ದೊಡ್ಮನೆಯ 'ಯುವ' ಸಿನಿಮಾಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದ ಗುಟ್ಟು ರಟ್ಟಾಯ್ತು!

By Shriram Bhat  |  First Published Apr 8, 2024, 2:43 PM IST

ಯುವ ಚಿತ್ರದ ಬಳಿಕ ನಟಿ ಸಪ್ತಮಿ ಗೌಡ ಯಾವ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಯ ಮೇಲೆ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಕಾಂತಾರ ಬಳಿಕ ನಟಿ ಸಪ್ತಮಿ ಗೌಡ ಅವರು ನಟಿಸಿರುವ ಯಾವುದೇ ಚಿತ್ರವೂ ಕಾಂತಾರವನ್ನು ಮೀರಿಸುವ ಯಾವುದೇ ಗಳಿಕೆ ಮಾಡಲಿಲ್ಲ.


ಕಾಂತಾರ ಚೆಲುವೆ ಸಪ್ತಮಿ ಗೌಡ ಸಂದರ್ಶನವೊಂದರಲ್ಲಿ ಮಾತನಾಡುತ್ತ ತಾವು ಯುವ ಸಿನಿಮಾಗೆ ಆಯ್ಕೆಯಾಗಿದ್ದು ಹೇಗೆ ಎಂದು ಹೇಳಿದ್ದಾರೆ. ಈ ಮಾತುಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ ಅವರು ಅಭಿಷೇಕ್ ಅಂಬರೀಷ್ ನಟನೆಯ 'ಕಾಳಿ' ಚಿತ್ರದಲ್ಲಿ ನಟಿಸಿದ್ದಾರೆ. ಆ ಬಳಿಕ ಅವರು ಯುವ ರಾಜ್‌ಕುಮಾರ್ ನಟನೆಯ 'ಯುವ' ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಆ ಚಿತ್ರಕ್ಕೆ ನಾಯಕಿಯಾಗಿದ್ದು ಹೇಗೆ ಎಂಬ ಸಂದರ್ಶಕಿಯ ಪ್ರಶ್ನೆಗೆ ನಟಿ ಸಪ್ತಮಿ ಗೌಡ ಉತ್ತರ ನೀಡಿದ್ದಾರೆ. 

'ಸಿಸಿಎಲ್‌ಗೆ  ಬ್ರಾಂಡ್‌ ಅಂಬಾಸಡರ್ ಆಗಿದ್ದೆ, ಕರ್ನಾಟಕ ಬುಲ್ಡೋಜರ್ಸ್‌ಗೆ. ನಾನು, ನನ್ನಮ್ಮ ಚಿನ್ನಾಸ್ವಾಮಿ ಸ್ಟೇಡಿಯಂಗೆ ಹೊರಟಿದ್ವಿ. ಆನ್‌ ದಿ ವೇ ಕಾಲ್ ಬಂತು ಯೋಗಿ ಸರ್‌ದು 'ನೀನು ಎಷ್ಟು ಹೈಟ್ ಇದೀಯ' ಅಂತ ಕೇಳಿದ್ರು.. ಸರ್,ನಾನು 5.6 ಅಂಡ್ ಹಾಫ್ ಆ ತರ ಇರ್ಬಹುದು' ಅಂದೆ. ಹೌದಾ, ಆಯ್ತು ಅಂತ ಇಟ್ರು ಸರ್.. ಮತ್ತೆ ಕಾಲ್ ಮಾಡಿದ್ರು, ಒಂದು 2 ಮಿನಿಟ್ಸ್‌ ಹೊಂಬಾಳೆಗೆ ಬರೋಕಾಗುತ್ತ ಅಂದ್ರು.. ಹು ಅಂತ ಹೋದ್ವಿ.. ಸಂತೋಷ್ ಸರ್ ಬಂದ್ರು, ಹಾಯ್, ಯುವ ಅಂತ ಒಂದು ಸಿನಿಮಾ ಮಾಡ್ತಾ ಇದೀವಿ, ಲುಕ್ ಟೆಸ್ಟ್ ಮಾಡ್ಬೇಕು ಅಂದ್ರು, ನೀವು ಒಬ್ರೂ ಒಟ್ಟಿಗೆ ಹೇಗ್ ಕಾಣ್ತೀರಾ ನೋಡ್ಬೇಕು ಅಂದ್ರು.. ಲುಕ್ ಟೆಸ್ಟ್ ಮಾಡಿದ್ರು... 

