ಯಶ್‌- ರಾಧಿಕಾ ದಂಪತಿ ಚಿತ್ರರಂಗಕ್ಕೆ ಬಂದು 12 ವರ್ಷ;ಅಭಿಮಾನಿಗಳ ಸಂಭ್ರಮ ಜೋರು

Kannadaprabha News   | Asianet News
Published : Jul 20, 2020, 03:42 PM IST
ಯಶ್‌- ರಾಧಿಕಾ ದಂಪತಿ ಚಿತ್ರರಂಗಕ್ಕೆ ಬಂದು 12 ವರ್ಷ;ಅಭಿಮಾನಿಗಳ ಸಂಭ್ರಮ ಜೋರು

ಸಾರಾಂಶ

ನಟ ಯಶ್‌ ಹಾಗೂ ನಟಿ ರಾಧಿಕಾ ಪಂಡಿತ್‌ ದಂಪತಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಆಗಿ 12 ವರ್ಷಗಳ ಸಂಭ್ರಮ. ರಾಕಿಂಗ್‌ ಸ್ಟಾರ್‌ ದಂಪತಿಯ ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ಅವರ ಅಭಿಮಾನಿಗಳು. ಅಭಿಮಾನಿಗಳ ಈ ಅದ್ದೂರಿತನಕ್ಕೆ ವೇದಿಕೆ ಆಗಿರುವುದು ಸೋಷಿಯಲ್‌ ಮೀಡಿಯಾಗಳು.

ಶಶಾಂಕ್‌ ನಿರ್ದೇಶನದ ಮೊಗ್ಗಿನ ಮನಸು ಸಿನಿಮಾ ತೆರೆ ಕಂಡಿದ್ದು 2008 ಜುಲೈ 18. ಈ ಚಿತ್ರದಲ್ಲಿ ರಾಧಿಕಾ ಪಂಡಿತ್‌ ಹಾಗೂ ಯಶ್‌ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ತೆರೆಕಂಡು ಇದೇ ಜು.18ಕ್ಕೆ 12 ವರ್ಷ. ಇದೇ ರಾಕಿಭಾಯ್‌ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ನಿಜ ಜೀವನದಲ್ಲೂ ಜೋಡಿಯಾಗಿರುವ ಯಶ್‌ ಹಾಗೂ ರಾಧಿಕಾ ಪಂಡಿತ್‌ ಒಂದೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು 12 ವರ್ಷಗಳನ್ನು ಕಳೆದಿದ್ದಾರೆ ಎಂಬುದು ವಿಶೇಷ.

ನಾಗೇಂದ್ರ ಅರಸ್‌ ನಿರ್ದೇಶನದ ರಾಕಿ ಚಿತ್ರದ ಮೂಲಕ ಸೋಲೋ ಹೀರೋ ಆದ ಯಶ್‌ ಕೆಜಿಎಫ್‌ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ನಟ ಆಗಿದ್ದಾರೆ. ಸದ್ಯ ಕೆಜಿಎಫ್‌ 2 ನಲ್ಲಿ ಬ್ಯುಸಿ ಆಗಿರುವ ಯಶ್‌, ಅಧಿಕೃತವಾಗಿ ಒಪ್ಪಿಕೊಂಡಿರುವ ಮತ್ತೊಂದು ಸಿನಿಮಾ ಮಫ್ತಿ ನರ್ತನ್‌ ನಿರ್ದೇಶನದ ಚಿತ್ರ. ಇದರ ನಡುವೆ ಕಿರಾತಕ-2 ಹೆಸರಿನ ಚಿತ್ರಕ್ಕೂ ಚಾಲನೆ ಕೊಟ್ಟಿದ್ದಾರೆ. 12 ವರ್ಷ ಯಶ್‌ ಬಾಸ್‌ ಎನ್ನುವ ಹೆಸರಿನಲ್ಲಿ ಅವರ ಅಭಿಮಾನಿಗಳು ಶುರು ಮಾಡಿರುವ ಅಭಿಮಾನದ ಅಭಿಯಾನ ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟುಸದ್ದು ಮಾಡುತ್ತಿದೆ.

