ಚೇತನ್ ಅಹಿಂಸಾ 'ಫೈರ್'ಗೆ ಉಗಿದು ಜನ್ಮ ಜಾಲಾಡಿ ಸಾರಾ ಗೋವಿಂದು ಏನ್ ಹೇಳ್ಬಿಟ್ರು ನೋಡಿ!

By Contributor Asianet  |  First Published Sep 11, 2024, 8:12 PM IST

ಎನೋ ಬಂದ್ಬಿಟ್ವವ್ನೇ, ಏನೋ ಕಿತ್ತಾಕೋ ಥರ ಮಾತಾಡ್ತಾ ಅವ್ನೆ.. ಅದನ್ನ ಸಮಯ ಬಂದಾಗ ನಾವೂ ಮಾತಾಡ್ತೀವಿ.. ಯಾವುದೋ ಹಣಕಾಸಿನ ವ್ಯವಹಾರಕ್ಕೋ ಅಥವಾ ಇನ್ನೇನಕ್ಕೋ ಹೀರೋಯಿನ್‌ ಯಾರೋ ಒಬ್ರು, ಹಂಗೆ ಮಾಡಿದಾರೆ ಹಿಂಗೆ ಹೇಳಿದಾರೆ ಅಂದ್ರೆ..


ಆ ದಿನಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ನಟ, ವಿದೇಶಿ ಪ್ರಜೆ ಚೇತನ್ ಅಹಿಂಸಾ ಅವರಿಗೆ ಖ್ಯಾತ ನಿರ್ಮಾಪಕರು ಹಾಗೂ ಫಿಲಂ ಚೇಂಬರ್‌ನ ಮಾಜಿ ಅಧ್ಯಕ್ಷರಾಗಿರುವ ಸಾರಾ ಗೋವಿಂದ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಫೈರ್ ಸಂಸ್ಥೆ ಹುಟ್ಟುಹಾಕಿ ಸುದ್ದಿಯಾಗಿರುವ ನಟ ಚೇತನ್ ಅಹಿಂಸಾ ಬಗ್ಗೆ ಸಾರಾ ಗೋವಿಂದು ಅವರು ಏನು ಹೇಳಿದ್ದಾರೆ ನೋಡಿ..

ಸಾರಾ ಗೋವಿಂದು 'ಕೇರಳದಲ್ಲಿ ಬಂದಿದೆ ಅನ್ನೋ ಕಾರಣಕ್ಕೆ ಅದನ್ನ ಕನ್ನಡ ಚಿತ್ರರಂಗಕ್ಕೂ ತಂದಿದಾನೆ ಆ ಚೇತನ್. ಮಾಡೋದಕ್ಕೆ ಕೆಲಸ ಇಲ್ಲ, ದೊಡ್ಡ ಹೀರೋ ಆಗೋದಕ್ಕೆ ಅದನ್ನ ಹಚ್ಕೊಂಡವ್ನೆ.. ಎಲ್ಲಾ ಹಚ್ಕೊಂಡಾಯ್ತು, ಈಗ ಇದನ್ನ ಹಚ್ಕೊಂಡಿದಾನೆ. ನಮ್ಮ ಕನ್ನಡ ಚಿತ್ರರಂಗಕ್ಕೆ 90 ವರ್ಷ ಆಗಿದೆ. ಅಂತ ಘಟನೆಗಳು ಇಲ್ಲಿ ನಡೆಯುತ್ತಿದ್ದರೆ ಇಷ್ಟು ವರ್ಷ ಚಿತ್ರರಂಗ ಹೀಗೆ ನಡಿತಾ ಇರ್ಲಿಲ್ಲ.. 

Tap to resize

Latest Videos

undefined

ನಟ ದರ್ಶನ್ ಜಾಮೀನು ಅರ್ಜಿ ಹಾಕಿಲ್ಲ, ಪೆರೋಲ್ ಪಡೆದು ಶೂಟಿಂಗ್ ಮುಗಿಸಲು ಪ್ಲಾನ್ ಮಾಡಿದಾರಾ ಹೇಗೆ?

ಎನೋ ಬಂದ್ಬಿಟ್ವವ್ನೇ, ಏನೋ ಕಿತ್ತಾಕೋ ಥರ ಮಾತಾಡ್ತಾ ಅವ್ನೆ.. ಅದನ್ನ ಸಮಯ ಬಂದಾಗ ನಾವೂ ಮಾತಾಡ್ತೀವಿ.. ಯಾವುದೋ ಹಣಕಾಸಿನ ವ್ಯವಹಾರಕ್ಕೋ ಅಥವಾ ಇನ್ನೇನಕ್ಕೋ ಹೀರೋಯಿನ್‌ ಯಾರೋ ಒಬ್ರು, ಹಂಗೆ ಮಾಡಿದಾರೆ ಹಿಂಗೆ ಹೇಳಿದಾರೆ ಅಂದ್ರೆ ಗತಿ ಏನು? ಇದೆಲ್ಲಾ ಕನ್ನಡ ಚಿತ್ರರಂಗಕ್ಕೆ ಬೇಕಾ? 