Tap to resize

Latest Videos

ಹೊಸಬರ 'ಎಲ್ಟು ಮುತ್ತಾ' ಪೋಸ್ಟರ್ ರಿಲೀಸ್, ಸಾಥ್ ಕೊಟ್ಟ ಶೈಲಜಾ ವಿಜಯ್ ಕಿರಗಂದೂರು ಟೀಮ್!

ಅಲ್ಲಿಂದ ನಾನು-ಅಮ್ಮ ಚಿನ್ನಾಸ್ವಾಮಿ ಸ್ಟೇಡಿಯಂಗೆ ಬಂದ್ವಿ. ಮ್ಯಾಚ್ ಮುಗೀತು, ಕರ್ನಾಟಕ ಬುಲ್ಡೋಜರ್ಸ್‌ ಗೆದ್ತು, ನಾನು ಮನೆಗೆ ಬಂದು ಮಲಗಿದ್ದೆ. 
ಬೆಳಿಗ್ಗೆ ಯೋಗಿ ಸರ್ ಕಾಲ್ ಬಂತು, ನಿಂದೊಂದು ಫೋಟೋ ಕಳಿಸಮ್ಮ ಅಂದ್ರು.. ಸರ್, ಯಾಕ್ ಸರ್ ಅಂದೆ.. ಅಯ್ಯೋ ಅನೌನ್ಸ್‌ಮೆಂಟ್ ಮಾಡ್ಬೇಕು, ಸೆಲೆಕ್ಟ್‌ ಆಗ್ಬೇಕು ಅಂದ್ರು, ನಾನು ಸರ್ ಆಯ್ತು ಅಂತ ಫೋಟೋ ಕಳಿಸಿದೆ.. ಹೀಗೆ ಯುವ ಚಿತ್ರಕ್ಕೆ ಸೆಲೆಕ್ಟ್ ಆದೆ' ಎಂದಿದ್ದಾರೆ ನಟಿ ಸಪ್ತಮಿ ಗೌಡ. 

ಸದ್ಯದಲ್ಲೇ ತಲೈವಾ-ಬಿಗ್‌ ಬಿ ಜೋಡಿ ಕಮಾಲ್‌; ಬಾಕ್ಸಾಫೀಸ್ ಬೇಟೆಗೆ 'ವೆಟ್ಟೈಯಾನ್' ಭರ್ಜರಿ ಎಂಟ್ರಿ!

ಯುವ ಚಿತ್ರದ ಬಳಿಕ ನಟಿ ಸಪ್ತಮಿ ಗೌಡ ಯಾವ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಯ ಮೇಲೆ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಕಾಂತಾರ ಬಳಿಕ ನಟಿ ಸಪ್ತಮಿ ಗೌಡ ಅವರು ನಟಿಸಿರುವ ಯಾವುದೇ ಚಿತ್ರವೂ ಕಾಂತಾರವನ್ನು ಮೀರಿಸುವ ಯಾವುದೇ ಗಳಿಕೆ ಮಾಡಲಿಲ್ಲ. ಹೀಗಾಗಿ ನಟಿ ಸಪ್ತಮಿ ಗೌಡ ಅವರು ಸದ್ಯಕ್ಕೆ ಕಾಂತಾರ ಖ್ಯಾತಿಯಿಂದಲೇ ವೃತ್ತಿಜೀವನ ಮುಂದುವರೆಸುತ್ತಿದ್ದಾರೆ. 'ಕಾಂತಾರ 2' ಶೂಟಿಂಗ್ ಕೂಡ ನಡೆಯುತ್ತಿದೆ. ಸಪ್ತಮಿ ಗೌಡ ಫ್ಯಾನ್ಸ್ ಅವರನ್ನು ಮತ್ತೆ ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. 

ನೆಪೋಟಿಸಂ ಅನುಕೂಲತೆಗಳನ್ನು ಒಪ್ಪಿಕೊಂಡ್ರೆ ಚರ್ಚೆಗಳು ನಿಲ್ಲುತ್ತವೆ; ಹೇಳೇ ಬಿಟ್ರು ಹಿತಾ ಚಂದ್ರಶೇಖರ್!

click me!