
ಅನಾರೋಗ್ಯಕ್ಕೆ ತುತ್ತಾಗಿದ್ದ ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಕಳೆದ ವರ್ಷ ರವಿಪ್ರಕಾಶ್ ಎಂಬಾತನಿಂದ ಹಣ ಸಹಾಯ ಪಡೆದುಕೊಂಡಿದ್ದರು ಆನಂತರ ಹಣಕಾಸಿನ ನೆರವು ನೀಡುವ ನೆಪದಲ್ಲಿ ಕಿರುಕುಳ ನೀಡಿರುವ ಆರೋಪದ ಮೇಲೆ ದೂರು ದಾಖಲಾಗಿತ್ತು.
2019 ಮಾರ್ಚ್‌ನಲ್ಲಿ ಬೆಂಗಳೂರಿನ ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಘಟನೆಯ ಸಂಬಂಧ ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ಈಗ ಹೊಸ ಟ್ವಿಸ್ಟ್ ನೀಡಿದ್ದಾರೆ.
ಫೋನ್ ಕಾಲ್‌ರೆಕಾರ್ಡ್:
ನಟಿ ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ರವಿಪ್ರಕಾಶ್ ಎಂಬುವವರಿಗೆ ಕರೆ ಮಾಡಿ ಈ ಹಿಂದೆ 1 ಲಕ್ಷ ಹಣ ಸಹಾಯ ಪಡೆದಿದ್ದು ಕಂತಿನ ರೂಪದಲ್ಲಿ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮೇಲೆ ಹೇರಲಾಗಿದ್ದ ಕಿರುಕುಳ ಆರೋಪವನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದಾರೆ. ರವಿ ಪ್ರಕಾಶ್ ಅವರನ್ನು ಕ್ಷಮಿಸಿ ಯಾವುದೇ ರೀತಿಯ ಕೇಸ್ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಜಯಲಕ್ಷ್ಮೀ ಕಿರುಕುಳ ಕೇಸ್: ರವಿ ಪ್ರಕಾಶ್ ಸ್ಟಷ್ಟನೆ
ಏನಾಗಿತ್ತು:
ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ವಿಜಯಲಕ್ಷ್ಮಿ ಬಳಲುತ್ತಿದ್ದು ಆರ್ಥಿಕ ನೆರವುಬೇಕೆಂದು ಮಾಧ್ಯಮಗಳಲ್ಲಿ ಮಾತನಾಡಿದ್ದರು. ಅನೇಕ ಸಿನಿಮಾಗಳಲ್ಲಿ ಮಿಂಚಿರುವ ರವಿಪ್ರಕಾಶ್ ಈ ಸಮಯದಲ್ಲಿ 1 ಲಕ್ಷ ರೂ ಹಣ ನೀಡಿ ಸಹಾಯ ಮಾಡಿದ್ದರು. ಆ ನಂತರ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು ಆದರೆ ಇದನ್ನು ನೆಗೆಟಿವ್ ರೀತಿಯಲ್ಲಿ ತೆಗೆದುಕೊಂಡ ನಟ ವಿಜಯಲಕ್ಷ್ಮೀ ಬೆಂಗಳೂರಿನ ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಎಂದು ಆರೋಪ ಮಾಡಿ ದೂರು ದಾಖಲಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.