ಚಂದ್ರ ಮೋಹನ್ ಹೊಸ ಪ್ರಯತ್ನಕ್ಕೆ ಫಾರೆಸ್ಟ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಟೈಟಲ್ ಹೇಳುವಂತೆ ಫಾರೆಸ್ಟ್ ಅಡ್ವೆಂಚರ್ ಕಾಮಿಡಿ ಸಿನಿಮಾ. ಚಿತ್ರ 80%ರಷ್ಟು ಭಾಗ ಕಾಡಿನಲ್ಲಿಯೇ ಸಾಗುತ್ತದೆ. ಈ ಕಾರಣಕ್ಕೆ ಕೂಡ 'ಫಾರೆಸ್ಟ್' ಎಂಬ ಟೈಟಲ್..
ಕನ್ನಡದಲ್ಲಿ ಸದ್ದಿಲ್ಲದೇ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ ರೂಪಗೊಳ್ಳುತ್ತಿದೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಕಾಂಬೋದಲ್ಲಿ ಹೊಸ ಚಿತ್ರವೊಂದು ತಯಾರಾಗುತ್ತಿದೆ. ಈ ನಾಲ್ಕು ಜನ ತಾರೆಯರನ್ನು ಒಂದೇ ಫ್ರೇಮ್ ಗೆ ತಂದು ಆಕ್ಷನ್ ಕಟ್ ಹೇಳುತ್ತಿರುವುದು ಡಬ್ಬಲ್ ಇಂಜಿನ್, ಬ್ರಹ್ಮಚಾರಿ ಸಿನಿಮಾಗಳ ಸಾರಥಿ ಚಂದ್ರ ಮೋಹನ್(Chandra Mohan). ಈ ಚಿತ್ರದ ಹೆಸರು ಫಾರೆಸ್ಟ್ (Forest)
ಚಂದ್ರ ಮೋಹನ್ ಹೊಸ ಪ್ರಯತ್ನಕ್ಕೆ ಫಾರೆಸ್ಟ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಟೈಟಲ್ ಹೇಳುವಂತೆ ಫಾರೆಸ್ಟ್ ಅಡ್ವೆಂಚರ್ ಕಾಮಿಡಿ ಸಿನಿಮಾ. ಚಿತ್ರ 80%ರಷ್ಟು ಭಾಗ ಕಾಡಿನಲ್ಲಿಯೇ ಸಾಗುತ್ತದೆ. ಈ ಕಾರಣಕ್ಕೆ ಕೂಡ 'ಫಾರೆಸ್ಟ್' ಎಂಬ ಟೈಟಲ್ ಈ ಸಿನಿಮಾಗೆ ಸಖತ್ ಸ್ಯೂಟ್ ಆಗುತ್ತಿದೆ. ಮುಖ್ಯ ಕಲಾವಿದರನ್ನುಆಯ್ಕೆ ಮಾಡಿಕೊಂಡಿರುವ ಚಿತ್ರತಂಡ ಇನ್ನುಳಿದ ಕಲಾವಿದರ ಆಯ್ಕೆಯ ಪ್ರಕ್ರಿಯೆ ಸದ್ಯದಲ್ಲೇ ಪೂರ್ತಿಗೊಳಿಸಲಿದೆ ಎನ್ನಲಾಗಿದೆ.
ಸ್ಕ್ರೀನ್ ಮೇಲೆ ಮೆರೆಯಲು ಸಜ್ಜಾಗಿದೆ 'ನಾಲ್ಕನೇ ಆಯಾಮ', ಯುವ ಪ್ರತಿಭೆ ಗೌತಮ್ ಜೊತೆ ರಚನಾ ಯಾನ!
ಚಿಕ್ಕಣ್ಣ, ಅನೀಶ್ , ಗುರುನಂದನ್ ಹಾಗೂ ರಂಗಾಯಣ ರಘು ನಾಲ್ಕು ತಾರೆಯರು ಫಾರೆಸ್ಟ್ ಸಿನಿಮಾದ ಆಧಾರ ಸ್ತಂಭಗಳು. ಫನ್ ಜೊತೆಗೆ ಥ್ರಿಲ್ಲಿಂಗ್ ರೈಡ್ ಅನುಭವ ನೀಡುವ ಫಾರೆಸ್ಟ್ ಚಿತ್ರಕ್ಕೆ ಎನ್ ಎಂಕೆ ಸಿನಿಮಾಸ್ ಬ್ಯಾನರ್ ನಡಿ ಕಾಂತರಾಜು ಬಂಡವಾಳ ಹೂಡುತ್ತಿದ್ದಾರೆ. ಅಂದಹಾಗೇ ಕಾಂತರಾಜು ಅವರಿಗಿದು ಚೊಚ್ಚಲ ಚಿತ್ರ. ಸಿನಿಮಾರಂಗದ ಮೇಲಿನ ಆಸಕ್ತಿಯಿಂದ ಫಾರೆಸ್ಟ್ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ಚುನಾವಣೆಯಲ್ಲಿ ಠೇವಣಿ ಕಳಕೊಂಡ ದ್ವಾರಕೀಶ್‌ರನ್ನು 'ಆಪ್ತಮಿತ್ರ' ವಿಷ್ಣುವರ್ಧನ್ ಗೆಲ್ಲಿಸಿದ್ರು!
ಫಾರೆಸ್ಟ್ ಸಿನಿಮಾಗೆ ವಿ. ರವಿಶಂಕರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಧರ್ಮವೀರ್-ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಸದ್ಯ ಟೈಟಲ್ ರಿವೀಲ್ ಮಾಡಿರುವ ಚಿತ್ರತಂಡವೀಗ ಮುಂದಿನ ದಿನಗಳಲ್ಲಿ ಉಳಿದ ತಾರಾಬಳಗದ ಮಾಹಿತಿ ನೀಡಲಿದೆ. ಅಂದಹಾಗೆ, ಈ ಚಿತ್ರದಲ್ಲಿ ಕಾಡಿನ ಸೌಂದರ್ಯ, ಪ್ರಕೃತಿ ಚೆಲುವು, ಕಾಡಿನ ಸಂಪತ್ತುಗಳು ಮುಂತಾದವುಗಳನ್ನು ಹೈಲೈಟ್ ಮಾಡಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಜತೆಗೆ, ಕಾಡಿನ ಕಳ್ಳರ ಬಗ್ಗೆಯೂ ಬೆಳಕು ಚೆಲ್ಲಲಾಗುವುದು ಎನ್ನಲಾಗಿದೆ.
ಡಾ ರಾಜ್‌ಕುಮಾರ್ ನಟನೆಯ 'ಮೇಯರ್ ಮುತ್ತಣ್ಣ' ನಿರ್ಮಿಸಿದಾಗ ದ್ವಾರಕೀಶ್ ವಯಸ್ಸೆಷ್ಟು?