ಈ ಸೆಲೆಬ್ರಿಟಿಗಳು ರಿಯಲ್‌ ಲೈಫ್‌ನಲ್ಲೂ ಸಖತ್ ರೊಮ್ಯಾಂಟಿಕ್ 

12 ವರ್ಷ, 17 ಸಿನಿಮಾ, 17 ಮಂದಿ ನಿರ್ದೇಶಕರು, 3 ಬ್ಲಾಕ್‌ ಬಾಸ್ಟರ್‌ ಹಿಟ್‌ ಚಿತ್ರಗಳನ್ನು ಕೊಟ್ಟತಮ್ಮ ನೆಚ್ಚಿನ ನಟನ ಸೆಲ್‌್ಫ ಮೇಡ್‌ ಸ್ಟಾರ್‌ಡಮ್‌ಗೆ ಫಿದಾ ಆಗಿದ್ದಾರೆ. ಯಶ್‌ ಯಾವ ಶಿಫಾರಸ್ಸು, ಗಾಡ್‌ ಫಾದರ್‌ ಇಲ್ಲದೆ ಚಿತ್ರರಂಗಕ್ಕೆ ಬಂದು 12 ವರ್ಷಕ್ಕೇ ಪ್ಯಾನ್‌ ಇಂಡಿಯಾ ಸ್ಟಾರ್‌ ಆದವರು. ವಿಜಯ್‌ ಸೇತುಪತಿ ಹೇಳಿದಂತೆ ನಮ್ಮತನವೇ ನಮಗೆ ಸ್ಫೂರ್ತಿಯಾದರೆ ಯಶಸ್ಸು ಹೇಗಿರುತ್ತದೆ ಎಂಬುದಕ್ಕೆ ಯಶ್‌ ಅವರ ಈ 12 ವರ್ಷಗಳ ಪಯಣ, ಈಗಿನ ಯಶಸ್ಸೇ ನೇರ ಸಾಕ್ಷಿ.

12 ವರ್ಷದ ಸಿನಿ ಜರ್ನಿ: ತೆರೆ ಮೇಲೆ ಬರಲು ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರೆಡಿ!

ಇನ್ನೂ ನಟಿ ರಾಧಿಕಾ ಪಂಡಿತ್‌ ಕೂಡ ಸಹಜ ನಟನೆಯ ಮೂಲಕವೇ ಗಮನ ಸೆಳೆದವರು. ಯಾವುದೇ ಪಾತ್ರವನ್ನು ಕಣ್ಣಲ್ಲೇ ನಿಭಾಯಿಸುವ ಶಕ್ತಿ ಮತ್ತು ಪ್ರತಿಭೆ ಹೊಂದಿರುವ ಅಪರೂಪದ ನಟಿ ರಾಧಿಕಾ ಪಂಡಿತ್‌. ಯಶ್‌ ಅವರ ಯಶಸ್ಸಿನ ಭಾಗವಾಗಿಯೇ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ನಟಿ, ರಾಧಿಕಾ ಪಂಡಿತ್‌. ಯಶ್‌ ರಂಗಭೂಮಿಂದ ಕಿರುತೆರೆಗೆ, ಅಲ್ಲಿಂದ ಹಿರಿತೆರೆಗೆ ಬಂದರೆ, ನಟಿ ರಾಧಿಕಾ ಪಂಡಿತ್‌ ಅವರು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡ ಹೊತ್ತಿನಲ್ಲೇ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟವರು. ಈ ಇಬ್ಬರನ್ನು ಬೆಳ್ಳಿತೆರೆ ಸಿನಿಮಾ ಪರದೆ ಮೇಲೆ ದರ್ಶನ ಮಾಡಿಸಿದ್ದು ಅದೇ ಮೊಗ್ಗಿನ ಮನಸು. ಆ ಚಿತ್ರಕ್ಕೂ 12 ವರ್ಷಗಳ ವಯಸ್ಸು, ಈ ಜೋಡಿಗೂ 12 ವರ್ಷಗಳ ಹುರುಪು ಮತ್ತು ಉತ್ಸಾಹ. ಇದೇ ಅವರ ಅಭಿಮಾನಿಗಳಿಗೆ ಹೊಸ ಕಿಕ್‌.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!