ನಟಿ ಅದಿತಿ ಪ್ರಭುದೇವ ಕೈಯಲ್ಲಿ ಅರಳಿದ ಗಣಪ: ವಿಡಿಯೋ ನೋಡಿ ಶ್ಲಾಘನೆಗಳ ಮಹಾಪೂರ

Published : Sep 11, 2024, 05:38 PM IST
ನಟಿ ಅದಿತಿ ಪ್ರಭುದೇವ ಕೈಯಲ್ಲಿ ಅರಳಿದ ಗಣಪ: ವಿಡಿಯೋ ನೋಡಿ ಶ್ಲಾಘನೆಗಳ ಮಹಾಪೂರ

ಸಾರಾಂಶ

ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರು ಈ ಬಾರಿ ಖುದ್ದಾಗಿ ಗಣಪತಿಯನ್ನು ತಯಾರಿಸಿದ್ದಾರೆ. ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದು ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.   

ಗಣೇಶ ಹಬ್ಬದ ಸಂಭ್ರಮ ಇನ್ನೂ ಹಲವು ಕಡೆಗಳಲ್ಲಿ ನಡೆಯುತ್ತಿದೆ. ಕೃತಕ ಬಣ್ಣಗಳಿಂದ ಮಾಡಿರುವ ಗಣೇಶನ ಬದಲು ನೈಸರ್ಗಿಕ ಗಣಪನ ಮೂರ್ತಿ ತಯಾರಿಸುವ ಬಗ್ಗೆ ಜನರು ಒಲವು ತೋರುತ್ತಿದ್ದಾರೆ. ಅದರಲ್ಲಿಯೂ ನಾವೇ ನಮ್ಮ ಕೈಯಾರೆ ತಯಾರಿಸಿದ ಮಣ್ಣಿನ ಗಣಪನನ್ನು ಪೂಜೆ ಮಾಡುವ ಖುಷಿಯೇ ಬೇರೆಯಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್​ ಕೂಡ ಶುರುವಾಗಿದೆ. ಇದಕ್ಕಾಗಿಯೇ ಹಲವಾರು ಕಡೆಗಳಲ್ಲಿ ಮಣ್ಣಿನ ಗಣಪ ತಯಾರಿಕಾ ಕಾರ್ಯಾಗಾರವನ್ನೂ ಏರ್ಪಡಿಸಲಾಗುತ್ತದೆ. ಇಂದಿನ ಹಲವು ಸೀರಿಯಲ್​ಗಳಲ್ಲಿ ಕೂಡ ಮಣ್ಣಿನ ಗಣಪನನ್ನು ತಯಾರಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

ಇದೀಗ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರೂ, ತಾವೇ ಖುದ್ದಾಗಿ ಮನೆಯಲ್ಲಿ ಮಣ್ಣಿನ ಗಣಪತಿಯನ್ನು ತಯಾರಿಸಿದ್ದಾರೆ. ಅದರ ವಿಡಿಯೋ ಅನ್ನು ಅವರು ಶೇರ್​ ಮಾಡಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’, ಅಲೆಕ್ಸಾ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಸ್ಯಾಂಡಲ್​ವುಡ್​ ಬೆಡಗಿ ಅದಿತಿ ಪ್ರಭುದೇವ ಈಗ ಮೂರು ತಿಂಗಳ ಪುಟಾಣಿ ಮಗಳ ಅಮ್ಮ ಆಗಿದ್ದಾರೆ.   ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. 

ಮದ್ವೆಯಾದ ತಕ್ಷಣ ಮಗುವಾಗಿದ್ದು ಇದ್ಕೇ ಅಂತೆ! ನಟಿ ಅದಿತಿ ಮಾತಿಗೆ ತಾರಾ, ಶ್ರುತಿನೇ ನಾಚಿಕೊಂಡುಬಿಟ್ರು...

ಮಗು ಎರಡೂವರೆ ತಿಂಗಳು ಇರುವಾಗಲೇ ಜೀ ಕನ್ನಡದ ರಾಜಾ ರಾಣಿ ಷೋನಲ್ಲಿ ತೀರ್ಪುಗಾರರಾಗಿಯೂ ಬಂದು ಕೆಲಸ ಶುರು ಮಾಡಿಕೊಂಡಿದ್ದಾರೆ, ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿಯೂ ನಟಿ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ್ಗೆ ಹಲವಾರು ವಿಷಯಗಳನ್ನು ಶೇರ್​  ಮಾಡಿಕೊಳ್ಳುವ ಅದಿತಿ ಅವರು, ಇದೀಗ ತಮ್ಮ ಮನೆಯಲ್ಲಿ ನಡೆದ ಗೌರಿ-ಗಣೇಶ ಪೂಜೆಯ ಬಗ್ಗೆ ವಿಡಿಯೋ ಶೇರ್​ ಮಾಡಿದ್ದಾರೆ. ಅದರಲ್ಲಿ ಅವರು ಮಣ್ಣನ್ನು ತಂದು ಸ್ವತಃ ಅದನ್ನು ರೆಡಿ ಮಾಡಿ, ಅದಕ್ಕೆ ಬಣ್ಣ ಹಚ್ಚಿ ಶೃಂಗಾರ ಮಾಡಿ ಕುಳ್ಳರಿಸುವುದನ್ನು ತೋರಿಸಿದ್ದಾರೆ.

