ನಟ ಮೋಹನ್‌ಲಾಲ್‌ ಭೇಟಿಯಾದ 'ಕಾಂತಾರ' ರಿಷಬ್ ಶೆಟ್ಟಿ; ಸಡನ್ ಭೇಟಿ-ಮಾತುಕತೆ ಮರ್ಮವೇನು?

By Shriram Bhat  |  First Published Apr 18, 2024, 4:03 PM IST

ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಲಯಾಳಂ ಲೆಜೆಂಡರಿ ನಟ ಮೋಹನ್‌ಲಾಲ್ ಅವರನ್ನು ಭೇಟಿಯಾಗಿದ್ದಾರೆ. ಕಾಂತಾರ ಸೀಕ್ವೆಲ್ ಶೂಟಿಂಗ್‌ನಲ್ಲಿ ಸದ್ಯ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ ಅವರು ನಟ ಮೋಹನ್‌ಲಾಲ್ ..


ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಲಯಾಳಂ ಲೆಜೆಂಡರಿ ನಟ ಮೋಹನ್‌ಲಾಲ್ ಅವರನ್ನು ಭೇಟಿಯಾಗಿದ್ದಾರೆ. ಕಾಂತಾರ ಸೀಕ್ವೆಲ್ ಶೂಟಿಂಗ್‌ನಲ್ಲಿ ಸದ್ಯ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ ಅವರು ನಟ ಮೋಹನ್‌ಲಾಲ್ ಅವರನ್ನು ಭೇಟಿಯಾಗಿರುವುದು ಚಿತ್ರರಂಗದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಹೇಳಿ ಕೇಳಿ ನಟ ಮೋಹನ್‌ಲಾಲ್ ಅವರು ಮೇರು ನಟ. ಜತೆಗೆ, ರಿಷಬ್ ಶೆಟ್ಟಿಯವರಂತೂ ನಟರಾಗಿರುವುದ ಜತೆಗೆ ಸೂಪರ್ ಹಿಟ್ ಕಾಂತಾರ ಸಿನಿಮಾ ನಿರ್ದೇಶಕರು. ಹೀಗಾಗಿ ಸಹಜವಾಗಿಯೇ ಎಲ್ಲರ ಹುಬ್ಬು ಮೇಲೇರಿದೆ. 

ಮೋಹನ್‌ನಾಲ್ ಅವರನ್ನು ತಾವು ಭೇಟಿಯಾಗಿರುವ ಬಗ್ಗೆ ಸ್ವತಃ ರಿಷಬ್ ಶೆಟ್ಟಿಯವರು ಎಕ್ಸ್‌ನಲ್ಲಿ (Twitter)ಪೋಸ್ಟ್ ಮಾಡಿದ್ದಾರೆ. ಮೋಹನ್‌ಲಾಲ್ ಅವರನ್ನು ತಾವು ಭೇಟಿಯಾಗಿರುವ ಫೋಟೋ ಕೂಡ ಪೋಸ್ಟ್ ಮಾಡಿರುವ ರಿಷಬ್, ತಾವು ಅವರನ್ನು ಭೇಟಿಯಾಗಿದ್ದು ಖುಷಿಕೊಟ್ಟಿದೆ ಎಂದಿದ್ದಾರೆ. 'An honor and a pleasure to meet the legendary @Mohanlal sir!' ಎಂದು ಟೆಕ್ಸ್ಟ್‌ ಹಾಕಿದ್ದಾರೆ. ಈ ಮೂಲಕ ತಾವು ಲೆಜೆಂಡರಿ ನಟ ಮೋಹನ್‌ಲಾಲ್ ಅವರನ್ನು ಮೀಟ್ ಮಾಡಿದ್ದನ್ನು ಜಗಜ್ಜಾಹೀರು ಮಾಡಿದ್ದಾರೆ. 

Tap to resize

Latest Videos

'ಫಾರೆಸ್ಟ್' ಕಥೆ ಹೇಳೋದಿಕ್ಕೆ ಬಂದರು ಬ್ರಹ್ಮಚಾರಿ ಡೈರೆಕ್ಟರ್, ಚಂದ್ರಮೋಹನ್ ಸಿನಿಮಾದಲ್ಲಿ‌ ಯಾರೆಲ್ಲ ಇದಾರೆ ನೋಡಿ!

ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಅದರಲ್ಲಿ ತಾವು ನಟಿಸುತ್ತಿಲ್ಲ ಎಂದು ಕಾಂತಾರದ ಸೀಕ್ವೆಲ್‌ನಲ್ಲಿ ನಟಿಸಿ ಜನಮೆಚ್ಚುಗೆ ಪಡೆದಿರುವ ನಟಿ ಸಪ್ತಮಿ ಗೌಡ ತಿಳಿಸಿದ್ದಾರೆ. ಅದಕ್ಕೆ ಸೂಕ್ತ ಕಾರಣವನ್ನೂ ಕೊಟ್ಟಿರುವ ಅವರು, 'ನನ್ನ ಪಾತ್ರ ಸೀಕ್ವೆಲ್‌ನಲ್ಲೇ ಮುಗಿದುಹೋಗಿದೆ. ಹೀಗಾಗಿ ಸೀಕ್ವೆಲ್‌ಗೆ ಬೇರೆ ನಟಿ ಬಂದಿದ್ದಾರೆ' ಎಂದಿದ್ದಾರೆ. ಈ ಮೂಲಕ ಸಪ್ತಮಿ ಗೌಡ ಬದಲು ಕಾಂತಾರ ಸಿನಿಮಾ ಸೀಕ್ವೆಲ್‌ಗೆ ಬೇರೆ ನಟಿ ಆಯ್ಕೆಯಾಗಿದೆ ಎಂಬ ಗುಟ್ಟು ರಟ್ಟಾಗಿದೆ. ಅವರು ಯಾರು ಎಂಬ ಸೀಕ್ರೆಟ್‌ ಮಾತ್ರ ಬಯಲಾಗಿಲ್ಲ.

ಸ್ಕ್ರೀನ್ ಮೇಲೆ ಮೆರೆಯಲು ಸಜ್ಜಾಗಿದೆ 'ನಾಲ್ಕನೇ ಆಯಾಮ', ಯುವ ಪ್ರತಿಭೆ ಗೌತಮ್ ಜೊತೆ ರಚನಾ ಯಾನ!

ಅಂದಹಾಗೆ, ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತಾರ ಚಿತ್ರವು ಕೇವಲ 15-16 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿ 500 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ. ಕನ್ನಡ ಚಿತ್ರರಂಗದ ಹಲವು ದಾಖಲೆಗಳನ್ನು ಧೂಳೀಪಟ ಮಾಡಿರುವ ಕಾಂತಾರ ಚಿತ್ರವು ಕೆಜಿಎಫ್ ಸಿನಿಮಾದಂತೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಕಾಂತಾರ ಮೂಲಕ ರಿಷಬ್ ಶೆಟ್ಟಿಯವರು ಇಂಟರ್‌ನ್ಯಾಷನಲ್ ಲೆವಲ್‌ನಲ್ಲಿ ಮಿಂಚಿದ್ದಾರೆ. 

An honor and a pleasure to meet the legendary sir! 🌟 pic.twitter.com/4Qqd60aNJJ

— Rishab Shetty (@shetty_rishab)

 

click me!