ವೆಬ್‌ ಸೀರಿಸ್‌ ಆಯ್ತು ವೀರಪ್ಪನ್‌ ಕಥೆ; ಇದು ನಟ ಕಿಶೋರ್‌ 'ಅಟ್ಟಹಾಸ'!

By Suvarna NewsFirst Published Jul 20, 2020, 1:38 PM IST
Highlights

ವೀರಪ್ಪನ್ ಜೀವನ ಚರಿತ್ರೆಯ ವೆಬ್‌ ಸೀರಿಸ್‌ನಲ್ಲಿ ಕನ್ನಡ ನಟ ಕಿಶೋರ್‌. ಮತ್ತೆ ನೋಡಬಹುದು ಅಟ್ಟಹಾಸ ನಿರ್ದೇಶಕನ ಕೈ  ಚಳಕ....

ಕರ್ನಾಟಕ, ಕೇರಳ ಮತ್ತು ತಮಿಳು ನಾಡು ಮೂರು ರಾಜ್ಯದ ಪೊಲೀಸ್ ಇಲಾಖೆಗಳ ನಿದ್ದೆಗೆಡಿಸಿದ ಕಾಡಿನ ರಾಜ ವೀರಪ್ಪನ್ ಬಯೋಪಿಕ್ ಅನ್ನು ವೆಬ್‌ ಸೀರಿಸ್‌ ಆಗಿ ತರಲು ನಟ ಕಿಶೋರ್ ಮತ್ತು ನಿರ್ದೇಶಕ ಎಎಂಆರ್‌ ರಮೇಶ್‌ ಒಂದಾಗಿ ಕೈ ಜೊಡಿಸಿದ್ದಾರೆ.

ಸೀರಿಸ್‌ನಲ್ಲಿ ಏನಿರುತ್ತದೆ?:
ನಿರ್ದೇಶಕ ಎ ಎಂ ಆರ್‌ ರಮೇಶ್‌ ವೆಬ್‌ ಸೀರಿಸ್‌ ಬಗ್ಗೆ ಬಹಿರಂಗಗೊಸಿದ್ದಾರೆ. ಸೀರಿಸನ್‌ನಲ್ಲಿ ವೀರಪ್ಪನ್ ಬಾಲ್ಯ, ಆತ ಕಳ್ಳತನಕ್ಕೆ ಎಂಟ್ರಿಯಾದ ಘಟನೆ, ಕ್ರೌರ್ಯ ರೂಪ ಎಲ್ಲವೂ ಸುದೀರ್ಘವಾಗಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರಂತೆ. 

ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ 'ಅಟ್ಟಹಾಸ' ಚಿತ್ರದ ಕೆಲವೊಂದು ದೃಶ್ಯಗಳನ್ನು ಬಳಸಿಕೊಳ್ಳಲಾಗುತ್ತದೆ, ಎಂದೂ ಹೇಳಿದ್ದಾರೆ. ಇನ್ನು ಚಿತ್ರದ ಬಹು ಮುಖ್ಯ ಭಾಗವಾಗಿರುವ ಹಿರಿಯ ಪೊಲೀಸ್‌ ಅಧಿಕಾರಿ ಭಾಗದ ಚಿತ್ರೀಕರಣವನ್ನು ಆಗಸ್ಟ್‌ನಲ್ಲಿ ಆರಂಭಿಸಲಿದ್ದಾರೆ.

ಕ್ಷಮಿಸಿಬಿಡಿ ರಾಜಣ್ಣ,,, 18 ವರ್ಷದ ಹಿಂದೆ ನಿಮ್ಮನ್ನು ಅಪಹರಣ ಮಾಡಿದ್ದೇ ಸುಳ್ಳು!?

ವೆಬ್‌ ಸೀರಿಸ್‌ನಲ್ಲೂ ನಟ ಕಿಶೋನ್‌ ನಟಿಸಲಿದ್ದು, ಅವರ ಜೊತೆ ಬಾಲಿವುಡ್‌ ನಟರೂ ಕಾಣಿಸಿಕೊಳ್ಳಲ್ಲಿದ್ದಾರಂತೆ. ಸದ್ಯದಲ್ಲೇ ಇನ್ನಷ್ಟು ಮಾಹಿತಿಯನ್ನು ರಿವೀಲ್ ಮಾಡುವುದಾಗಿ ತಿಳಿಸಿದ್ದಾರೆ.

ಸಿನಿಮಾ 3 ಗಂಟೆಗಳ ಅವಧಿಯಾಗಿರುವ ಕಾರಣ ಎಲ್ಲಾ ವಿಚಾರವನ್ನು ಸಂಪೂರ್ಣವಾಗಿ ಹೇಳಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ವೆಬ್‌ ಸೀರಿಸ್‌ 10 ಗಂಟೆಗಳ ಅವಧಿಯಾಗಿದ್ದು 12 ಎಪಿಸೋಡ್‌ಗಳಾಗಿ ಪ್ರಸಾರವಾಗಲಿದೆ.  ಆಗಸ್ಟ್‌- ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ನಡೆಯಲಿದ್ದು, ಡಿಸೆಂಬರ್‌ನಲ್ಲಿ ರಿಲೀಸ್‌ ಮಾಡುವುದಾಗಿ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ವೀರಪ್ಪನ್ ಚಿತ್ರ ಸಾಕಷ್ಟು ಯಶಸ್ಸು ಕಂಡಿದ್ದು, ವೀರಪ್ಪನ್ ಎಂಬ ಕಾಡುಗಳ್ಳ, ದಂತಚೋನ ಮತ್ತೊಂದು ಮುಖವನ್ನೂ ತೋರಿಸಲಾಗಿತ್ತು.

click me!