ಇದರ ಜೊತೆಗೆ, ಗಣೇಶನ ಹಬ್ಬಕ್ಕಾಗಿ ವಿಶೇಷ ಅಡುಗೆ, ಸಿಹಿ, ಮೋದಕ ಇತ್ಯಾದಿಗಳನ್ನು ಮಾಡಿರುವುದನ್ನೂ ಈ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ. ಅಷ್ಟೆಲ್ಲಾ ಬಿಜಿ ಷೆಡ್ಯೂಲ್​ ನಡುವೆಯೂ ನಟಿ ಖುದ್ದು ಗಣಪನ ತಯಾರಿಸಿ ಇತರರಿಗೆ ಸ್ಫೂರ್ತಿಯಾಗಿರುವುದಾಗಿ ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ. ಅಂದಹಾಗೆ, ಅದಿತಿ ಅವರು, 2022ರ ನವೆಂಬರ್​ 28ರಂದು  ಕೊಡಗಿನ ಉದ್ಯಮಿ ಯಶಸ್​ ಪಟ್ಲಾ ಅವರ ಕೈಹಿಡಿದಿದ್ದಾರೆ. ಮದುವೆಯಾಗಿ ಒಂದು ವರ್ಷದಲ್ಲಿ ಗುಡ್​ನ್ಯೂಸ್​ ಕೊಟ್ಟಿದ್ದ ನಟಿ, 2024ರ ಏಪ್ರಿಲ್​ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳಿಗೆ ಎರಡು ತಿಂಗಳು ಆಗುತ್ತಲೇ,  ಇವರು,  ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಇದಾಗಲೇ ರಾಜಾ ರಾಣಿ ಮೂರನೇ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದಾರೆ.  

ಸದ್ಯ ಅದಿತಿ ತಾಯ್ತನದ ಸುಖ ಅನುಭವಿಸುತ್ತಿದ್ದಾರೆ. ಈ ಕುರಿತು ರಿಯಾಲಿಟಿ ಷೋನಲ್ಲಿ ಹೇಳಿದ್ದ ನಟಿ, ಮದುವೆಯಾದ ಮೇಲೆ ಜೀವನದ ಬದಲಾವಣೆ ಆಗಿದ್ದು ನಿಜ. ಆದ್ರೆ ಅಮ್ಮನಾದ ಮೇಲಂತೂ ಅದೊಂದು ರೀತಿಯಲ್ಲಿ ಹೇಳಿಕೊಳ್ಳಲಾಗದ ಖುಷಿ. ಎಲ್ಲರೂ ಹೇಳುತ್ತಿದ್ದಾಗ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಇದೀಗ ತುಂಬಾ ಖುಷಿಯಾಗುತ್ತಿದೆ. ಅದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ತನ್ನ ಮಗುವಿಗೆ ಈಗ ಎರಡು ತಿಂಗಳು. ಅಮ್ಮ ಮತ್ತು ಗಂಡನ ಸಹಾಯ ಇಲ್ಲದಿದ್ದರೆ ತಾವು ಹೀಗೆ ಇಲ್ಲಿ ಬರಲು ಸಾಧ್ಯವಾಗುತ್ತಿರಲಿಲ್ಲ. ಅಮ್ಮ ಮಗುವನ್ನು ನೋಡಿಕೊಳ್ಳುತ್ತಿರುವ ಕಾರಣ ನಾನು ಷೋಗೆ ಬರಲು ಸಾಧ್ಯವಾಯಿತು ಎಂದಿದ್ದರು. ಇದೇ ವೇಳೆ ಪ್ರತಿ ಎರಡು ಗಂಟೆಗೊಮ್ಮೆ ಮಗುವಿಗೆ ನಾನು ಎದೆಹಾಲು ಕುಡಿಸಬೇಕು. ಕಲರ್ಸ್​ಕನ್ನಡ ವಾಹಿನಿ ನನಗೆ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲದಿದ್ದರೆ ರಿಯಾಲಿಟಿ ಷೋನಲ್ಲಿ ಬರಲು ಆಗುತ್ತಿರಲಿಲ್ಲ ಎಂದಿದ್ದರು. 

ನನ್​ ಕನಸಿನ ಹುಡ್ಗನೇ ಬೇರೆ ಇದ್ದ, ಅವ್ರನ್ನ ಯಾಕೆ ಒಪ್ಪಿಕೊಂಡ್ನೋ ಈಗ್ಲೂ ಗೊತ್ತಾಗ್ತಿಲ್ಲ: ಅದಿತಿ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್