ಕನ್ನಡ ಚಿತ್ರರಂಗವನ್ನು ಬಹಳಷ್ಟು ಮಹಾನ್ ಪರುಷರು ಆಳಿ ಹೋಗಿದಾರೆ. ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್‌ ನಾಗ್, ಶಂಕರ್‌ ನಾಗ್, ಅಂಬರೀಷ್ ಹೀಗೆ ಎಂತೆಂಥವರು ಆಳಿ ಹೋಗಿದಾರೆ. ಹೀಗೆಲ್ಲಾ ಇದ್ದಿದ್ರೆ ಚಿತ್ರರಂಗ ಇಷ್ಟು ಬೆಳೆತಾ ಇತ್ತಾ? ಇತ್ತೀಚೆಗೆ ಒಬ್ರು ನಟಿ ಬಂದು ಇದನ್ನು ದೊಡ್ಡ ಇಶ್ಯೂ ಮಾಡ್ತಿದಾರೆ. ಸಮಯ ಬಂದಾಗ ಉತ್ತರ ಕಡ್ತೀವಿ ಅದಕ್ಕೆ..

ಈಗ ಮೀಟೂ, ಫೈರ್ ಅಂತ ಯಾರು ತಲೆ ಮೇಲೆ ಇಟ್ಕೊಂಡು ಓಡಾಡ್ತಾ ಇದಾನೋ, ಆ ಚೇತನ್ ಅನ್ನೋ ನಟಂದು ಚೂರು ಚರಿತ್ರೆ ಹೇಳ್ತೀನಿ ಕೇಳಿ.. ಅವ್ನು ಕಲಾವಿದನಾಗಿ ಬಂದ. ಇಂಡಸ್ಟ್ರಿನಲ್ಲಿ ಉದ್ಧಾರ ಆಗ್ಲಿಲ್ಲ.. ಏನೋ ಮಾಡೋಕೆ ಹೊರಟಿದಾನೆ.. ಎಂಜಿ ರೋಡಲ್ಲಿ ರಾತ್ರಿ ಸುಮಾರು 2 ಗಂಟೆ ರಾತ್ರಿಯಲ್ಲಿ, ನಾಲ್ಕೈದು ಜನ ಹೆಣ್ಣುಮಕ್ಳು ಕುಡಿತಾ ಕೂತಿರ್ತಾರೆ. 

ಅಣ್ಣಾವ್ರಿಗಿತ್ತು ಬಾಲಿವುಡ್ ನಂಟು, ಡಾ ರಾಜ್‌ ಚಿತ್ರಕ್ಕೆ ಕೆಲಸ ಮಾಡಿದ್ರು ಸಲ್ಲೂ ತಂದೆ ಸಲೀಮ್!

ಅಲ್ಲಿ ಪೊಲೀಸ್‌ನವ್ರು ಬಂದು ಆ ಹೆಣ್ಣು ಮಕ್ಕಳನ್ನ ಕಳಿಸೋಕೆ ನೋಡ್ತಾರೆ. ಆದ್ರೆ, ಆ ಹೆಣ್ಣು ಮಕ್ಳು ತುಂಬಾ ಗಲಾಟೆ ಮಾಡಿದ್ರಿಂದ ಅವ್ರನ್ನ ಸ್ಟೇಷನ್‌ಗೆ ಕರ್ಕೊಂಡು ಹೋಗ್ತಾರೆ. ಆಮೇಲೆ ಈ ಚೇತನ್ ಅನ್ನೋ ವ್ಯಕ್ತಿ ಅವ್ರನ್ನ ಬಿಡಿಸಿ, ಆ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಸಸ್ಪೆಂಡ್ ಆಗೋವರೆಗೂ ಬಿಡ್ಲಿಲ್ಲ.. ಆಮೇಲೆ ನಾನು ಗೋಗಿ ಅವ್ರನ್ನ ಮತ್ತೆ ಅದೇ ಪ್ಲೇಸ್‌ಗೆ ಬರೋ ತರ ಮಾಡಿದೀನಿ. ಇದು ಅವ್ನ ಹಿನ್ನೆಲೆ, ಅಂಥವ್ನು ಮೀಟೂ ಬಗ್ಗೆ ಮಾತಾಡ್ತಾನೆ' ಎಂದಿದ್ದಾರೆ ಸಾರಾ ಗೋವಿಂದು. 

click me!