೆಟ್ಟಿ ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ರಿಷಬ್‌ಗೆ ಸೌತ್ ಸ್ಟಾರ್ಸ್‌ಗಳು ಯಾಕೆ ಬಾಲಿವುಡ್ ನಲ್ಲಿ ನಟಿಸಲು ಇಷ್ಟಪಟ್ಟಲ್ಲ ಎಂದು ಪ್ರಶ್ನೆ ಮಾಡಲಾಗಿದೆ. ಕಾಂತಾರ ಶಿವನ ಉತ್ತರ ಅಭಿಮಾನಿಗಳ ಹೃದಯ ಗೆದ್ದಿದೆ. 

Kantara ಹಿಂದಿಗೆ ರಿಮೇಕ್ ಮಾಡುವ ಬಗ್ಗೆ ರಿಷಬ್ ಪ್ರತಿಕ್ರಿಯೆ ವೈರಲ್; ಶೆಟ್ರು ಹೇಳಿದ್ದೇನು?

Tap to resize

Latest Videos

ಅನೇಕ ಸೌತ್ ಸ್ಟಾರ್‌ಗಳಿಗೆ ಬಾಲಿವುಡ್ ನಿಂದ ದೊಡ್ಡ ದೊಡ್ಡ ಆಫರ್‌ಗಳು ಬಂದಿವೆ. ಆದರೆ ಆಫರ್ ಗಳನ್ನು ತಿರಸ್ಕರಿಸಿ ತಮ್ಮ ಭಾಷೆಗಳಲ್ಲೇ ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಉತ್ತರಿಸಿದ ರಿಷಬ್ ಶೆಟ್ಟಿ, 'ಕಾಂತಾರ ಕನನ್ಡ ಸಿನಿಮಾವಾಗಿದ್ದರೂ ಈ ಸಿನಿಮಾದಲ್ಲಿನ ವಿಷಯವನ್ನು ಜನ ಇಷ್ಟಪಟ್ಟಿದ್ದಾರೆ. ಪ್ರೇಕ್ಷಕರು ಈಗ ಭಾಷೆಯ ತಡೆಗೋಡೆಯನ್ನು ದಾಟಿದ್ದಾರೆ. ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುತ್ತಿದ್ದಾರೆ. ಪ್ರತಿಯೊಂದು ಸಿನಿಮಾಗಳು ಸಹ ಭಾರತೀಯ ಸಿನಿಮಾರಂಗಕ್ಕೆ ಅಪಾರ ಕೊಡುಗೆ ನಾಡಿವೆ' ಎಂದು ಹೇಳಿದರು.

'ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಸಿನಿಮಾದೊಂದಿಗೆ ಪ್ರೇಕ್ಷಕರು ಆಳವಾದ ಸಂಪರ್ಕ ಹೊಂದುತ್ತಾರೆ.  ನಾನು ಕೂಡ ಒಬ್ಬ ಪ್ರೇಕ್ಷಕನಾಗಿ ನನ್ನ ದೇಶ, ಗ್ರಾಮ, ಸಂಸ್ಕೃತಿ ಮತ್ತು ನನ್ನ ಭಾಷೆಯ ಕುರಿತಾದ ಕಥೆಗಳನ್ನು ಇಷ್ಟಪಡುತ್ತೇನೆ. ಭಾರತೀಯ ಸಂಸ್ಕೃತಿ ಮತ್ತು ಜೀವನ ವಿಧಾನವು ಪ್ರಪಂಚದ ಇತರ ಭಾಗಗಳಿಗಿಂತ ಭಿನ್ನವಾಗಿದೆ. ಇವುಗಳನ್ನು ಯಾವುದೇ ರೀತಿಯಲ್ಲಿ ನೋಡಲು  ಸಂತೋಷವಾಗುತ್ತದೆ. ಅದು ನಮ್ಮ ಭಾವನೆ ಮತ್ತು ಸಿನಿಮಾ ನಿರ್ಮಾಪಕರು, ಕಥೆಗಾರರು ನಮ್ಮ ಸಂಪ್ರದಾಯಗಳ ಬಗ್ಗೆ ಮುಂದಿನ ಪೀಳಿಗೆಗೆ ಹೇಳುವುದು ನಮ್ಮ ಜವಾಬ್ದಾರಿ. ಮುಂದಿನ ಪೀಳಿಗೆಯವರು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿ ಬಗ್ಗೆ ಏನನ್ನಾದರೂ ನೋಡಬೇಕು' ಎಂದು ಹೇಳಿದ್ದಾರೆ. 

ಬಾಹುಬಲಿ 2 ಅನ್ನೂ ಮೀರಿದ ಕಾಂತಾರ, 5ನೇ ವಾರಾಂತ್ಯದಲ್ಲಿ ರೆಕಾರ್ಡ್‌ ಗಳಿಕೆ!

ರಿಷಬ್ ಶೆಟ್ಟಿಗೆ ಹಿಂದಿ ಸಿನಿಮಾರಂಗ ಪ್ರವೇಶಿಸುವ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ಆದರೆ, ಹಿಂದಿ ಬೆಲ್ಟ್ ದಕ್ಷಿಣದ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಒಪ್ಪಿಕೊಂಡರು. ಮತ್ತು ಕಾಂತಾರರನ್ನು ಪ್ರೀತಿಸುತ್ತಿರುವ ಹಿಂದಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದರು.

 
 

click me!